ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ… ಆದರೆ ರೈತರಿಗೆ ಲಾಭ ಹೆಚ್ಚಿದೆಯೇ?

August 8, 2026
7:12 AM
ಸಿರಿಧಾನ್ಯಗಳ ಬೇಡಿಕೆ ಹೆಚ್ಚಿದರೂ, ರೈತರಿಗೆ ಅದರ ಸಂಪೂರ್ಣ ಆರ್ಥಿಕ ಲಾಭ ಇನ್ನೂ ತಲುಪಿಲ್ಲ ಎಂದು ಹೊಸ ವಿಶ್ಲೇಷಣೆ ತಿಳಿಸಿದೆ. ಖರೀದಿ ವ್ಯವಸ್ಥೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಲಪಡಿಸುವ ಅಗತ್ಯವಿದೆ.

ಭಾರತದಲ್ಲಿ ಸಿರಿಧಾನ್ಯಗಳ (Millets) ಬಗ್ಗೆ ಜಾಗೃತಿ ಮತ್ತು ಬೇಡಿಕೆ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ವಿಶ್ವಸಂಸ್ಥೆಯ 2023ರ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರೋತ್ಸಾಹ, ಆರೋಗ್ಯ ಜಾಗೃತಿ ಮತ್ತು ಹವಾಮಾನ ಸ್ನೇಹಿ ಕೃಷಿಯ ಹಿನ್ನೆಲೆಯಲ್ಲಿ ಸಿರಿಧಾನ್ಯಗಳು ಮತ್ತೆ ಜನಪ್ರಿಯವಾಗಿವೆ. ಆದರೆ, ಸಿರಿಧಾನ್ಯಗಳ ಮಾರುಕಟ್ಟೆ ಬೆಳೆಯುತ್ತಿರುವಷ್ಟೇ ರೈತರ ಆದಾಯವೂ ಬೆಳೆಯುತ್ತಿದೆಯೇ? ಎಂಬ ಪ್ರಶ್ನೆ ಈಗ ತಲೆ ಎತ್ತಿದೆ.

ಸಿರಿಧಾನ್ಯಗಳು ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ಕಡಿಮೆ ನೀರಿನಲ್ಲಿ ಬೆಳೆಯುವ, ಬರವನ್ನು ತಡೆದುಕೊಳ್ಳುವ ಹಾಗೂ ಮಳೆ ಆಧಾರಿತ ಕೃಷಿಗೆ ಸೂಕ್ತ ಬೆಳೆಗಳು. ಹವಾಮಾನ ಬದಲಾವಣೆಯ ಸವಾಲಿನ ನಡುವೆ ಇವುಗಳನ್ನು ಭವಿಷ್ಯದ ಆಹಾರ ಭದ್ರತೆಗೆ ಪ್ರಮುಖ ಬೆಳೆಗಳೆಂದು ಪರಿಗಣಿಸಲಾಗುತ್ತಿದೆ. ಇದರ ಜೊತೆಗೆ ಪೌಷ್ಟಿಕಾಂಶಗಳೂ ಅಧಿಕವಾಗಿರುವುದರಿಂದ ನಗರ ಪ್ರದೇಶಗಳಲ್ಲಿ ಸಿರಿಧಾನ್ಯ ಆಹಾರಗಳ ಬೇಡಿಕೆಯೂ ಏರಿಕೆಯಾಗಿದೆ. ಹೀಗಾಗಿ ಈ ಕೃಷಿಗೂ ಪ್ರೋತ್ಸಾಹ ಹೆಚ್ಚಿದೆ.

