Advertisement
ಸುದ್ದಿಗಳು

ಸುಳ್ಯ ನಗರಪಂಚಾಯತ್‌ ಸಭೆಯಲ್ಲಿ ಸದಸ್ಯರ ನಡುವೆ ತಳ್ಳಾಟ | ಅಭಿವೃದ್ಧಿಯಿಂದ ಆರಂಭವಾಗಿ ಗುಜರಾತ್‌ ವರೆಗೆ ಚರ್ಚೆ…! |

Share

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾಗ್ವಾದ ನಡೆದು ತಳ್ಳಾಟ ನಡೆಯಿತು. ಕೆಲಕಾಲ ಗೊಂದಲದ ಗೂಡಾಗಿ ಪರಿಣಮಿಸಿದ ಸಭೆ ಬಳಿಕ ಪೊಲೀಸರ ಮಧ್ಯಪ್ರವೇಶವೂ ನಡೆಯಿತು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಸುಳ್ಯದಲ್ಲಿ  ಹಲವು ಸಮಯಗಳಿಂದ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ವಿಪಕ್ಷದ ಸದಸ್ಯರು ಆರೋಪಿಸಿದರು. ಸಭೆಗೆ ಇಂಜಿನಿಯರ್ ಹಾಗೂ ಆರೋಗ್ಯಾಧಿಕಾರಿಗಳನ್ನು ಕರೆಯಿಸಿ ಎಂದು ವಿಪಕ್ಷಗಳು ಒತ್ತಾಯಿಸಿದವು. ಬಳಿಕ ವಿರೋಧ ಪಕ್ಷದ ಸದಸ್ಯರು ಸಭೆಯ ಮುಂಭಾಗಕ್ಕೆ ಬಂದು ಟೇಬಲ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ನಗರ ಪಂಚಾಯತ್ ಆಡಳಿತದ ವೈಫಲ್ಯದ  ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಆಡಳಿತ ಪಕ್ಷ ಹಾಗೂ ವಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಾನ ಮರ್ಯಾದೆ ಶಬ್ದ ಬಳಕೆ , ವೈಯಕ್ತಿಕ ಚರ್ಚೆ, ತೀವ್ರ ಮಾತಿನ ಚಕಮಕಿ ನಡೆಯಿತು. ಅದಾದ ಬಳಿಕ ಮೋದಿ ಹೆಸರೂ ಉಲ್ಲೇಖವಾಯಿತು. ಹೀಗಾಗಿ ಮತ್ತಷ್ಟು ಚರ್ಚೆ ಚುರುಕಾಗಿ ಸದಸ್ಯರ ನಡುವೆ ತಳ್ಳಾಟ ನಡೆಯಿತು. ಬಳಿಕ ಸಭೆಗೆ ಪೊಲೀಸರು ಆಗಮಿಸಿದರು.  ಸದಸ್ಯರನ್ನು ಅಧಿಕಾರಿಗಳು ಸಮಾಧಾನಪಡಿಸಿದರು. ಬಳಿಕ  ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿರೋಧ ಪಕ್ಷದ ಸದಸ್ಯರ ಜೊತೆ ಮಾತುಕತೆ‌ ನಡೆಸಿದರು. ಬಳಿಕ ಸಭೆ ಆರಂಭಗೊಂಡು ಮುಂದುವರಿಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

7 hours ago

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…

12 hours ago

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…

12 hours ago

ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌

ಏಷ್ಯನ್‌ ಗೇಮ್ಸ್‌ ಪುರುಷರ ಕ್ರಿಕೆಟ್‌ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…

12 hours ago

ಮಳೆ ಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಗಿರಲಿದೆ?

ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…

13 hours ago

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

23 hours ago