Advertisement
MIRROR FOCUS

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ….? | ಪ್ರೋತ್ಸಾಹಧನ 5 ರಿಂದ 7 ರೂ.ಗೆ ಹೆಚ್ಚಿಸುವ ಚಿಂತನೆ

Share

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದ ತಾಲೂಕು ಮಟ್ಟದ ಹಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ ಕೆ ಸುರೇಶ್ ಹಾಲಿನ ಪ್ರೋತ್ಸಾಹಧನವನ್ನು 5 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಅವರು ಪ್ರಸ್ತುತ ಬಮೂಲ್(Bangalore Milk Union Limited) ಅಧ್ಯಕ್ಷರಾಗಿರುವ ಅವರು, ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಹತ್ವದ ಬದಲಾವಣೆಗಳನ್ನು ತರಲು ಒಕ್ಕೂಟ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು. ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆಯಿಂದ ಹಿಂದೆ ಸರಿಯಬಾರದು ಎಂದು ಸಲಹೆ ನೀಡಿದರು.

ಬೇಸಿಗೆ ಹಾಗೂ ಇತರ ಕಾರಣಗಳಿಂದಾಗಿ ಬಮೂಲ್ನಲ್ಲಿ ಹಾಲು ಉತ್ಪಾದನೆ 18 ಲಕ್ಷ ಲೀಟರ್‌ನಿಂದ 15 ಲಕ್ಷ ಲೀಟರ್ಗಳಿಗೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದರಿಂದ ಹೈನುಗಾರಿಕೆಗೆ ಹೊಸ ಉತ್ತೇಜನ ನೀಡುವ ಅಗತ್ಯ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಶೇಕಡಾ 3ರ ಬಡ್ಡಿದರದಲ್ಲಿ 1 ಲಕ್ಷ 60 ಸಾವಿರ ರೂಪಾಯಿಯಿಂದ 15 ಲಕ್ಷ ರೂಪಾಯಿವರೆಗೆ ಸಾಲ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು ಹೈನುಗಾರಿಕೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

5 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

13 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

14 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

14 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago