ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರನ್ನು ಸಚಿವರನ್ನಾಗಿ ಮಾಡುವ ಉದ್ದೇಶದಿಂದಲಾದರೂ ಭಜರಂಗಿ ಗೊತ್ತಿಲ್ಲ ಎನ್ನುವ ಕಾಂಗ್ರೆಸ್ ಸೋಲಿಸಬೇಕು ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಮನವಿ ಮಾಡಿದರು.
ಕೇಂದ್ರ ಸಚಿವ ವಿ.ಕೆ. ಸಿಂಗ್ ರೋಡ್ ಶೋ: ಪಟ್ಟಣದ ಬೈಚನಹಳ್ಳಿ ಇರುವ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಮತ್ತು ವಿ.ಕೆ. ಸಿಂಗ್ ಅವರು ಬಳಿಕ ಬೃಹತ್ ರೋಡ್ ಷೋ ಆರಂಭಿಸಿದರು. ಮಾರಿಯಮ್ಮ ದೇವಾಲಯದ ಬಳಿಯಿಂದ ಪಟ್ಟಣದ ಕಾರು ನಿಲ್ದಾಣದವರೆಗೆ ಒಂದು ಕಿಲೋ ಮೀಟರ್ ರೋಡ್ ನಡೆಸಿದರು. ಬಳಿಕ ಕಾರು ನಿಲ್ದಾಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿ.ಕೆ. ಸಿಂಗ್ ಅವರು ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಹೇಳುವ ಮೂಲಕ ಭಾಷಣ ಆರಂಭಿಸಿದ ವಿ.ಕೆ. ಸಿಂಗ್ ಅವರು ಮೊದಲಿಗೆ ಕಾರ್ಯಪ್ಪ ಅವರನ್ನು ನೆನೆದರು. ಅವರು 26 ರೆಜಿಮೆಂಟಿನಲ್ಲಿ ಇದ್ದವರು. ಅವರಂತಹ ಹಲವು ಸೇನಾಧಿಕಾರಿಗಳನ್ನು ಕೊಡಗು ದೇಶಕ್ಕೆ ಕೊಟ್ಟಿದ್ದು, ಕೊಡಗಿಗೆ ಸಾಕಷ್ಟು ಶಕ್ತಿ ಇದೆ. ಆ ಶಕ್ತಿ ಈ ಚುನಾವಣೆಯಲ್ಲಿ ಪ್ರದರ್ಶನವಾಗಬೇಕು ಎಂದು ಹೇಳಿದರು.
ಬಹುದಿನಗಳ ಕೊಡಗು ನೋಡುವ ಕಸನು ಸಾಕಾರ: ನಾನು ಹಿಂದೆಯೇ ಕೊಡಗು ಜಿಲ್ಲೆಗೆ ಬರಬೇಕು ಎಂದು ಕೊಂಡಿದ್ದೆ. ನನಗೆ ಈಗ ಆ ಅವಕಾಶ ಸಿಕ್ಕಿದೆ ಎಂದರು. ಕಾಂಗ್ರೆಸ್ ನವರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಹನುಮಾನ್ ಗೊತ್ತು ಭಜರಂಗಿ ಗೊತ್ತಿಲ್ಲ ಎನ್ನುತ್ತಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಸೋಲಿಸಬೇಕು. ಅದಕ್ಕಾಗಿ ನೀವು ಚುನಾವಣೆಯಲ್ಲಿ ಕಮಲದ ಬಟನ್ ಒತ್ತಬೇಕು ಮತ್ತು ನೀವು ಇನ್ನಷ್ಟು ಜನರಿಂದ ಬಟನ್ ಒತ್ತಿಸಿ ಕಾಂಗ್ರೆಸ್ ಸೋಲಿಸಬೇಕು. ದೇಶದಲ್ಲಿ ಕಾಂಗ್ರೆಸ್ ಇರುವವರೆಗೆ ಭ್ರಷ್ಟಾಚಾರ ಇದ್ದೇ ಇರುತ್ತದೆ. ಭ್ರಷ್ಟಾಚಾರ ತೊಲಗಿಸಲು ಕಾಂಗ್ರೆಸ್ ತೊಲಗಬೇಕು ಎಂದ ಅವರು ಅಪ್ಪಚ್ಚು ರಂಜನ್ ಅವರನ್ನು ಸಚಿವರನ್ನಾಗಿ ಮಾಡಲು ಕಾಂಗ್ರೆಸ್ ಅನ್ನು ಸೋಲಿಸಿ ಎಂದು ಕೇಂದ್ರ ರಾಜ್ಯ ಖಾತೆ ಸಚಿವ ವಿ.ಕೆ. ಸಿಂಗ್ ಹೇಳಿದರು.
ಕುಶಾಲನಗರದಲ್ಲಿ ಬಿಜೆಪಿ ಬೈಕ್ ಜಾಥಾ: ಇದಕ್ಕೂ ಮೊದಲು ಕೊಡಗು ಹಾಸನ ಜಿಲ್ಲೆಯ ಗಡಿಭಾಗವಾದ ಶಿರಂಗಾಲದಿಂದ ಕುಶಾಲನಗರದವರೆಗೆ ನೂರಾರು ಬೈಕುಗಳಲ್ಲಿ ಜನರು ಜಾಥಾ ನಡೆಸಿದರು. ಇನ್ನು ರೋಡ್ ಷೋ ಸಂದರ್ಭ ವ್ಯಕ್ತಿಯೊಬ್ಬರು ಭಜರಂಗಿಯ ವೇಕ್ಷ ಧರಿಸಿ ಎಲ್ಲರ ಗಮನ ಸೆಳೆದರು. ಆ ಮೂಲಕ ಭಜರಂಗ ದಳವನ್ನು ನಿಷೇಧಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಕಾರ್ಯಕರ್ತರು ತಿರುಗೇಟು ನೀಡಿದರು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…