ರಾಜ್ಯದ ಜನತೆಗೆ ಇಂದಿನಿಂದ ದರ ಏರಿಕೆ ಬಿಸಿ ತಟ್ಟಲಿದೆ. ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ. ಇದರ ಜೊತೆಗೆ ಬೆಂಗಳೂರಿನ ಜನತೆ ನಾಳೆಯಿಂದಲೇ ಕಸಕ್ಕೂ ತೆರಿಗೆ ಕಟ್ಟಬೇಕಾಗಿದೆ. ರೈತರಿಗೆ ಪ್ರೋತ್ಸಾಹ ಧನ ನೀಡಲು ನಂದಿನಿ ಹಾಲಿನ ಮೊಸರಿನ ಪ್ರತಿ ಲೀಟರ್ ದರವನ್ನು 4 ರೂಪಾಯಿಗೆ ಸರ್ಕಾರ ಹೆಚ್ಚಿಸಿರುವ ಸರ್ಕಾರ ಈ ಹಣವನ್ನು ರೈತರಿಗೆ ನೀಡಲು ನಿರ್ಧರಿಸಿದೆ. ಇಂಧನ ಇಲಾಖೆ ನೌಕರರ ಪಿಂಚಣಿ ಮತ್ತು ಗ್ರಾಜ್ಯೂಟಿ ನೀಡಲು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದೆ. ವಿದ್ಯುತ್ ದರ 31 ಪೈಸೆ ಹೆಚ್ಚಳ ಮಾಡಿರುವುದರಿಂದ ಮಾಸಿಕ ಶುಲ್ಕ 20 ರೂಪಾಯಿಗೆ ಹೆಚ್ಚಳವಾಗಲಿದ್ದು, ಇದರಿಂದಾಗಿ 120 ರೂ. ಇದ್ದ ನಿಗದಿತ ಶುಲ್ಕ 140 ರೂಪಾಯಿಗಳಿಗೆ ಹೆಚ್ಚಳವಾಗಲಿದೆ.……..ಮುಂದೆ ಓದಿ…..
ಎಪ್ರಿಲ್ ಒಂದರಿಂದ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ. ಬೆಂಗಳೂರಿನಲ್ಲಿ ಕಸಕ್ಕೆ 600 ಚದರಡಿಗೆ 10 ರೂಪಾಯಿ 601 ರಿಂದ 1000 ರ ಚದರಡಿಗೆ 50 ರೂಪಾಯಿ 1001 – 2000 ಚದರಡಿಗೆ 100 ರೂಪಾಯಿ , 2001 ರಿಂದ 300 ಚದರಡಿಗೆ 150 ರೂಪಾಯಿ, 3001 ರಿಂದ 400 ಚದರಡಿಗೆ 200 ರೂಪಾಯಿ ಹಾಗೂ 4000 ಚದರಡಿ ಮೇಲ್ಪಟ್ಟ 400 ರೂಪಾಯಿ ತೆರಿಗೆ ವಿಧಿಸಲಾಗುತ್ತದೆ.
ಪ್ರತೀ ಮಗುವಿಗೂ ಚೆಸ್ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಚೆಸ್ ತರಬೇತಿ…
ಮಧ್ಯಮ ಸ್ತರದ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ…
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…