ಮಿಜೋರಾಂನಲ್ಲಿ ನಡೆಯುತ್ತಿರುವ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯಿಂದಾಗಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು ತಕ್ಷಣವೇ ಅಡಿಕೆ ಕಳ್ಳಸಾಗಾಣಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಿಜೋರಾಂನ ಕಾಂಗ್ರೆಸ್ ಶಾಸಕ ಲಾಲ್ರಿಂಡಿಕಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮಿಜೋರಾಂನ ಪೂರ್ವ ಭಾಗದಲ್ಲಿರುವ ಗಡಿಯ ಮೂಲಕ ನೆರೆಯ ಮ್ಯಾನ್ಮಾರ್, ಬರ್ಮಾ ಮತ್ತು ಇತರೆಡೆಗಳಿಂದ ಒಣ ಅಡಿಕೆಯನ್ನು ವ್ಯಾಪಕವಾಗಿ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ಲಾಲ್ರಿಂಡಿಕಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಅಡಿಕೆಯ ಅಕ್ರಮ ಆಮದನ್ನು ತಡೆಯಲು ಮಿಜೋರಾಂ ಮತ್ತು ಮಣಿಪುರ ಸರ್ಕಾರಗಳಿಗೆ ಕೇಂದ್ರವು ನಿರ್ದೇಶನ ನೀಡಿದ್ದರೂ, ಯಾವುದೇ ಕ್ರಮ ಆಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಮಿಜೋರಾಂನ ಮಮಿತ್ ಜಿಲ್ಲೆಯ ಹಚೆಕ್ ಪ್ರದೇಶವು ಅತಿ ಹೆಚ್ಚು ಅಡಿಕೆ ಉತ್ಪಾದಿಸುವ ಪ್ರದೇಶವಾಗಿದೆ, ಅಲ್ಲಿ ಸುಮಾರು 70 ಪ್ರತಿಶತ ನಿವಾಸಿಗಳು ದಶಕಗಳಿಂದ ಅಡಿಕೆ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.ಇದೀಗ ಅಡಿಕೆ ಆಮದು ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಕ್ಕೆ ಅಕ್ರಮ ಅಡಿಕೆ ಪ್ರವೇಶವನ್ನು ತಡೆಯಲು ಅಸ್ಸಾಂ ಸರ್ಕಾರವು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಮಿಜೋರಾಂನಲ್ಲಿ ಬೆಳೆಯುವ ಅಡಿಕೆ ಸಾಗಾಟಕ್ಕೆ ಕಷ್ಟವಾಗಿದೆ. ಬರ್ಮಾ ಅಡಿಕೆ ಆಮದು ತಡೆಯಾಗದ ಕಾರಣ ಸ್ಥಳೀಯ ರೈತರಿಗೆ ತೀವ್ರ ಮಾರುಕಟ್ಟೆ ಸಮಸ್ಯೆಗೆ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…
23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…