ಆರೋಗ್ಯ ತುರ್ತುಪರಿಸ್ಥಿತಿ….! | ಸೇತುವೆ ಇಲ್ಲದೆ ಪರದಾಟ…! | ಮೊಗ್ರದಲ್ಲಿ ಕರುಣಾಜನಕ ಕತೆ |

July 22, 2022
10:36 PM

ಇದು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಕತೆ. ರೋಗಿಯೊಬ್ಬರನ್ನು ಹೊಳೆ ಬದಿಗೆ ಕರೆತಂದು ನಂತರ ಕಾಲುಸಂಕದಲ್ಲಿ ಹೊತ್ತು ಹೊಳೆಯ ಇನ್ನೊಂದು ಬದಿಯಿಂದ ಮತ್ತೊಂದು ವಾಹನದಲ್ಲಿ ಸಾಗಿಸಿದ ಘಟನೆ ನಡೆದಿದೆ.ಕಳೆದ ಹಲವು ವರ್ಷಗಳಿಂದ ಸೇತುವೆಯ ಭರವಸೆ ಮಾತ್ರಾ ಇಲ್ಲಿ ಕಂಡಿದೆ.

Advertisement
Advertisement
Advertisement

Advertisement

ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಇತ್ತೀಚೆಗೆ  ಬೇಡಿಕೆಗಳ ಪಟ್ಟು  ಹೆಚ್ಚಾಗಿದೆ. ಸುಳ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ಅನೇಕ ವರ್ಷಗಳಿಂದ ಜನರು ಸುಮ್ಮನಿದ್ದರು. ಆದರೆ ಅಂದಿನಿಂದಲೂ ಸುಳ್ಯ ಭಾರೀ ಅಭಿವೃದ್ಧಿ ಹೊಂದಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವಾರು ಸಮಸ್ಯೆ ಇದೆ. ಆದರೆ ಮೂಲಭೂತ ಸಮಸ್ಯೆ ನಿವಾರಣೆ ಆಗದೇ ಇರುವುದು  ಬಹುದೊಡ್ಡ ಲೋಪವಾಗಿದೆ. ದೇಶವು 75 ನೇ ಸ್ವಾತಂತ್ರ್ಯ ಉತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಲಭೂತ ಅವಶ್ಯಕತೆಯಾದ ಸೇತುವೆ, ರಸ್ತೆ, ಕುಡಿಯುವ ನೀರಿಗೆ ಪರದಾಟ ನಡೆಸುತ್ತಿದೆ ಎನ್ನುವುದೇ ವಿಷಾದ ಹಾಗೂ ಅಭಿವೃದ್ಧಿ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ.

ಇದೀಗ ಸುಳ್ಯ ತಾಲೂಕಿನ  ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಕಂಡುಬಂದು ವಿಡಿಯೋ ಮನ ಕಲಕುತ್ತದೆ. ಮೊಗ್ರದ ಹೊಳೆಕೆರೆ ಎಂಬಲ್ಲಿನ ವ್ಯಕ್ತಿಯೋರ್ವರಿಗೆ ಅನಾರೋಗ್ಯ ಕಾಡಿತ್ತು. ಆದರೆ ವಾಹನಗಳು ಮನೆಯವರೆಗೆ ಬಾರದ ಸ್ಥಿತಿ ಇದೆ. ಮೊಗ್ರದ ಹೊಳೆಗೆ ಸೇತುವೆ ರಚನೆಯಾದಗ ಹಿನ್ನೆಲೆಯಲ್ಲಿ  ಮಳೆಗಾಲ ವಾಹನಗಳು ಎರಡೂ ಕಡೆಗೆ ದಾಟುವುದಿಲ್ಲ. ಇಲ್ಲಿ ಅನಾರೋಗ್ಯ ಪೀಡಿತರನ್ನು ಹೊಳೆತ ಬದಿಯವರೆಗೆ ಜೀಪಲ್ಲಿ ಕರಕೊಂಡುಬಂದು, ಆ ಬಳಿಕ ಈಚೆಗೆ ನಿರ್ಮಾಣವಾದ ಕಾಲು ಸಂಕದ ಮೂಲಕ ಎತ್ತಿ ಹೊಳೆಯ ಈ ಕಡೆ ಇರುವ ಕಾರಿಗೆ ಕರೆತಂದು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.ಒಂದು ಹಳ್ಳಿಯ ಮೂಲಭೂತವಾದ ಸಮಸ್ಯೆ ಗಂಭೀರವಾಗಿದ್ದರೂ ಆಡಳಿತವು ಗಮನಹರಿಸದೇ ಇರವುದು ವ್ಯವಸ್ಥೆಯ ಲೋಪವಾಗಿದೆ.

Advertisement
ನಿಮ್ಮ ಅಭಿಪ್ರಾಯಗಳಿಗೆ...

ನಿಮ್ಮ ಅಭಿಪ್ರಾಯಗಳಿಗೆ...

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
Karnataka Weather | 27-03-2024 | ರಾಜ್ಯದಲ್ಲಿ ಒಣ ಹವೆ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
March 27, 2024
12:49 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror