ನಂಬಿಕೆಯೇ ಈ ದೇಶದಲ್ಲಿ ಪ್ರಮುಖವಾದ್ದು. ದೇವರು-ದೈವಗಳೂ ಕೂಡಾ ನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ. ಇಲ್ಲೂ ಹಾಗೇ, ನಂಬಿದವರಿಗೆ ಯಾವತ್ತೂ ನಿರಾಸೆಯಾಗಿಲ್ಲ. ಈ ದೈವವನ್ನು ನಂಬಿ ಮಾಡಿದ ಕೆಲಸಗಳೆಲ್ಲವೂ ಯಶಸ್ಸಾಗಿದೆ. ಈ ದೈವದ ನೆಲದಲ್ಲಿ ಮೋಸಗಳಿಗೆ, ಅಹಂಕಾರಗಳು ಯಾವತ್ತೂ ಗೆಲ್ಲಲಿಲ್ಲ. ಅಂತಹ ಪುಣ್ಯ ನೆಲ ಮೊಗ್ರ. ಇಲ್ಲಿನ ಭೈರಜ್ಜಿ ವಿಶೇಷವಾದ ದೈವ. ದಕ್ಷಿಣ ಕನ್ನಡ ಜಿಲ್ಲೆಯ….
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಎಂಬ ದೈವದ ಪ್ರದೇಶ ಇದೆ. ಎರಡು ದಿನಗಳ ಕಾಲ ಇಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತದೆ. ಅದರಲ್ಲಿ ಭೈರಜ್ಜಿ ದೈವಕ್ಕೆ ವಿಶೇಷ ಮಹತ್ವ. ಈ ದೈವಕ್ಕೆ ಹರಿಕೆ ಹೇಳಿಕೊಂಡರೆ ಇಷ್ಟಾರ್ಥ ಈಡೇರುತ್ತದೆ. ಸಂತಾನ ಭಾಗ್ಯಕ್ಕೆ, ಉದ್ಯೋಗಕ್ಕೆ, ಅನ್ಯಾಯದ ಸಂದರ್ಭ ನ್ಯಾಯಕ್ಕಾಗಿ, ವಿಶೇಷವಾಗಿ ಕಳೆದುಹೋದ ವಸ್ತುಗಳಿಗೆ ಹರಿಕೆ ಹೇಳಿಕೊಂಡರೆ ಮತ್ತೆ ಲಭ್ಯವಾಗುತ್ತದೆ ಎನ್ನುವುದು ನಂಬಿಕೆ. ಇದಕ್ಕೆ ಪುಷ್ಠಿ ನೀಡುವಂತೆ ಅನೇಕರು ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ದೈವಕ್ಕೆ ಹರಕೆ ಸಲ್ಲಿಕೆ ಮಾಡುತ್ತಾರೆ. ಸೀರೆ, ಕತ್ತಿ , ಬೆಳ್ಳಿಯ ಆಭರಣಗಳನ್ನು ಸಮರ್ಪಣೆ ಮಾಡುತ್ತಾರೆ. ಈಚೆಗೆ ಸೀರೆಯ ಸಾವಿರ ದಾಟುತ್ತಿದೆ. ಇದು ಭೈರಜ್ಜಿ ದೈವಕ್ಕೆ ಹರಿಕೆ ಹೇಳಿ ಫಲ ನೀಡಿರುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಭಕ್ತಾದಿಗಳು. ಭಕ್ತರು……
ಭಕ್ತರು ವಿವಿಧ ಇಷ್ಟಾರ್ಥ ಈಡೇರಿಕೆಗೆ ದೈವಕ್ಕೆ ಪ್ರಾರ್ಥನೆ ಮಾಡುತ್ತಾರೆ. ನಂತರ ಈ ಇಷ್ಟಾರ್ಥ ಈಡೇರಿದ ಬಳಿಕ ದೈವದ ನೇಮದಂದು ಆಗಮಿಸಿ ಹರಿಕೆ ಸಮರ್ಪಣೆ ಮಾಡುತ್ತಾರೆ. ಈ ದೈವ ಕನ್ನಡದಲ್ಲಿಯೇ ಮಾತನಾಡುವುದು ವಿಶೇಷವಾಗಿದೆ. ಪ್ರತೀ ವರ್ಷ ಜ.19-20 ರಂದು ವಾರ್ಷಿಕ ಜಾತ್ರಾ ಉತ್ಸವ ಇಲ್ಲಿ ನಡೆಯುತ್ತದೆ.
“Ajji Daiva” of Mogra who fulfills the wishes of devotees. Many problems including childlessness will be fulfilled if “Harike” putting here.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…