(ಫೋಟೊ ಕೃಪೆ : ಪೇಸ್ ಬುಕ್ )
ಪುತ್ತೂರು ನಗರದ ಮಳಿಗೆಯೊಂದರ ಬಳಿ ಜಿಲ್ಲೆಯ ಸಚಿವರೊಬ್ಬರ ಕಾರನ್ನು ಪಾರ್ಕ್ ಮಾಡಿದ ಫೋಟೋ ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಸಚಿವರ ಕಾರು ಈ ರೀತಿ ಪಾರ್ಕ್ ಮಾಡಿರುವುದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಎಲ್ಲರಿಗೂ ಒಂದೇ ನಿಯಮವಲ್ಲವೇ ಇಲ್ಲಿ ? ಎಂಬುದು ಪ್ರಶ್ನೆಯ ಸಾರಾಂಶ.
ಪುತ್ತೂರು ನಗರದಲ್ಲಿ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಾಹನಗಳ ಓಡಾಟ ಹೆಚ್ಚಾದಂತೆ ಪುತ್ತೂರು ಪೇಟೆಯ ರಸ್ತೆಗಳು ಆಗಾಗ ಬ್ಲಾಕ್ ಆಗುತ್ತವೆ. ಹೀಗಾದಾಗ ಇಡೀ ಪೇಟೆಯಲ್ಲಿ ಟ್ರಾಫಿಕ್ ಜಾಂ ಆಗುತ್ತದೆ.
ಆದರೆ ಸಚಿವರೊಬ್ಬರ ಕಾರನ್ನು ಗುರುವಾರ ಸಂಜೆ ನಗರದ ಮಳಿಗೆಯೊಂದರ ಎದುರಿನಲ್ಲಿ ಪಾರ್ಕ್ ಮಾಡಲಾಗಿತ್ತು. ಇದರಿಂದ ಕೆಲಕಾಲ ಟ್ರಾಫಿಕ್ ಸಮಸ್ಯೆಯಾಯಿತು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ, ಇದೇ ವೇಳೆ, ಸಾರ್ವಜನಿಕರಿಗೆ ಒಂದು ಕಾನೂನು- ಸಚಿವರಿಗೆ ಇನ್ನೊಂದು ಕಾನೂನೇ ಎಂದೂ ಪ್ರಶ್ನೆ ಮಾಡಿದ್ದಾರೆ. ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವವರೇ ಹೀಗೆ ವಾಹನವನ್ನು ಪಾರ್ಕ್ ಮಾಡಿಸಿದರೆ ಹೇಗೆ ಎಂಬುದೂ ಪ್ರಶ್ನೆಯಾಗಿದೆ.
ಇಂತಹ ಸಂದರ್ಭಗಳಲ್ಲಿ ಕಾರಿನ ಚಾಲಕನಲ್ಲಿ ಕೆಲಸಕ್ಕಾಗಿ ಮಳಿಗೆಗಳಿಗೆ ಬಿಟ್ಟು ವಾಹನವನ್ನು ಬೇರೆಡೆ ಪಾರ್ಕ್ ಮಾಡಿಸಿ ಕೆಲಸದ ನಂತರ ವಾಹನವನ್ನು ಮತ್ತೆ ಕರೆಯಿಸುವ ವ್ಯವಸ್ಥೆಯನ್ನು ಸಾಮಾನ್ಯ ಜನರೂ ಮಾಡುತ್ತಾರೆ.
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…