ಆದರೆ, ಈ ಬೆಳವಣಿಗೆಯ ಲಾಭವು ಎಲ್ಲ ರೈತರಿಗೂ ಸಮಾನವಾಗಿ ತಲುಪುತ್ತಿಲ್ಲ ಎಂಬ ಚರ್ಚೆ ಈಗ ಆರಂಭವಾಗಿದೆ.  ಅನೇಕ ಸಿರಿಧಾನ್ಯ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆ (MSP) ಖರೀದಿ ವ್ಯವಸ್ಥೆಯ ಕೊರತೆ, ಸೀಮಿತ ಮಾರುಕಟ್ಟೆ, ಸಂಸ್ಕರಣಾ ಘಟಕಗಳ ಅಭಾವ, ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ಅವಕಾಶಗಳ ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಗ್ರಾಹಕರ ಬೇಡಿಕೆ ಹೆಚ್ಚಿದರೂ ರೈತರಿಗೆ ಅದರ ಪೂರ್ಣ ಆರ್ಥಿಕ ಲಾಭ ದೊರೆಯುತ್ತಿಲ್ಲ.

ತಜ್ಞರ ಅಭಿಪ್ರಾಯದಂತೆ, ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿಸುವುದಷ್ಟೇ ಸಾಕಾಗುವುದಿಲ್ಲ. ಪೂರೈಕೆ ಹಾಗೂ ಸರಪಳಿ ಚೈನ್, ಸಂಸ್ಕರಣಾ ಕೈಗಾರಿಕೆ, ರೈತ ಉತ್ಪಾದಕರ ಸಂಸ್ಥೆಗಳು , ರಫ್ತು ಅವಕಾಶಗಳು ಮತ್ತು ಖರೀದಿ ವ್ಯವಸ್ಥೆಯನ್ನು ಬಲಪಡಿಸಿದಾಗ ಮಾತ್ರ ಸಿರಿಧಾನ್ಯ ಕೃಷಿ ರೈತರಿಗೆ‌ ಲಾಭದಾಯಕವಾಗುತ್ತದೆ ಹಾಗೂ ಬೆಳೆ ಬೆಳೆಯಲೂ ಹೆಚ್ಚು ಅನುಕೂಲ ಎಂದು ಹೇಳಿದ್ದಾರೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸುವ ರಾಷ್ಟ್ರವಾಗಿದ್ದರೂ, ರೈತರ ಆದಾಯ ಹೆಚ್ಚಿಸಲು ಸರಿಯಾದ ನೀತಿಗಳು, ಮಾರುಕಟ್ಟೆ ಮತ್ತು ಗ್ರಾಹಕರ ಬೇಡಿಕೆ ಒಂದೇ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ತಜ್ಞರು ಹೇಳುತ್ತಾರೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

India has successfully increased awareness and demand for millets due to policy support and health consciousness. However, a recent analysis argues that higher demand has not necessarily translated into higher incomes for millet farmers because of weak procurement, limited processing, and inadequate market linkages.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಂಡಮಾರುತದ ಗಾಳಿಗೂ ಬಗ್ಗಿ ಉಳಿಯುವ ಅಡಿಕೆ ತಳಿ..! ಮೊಹಿತ್‌ನಗರ ತಳಿಗೆ ಹಲವು ರಾಜ್ಯಗಳಲ್ಲಿ ಬೇಡಿಕೆ
August 8, 2026
6:48 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡದಲ್ಲಿ ಮಳೆ | 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ – ಕಾಸರಗೋಡಿನಲ್ಲೂ ಶಾಲೆಗಳಿಗೆ ರಜೆ
August 8, 2026
6:26 AM
by: ದ ರೂರಲ್ ಮಿರರ್.ಕಾಂ
ಸ್ವಾತಂತ್ರ್ಯ ದಿನಾಚರಣೆ : ಪ್ಲಾಸ್ಟಿಕ್ ಧ್ವಜ ಬಳಸದಂತೆ ಸೂಚನೆ
August 8, 2026
6:13 AM
by: ದ ರೂರಲ್ ಮಿರರ್.ಕಾಂ
ಮಂಗಳೂರು, ಉಡುಪಿ, ಪುತ್ತೂರಿನಲ್ಲಿ ಉದ್ಯೋಗಾವಕಾಶ- 22 ಹುದ್ದೆಗಳಿಗೆ ಆಗಸ್ಟ್ 11ರಂದು ನೇರ ಸಂದರ್ಶನ
August 8, 2026
6:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror