ಬಳ್ಳಾರಿ ತಾಲೂಕಿನ ಬಿ ಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲು ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕೆಲಸ ನಡೆಯುತ್ತಿದೆ. ಈ ಕಾಮಗಾರಿಗೆ ವೇಗ ಸಿಗಲೆಂದು ಮಂಗಳವಾರ ರಾತ್ರಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗುವ ಮೂಲಕ ಸಚಿವ ಶ್ರೀರಾಮುಲು ಗಮನ ಸೆಳೆದರು.
ಭದ್ರಾ ನದಿ ಮತ್ತು ವಾಣಿವಿಲಾಸ ಸಾಗರ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಸುಮಾರು 1 ಲಕ್ಷ ಕ್ಯೂಸೆಕ್ ನೀರನ್ನು ವೇದಾವತಿ ನದಿಗೆ ಹರಿಸಲಾಗಿದೆ. ಕರ್ನಾಟಕ ಮತ್ತು ಆಂಧ್ರ ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆಯಲ್ಲಿ ಒಟ್ಟು 58 ಪಿಲ್ಲರ್ಗಳಿದ್ದು, 10ನೇ ಪಿಲ್ಲರ್ ದುರಸ್ತಿಗೊಂಡಿದೆ. 15 ನೇ ಪಿಲ್ಲರ್ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಎಲ್‍ಎಲ್‍ಸಿ ಕಾಲುವೆ ದುರಸ್ತಿಗೆ ಒಳಗಾಗಿದ್ದು, ರೈತರ ಬೆಳೆಗಳಿಗೆ ನೀರು ಒದಗಿಸಲು ಈಗ ತಾತ್ಕಾಲಿಕವಾದ ಪಿಲ್ಲರ್ ನಿರ್ಮಾಣ ಮಾಡಲಾಗುತ್ತಿದೆ.
ಕಾಲುವೆಯ ಮೂಲಕ ತಮ್ಮ ಜಮೀನುಗಳಿಗೆ ನೀರು ಪಡೆಯುವ ರೈತರು, ಲಕ್ಷಾಂತರ ಎಕರೆ ಬೆಳೆ ಹಾನಿಗೀಡಾಗುವ ಭೀತಿಯಲ್ಲಿದ್ದಾರೆ.ಕಾಲುವೆಯ ಸೇತುವೆಯ ಸ್ಥಂಬ ಕುಸಿದಿದ್ದರಿಂದ ಕೆಳಭಾಗದ 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೈತರು ಬೆಳೆದ ಭತ್ತ ಮತ್ತಿತರ ಬೆಳೆ ಒಣಗುತ್ತಿದೆ. ಹೀಗಾಗಿ, ಈ ಕಾಲುವೆ ರಿಪೇರಿ ತುರ್ತಾಗಿ ನಡೆಯಬೇಕು, ಕಾಮಗಾರಿ ಪೂರ್ಣಗೊಂಡ ನಂತರವೇ ಸ್ಥಳದಿಂದ ನಾನು ತೆರಳುವುದು, ಅಲ್ಲಿವರೆಗೆ ಇಲ್ಲಿಯೇ ವಾಸ್ತವ್ಯ ಹೂಡುವುದಾಗಿ ತಿಳಿಸಿದ ಸಚಿವ ಶ್ರೀರಾಮುಲು, ಸ್ಥಳದಲ್ಲೇ ರಾತ್ರಿ ವಾಸ್ತವ್ಯ ಹೂಡಿದರು.
ಸೇತುವೆ ಪಿಲ್ಲರ್ ಮರು ನಿರ್ಮಾಣ ಕಾಮಗಾರಿ ಮುಗಿಯುವವರೆಗೂ ಕಾಲುವೆಗೆ ನೀರು ಹರಿಯುವುದನ್ನು ಅಧಿಕಾರಿಗಳು ಬಂದ್ ಮಾಡಿದ್ದರು. ಅಲ್ಲದೇ ಪಿಲ್ಲರ್ ನಿರ್ಮಣ ಕಾಮಗಾರಿ ವಿಳಂಬ ಹಿನ್ನಲೆ ರೈತರ ಆಕ್ರೋಶ ಭುಗಿಲೆದ್ದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸಚಿವ ಶ್ರೀರಾಮುಲು ನಿನ್ನೆ ಮಧ್ಯಾಹ್ನ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ, ಕಾಮಗಾರಿ ಪೂರ್ಣ ಮುಗಿಯುವವರೆಗೂ ಕಾಮಗಾರಿ ಸ್ಥಳದಲ್ಲೇ ಇರಲು ನಿರ್ಧಾರ ಮಾಡಿದ್ದರು.
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…
ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…
ಎಲ್ ನಿನೋ ಪರಿಣಾಮದಿಂದ ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯ ನಡುವೆಯೂ ಕರಾವಳಿಯಲ್ಲಿ ಆಗಸ್ಟ್‌ನಲ್ಲಿ…
ಸುಮಾರು 35 ವರ್ಷಗಳ ಹಿಂದೆ ಡಾ. ವಿಘ್ನೇಶ್ವರ ವರ್ಮುಡಿಯವರು ಮುಂದಿಟ್ಟಿದ್ದ ಅಡಿಕೆ ಮಾರುಕಟ್ಟೆ…
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…