ಸಾರ್ವಜನಿಕ ಗಣೇಶೋತ್ಸದ ವಿಸರ್ಜನೆಯ ವ್ಯವಸ್ಥೆಯನ್ನು ಆದರ್ಶ ರೀತಿಯಲ್ಲಿ ಮಾಡಲು ಮನವಿ |

August 26, 2022
9:56 PM

ಗಣೇಶ ಚತುರ್ಥಿಯ ವೇಳೆ ಸಾರ್ವಜನಿಕ ಗಣೇಶೋತ್ಸವವನ್ನು  ಆಚರಿಸಲಾಗುತ್ತದೆ.  ಗಣೇಶನ ವಿಸರ್ಜನೆಯ ವಿಷಯ ಬಂದಾಗ,  ಗಣೇಶ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕೆಂದು ಪುತ್ತೂರಿನ ಸಹಾಯಕ ಕಮೀಶನರ್‌ ಅವರಿಗೆ  ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.

Advertisement
Advertisement
Advertisement

ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ. ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ  ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ. ಸರ್ಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು. ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರ್ಕಾರದ ವತಿಯಿಂದ ಅನುದಾನ ನೀಡಬೇಕು  ಎಂದು  ಮನವಿಯಲ್ಲಿ ಆಗ್ರಹಿಸಲಾಯಿತು.

Advertisement

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ, ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆಯನ್ನು ಆದರ್ಶ ರೀತಿಯಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಪುತ್ತೂರಿನ ಶ್ರೀಯುತ ಸಹಾಯಕ ಮಾಹಿತಿ ಅಧಿಕಾರಿಯಾದ ಶ್ರೀ. ಚಂದ್ರಶೇಖರ ಎಚ್ ಎಂ ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಗತಿ ಸ್ಟಡಿ ಸೆಂಟರ್  ಸಂಚಾಲಕರು  ಗೋಕುಲದಾಸ್, ಧರ್ಮಪ್ರೇಮಿಗಳಾದ  ಶ್ರೀಧರ ಪೂಜಾರಿ, ಶರತ್ ಕೃಷ್ಣ ನಗರ, . ಹರಿಪ್ರಸಾದ್ ಶೆಟ್ಟಿ,  ಚಂದ್ರಶೇಖರ, ಚಂದ್ರ ಮೊಗೇರ  ಉಪಸ್ಥಿತರಿದ್ದರು.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ
ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror