ಧ್ವನಿ ಮಾಯೆ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಸುಳ್ಯದ ಹುಡುಗಿ ಸಾಯಿಶೃತಿ ಪಿಲಿಕಜೆ ಹೈದರಾಬಾದ್ ನಲ್ಲಿ ನಡೆದ ‘MISS WORLD INTERNATIONAL INDIA’ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಪ್ರತಿಭಾವಂತ ಹುಡುಗಿ ಸಾಯಿಶೃತಿ ಪಿಲಿಕಜೆ ಧ್ವನಿ ಮಾಯೆ ಕಲಾವಿದೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಈ ಹಿಂದೆ ಗುರುತಿಸಿದ್ದನ್ನು ಸ್ಮರಿಸಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಅಮರ ಮೂಡ್ನೂರು ಗ್ರಾಮದ ಸಾಯಿಶ್ರುತಿ ಪ್ರತಿಭಾವಂತೆ. ಪಿಲಿಕಜೆ ಮನೆಯ ಶಿವಸಾಯಿ ಭಟ್ ಪಿಲಿಕಜೆ ಹಾಗೂ ಸುಜ್ಯೋತಿ ದಂಪತಿಗಳ ಮಗಳು ಸಾಯಿಶ್ರುತಿ. ಪ್ರೌಢ -ಪದವಿಪೂರ್ವ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ಳಾರೆಯಲ್ಲಿ ಪಡೆದು, ಬಳಿಕ 1 ವರ್ಷ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ,ಸುಳ್ಯದ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಪದವಿಯನ್ನೂ ಗಳಿಸಿ, ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಎಂಬಿಎ ಮಾಡಿರುತ್ತಾರೆ.
ಮಿಮಿಕ್ರಿ , ಭಾಷಣ, ಯಕ್ಷಗಾನ, ನಾಟಕ, ಹಾಡು, ನೃತ್ಯ ದಲ್ಲಿ ಪರಿಣಿತಿ ಹೊಂದಿದ ಸಾಯಿಶೃತಿ ಪಿಲಿಕಜೆ ಕಳೆದ 5 ವರ್ಷಗಳಿಂದ ಬೊಂಬೆ – ಚಿಂಟೂ ವನ್ನು ಜೊತೆಗಾರನ್ನಾಗಿ ಮಾಡಿಕೊಂಡು, ಅದಕ್ಕೆ ಜೀವ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ.” ಮಾತನಾಡುವ ಬೊಂಬೆ – ಚಿಂಟೂ ” ಎಂಬ ವಿನೂತನ ಕಾರ್ಯಕ್ರಮ ವನ್ನು ಪ್ರಾರಂಭಿಸಿದ ಸಾಯಿಶೃತಿ ಮಾತೇ ಮಾಣಿಕ್ಯವಾಗಿ ಮನರಂಜಿಸುವಲ್ಲಿ ಯಶಸ್ವಿಗೊಂಡು, ಸುಳ್ಯ, ಬೆಳ್ಳಾರೆ, ಪುತ್ತೂರು, ಸುಬ್ರಹ್ಮಣ್ಯ, ಕೇರಳ, ಬೆಂಗಳೂರು, ಗುಲ್ಬರ್ಗ, ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡುವುದರ ಜೊತೆಗೆ, Online ಮೂಲಕ ಅಮೆರಿಕದ ಕನ್ನಡಿಗರಿಗೆ ಕಾರ್ಯಕ್ರಮ ಕೊಟ್ಟಿರುತ್ತಾರೆ.
ಸುಳ್ಯ, ಪುತ್ತೂರು, ಉಜಿರೆ, ಗುಲ್ಬರ್ಗ, ಮೊದಲಾದ ಊರಿನ ಸಂಘ – ಸಂಸ್ಥೆಗಳಿಂದ ಗೌರವ ಸನ್ಮಾನಗಳ ಜೊತೆಗೆ ಶೈನಿಂಗ್ ಸ್ಟಾರ್ ನ್ಯಾಷನಲ್ ಪ್ರೈಡ್ ಎವಾರ್ಡ್, ಜೋನ್ 15 ಗಾಟ್ ಟ್ಯಾಲೆಂಟ್ ಯೂತ್ ಐಕಾನ್ ಆಫ್ ದ ಇಯರ್ 2023, ಕ್ವೀನ್ ಆಫ್ ಜೋನ್ 15 ಅವಾರ್ಡ್ ಆಫ್ ಎಕ್ಸಲೆನ್ಸ್, ಯೂನಿಕಾನ್ ವರ್ಡ್ ರೆಕಾರ್ಡ್ ಪ್ರಶಸ್ತಿ ಗಳನ್ನು ಗಳಿಸಿರುತ್ತಾರೆ.
ನಾಡಿನಾದ್ಯಂತ ಉತ್ತಮ ಮಾತುಗಾರ್ತಿಯಾದ ಸಾಯಿಶೃತಿ ಪಿಲಿಕಜೆ ಮಾತಿನ ಮೂಲಕ ಚಿಂಟೂ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಕಲಾರಾಧನೆ ಮೂಲಕ ಜನ – ಮನ ರಂಜಿಸಿ ಪ್ರಖ್ಯಾತಿ ಗಳಿಸಿದ ಕಲಾವಿದೆ.
ಬರಹ ಮಾಹಿತಿ : ಬಾಲು ದೇರಾಜೆ
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…