Advertisement
ವೆದರ್ ಮಿರರ್

ಹವಾಮಾನ ವರದಿ | 19-05-2025 | ಮೇ 24 ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣ

Share

20.05.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮೇ 21ರ ತನಕ ವಾಯುಭಾರ ಕುಸಿತದ ಮಳೆಯಾಗಲಿದ್ದು, ನಂತರ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಮೇ 24ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣಗಳಿವೆ.

ಮಲೆನಾಡು : ಕೊಡಗು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮೇ 20ರ ತನಕ ಕೊಡಗು ಹಾಗೂ 21ರ ತನಕ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಾಯುಭಾರ ಕುಸಿತದ ಮಳೆಯಾದರೆ. ಮೇ 24ರಿಂದ ಮುಂಗಾರಿನ ಉತ್ತಮ ಮಳೆಯ ನಿರೀಕ್ಷೆ ಇದೆ.

ಒಳನಾಡು : ರಾಜ್ಯದ ಉತ್ತರ ಒಳನಾಡು ಬಹುತೇಕ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನಲ್ಲೂ ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮೇ 21ರ ತನಕ ದಕ್ಷಿಣ ಒಳನಾಡು ಹಾಗೂ 22ರ ತನಕ ಉತ್ತರ ಒಳನಾಡು ಭಾಗಗಳಲ್ಲಿ ವಾಯುಭಾರ ಕುಸಿತದ ಮಳೆಯಾಗಲಿದ್ದು, ನಂತರ ಬಿಡುವು ಪಡೆದರೂ ಮೇ 24ರಿಂದ ಅಲ್ಲಲ್ಲಿ ಮುಂಗಾರು ಮಳೆ ಆರಂಭವಾಗುವ ಲಕ್ಷಣಗಳಿವೆ.

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ಉತ್ತರ ಕೇರಳ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಮೇ 20ರಂದು ಕರ್ನಾಟಕ ಕರಾವಳಿ ಮೂಲಕ ಸಾಗಿ ಮೇ 25ರ ಸುಮಾರಿಗೆ ಗುಜರಾತ್ ಕರಾವಳಿ ತೀರ ತಲಪುವ ನಿರೀಕ್ಷೆಯಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಪರಸ್ಪರರ ಹೊಲಗಳಲ್ಲಿ ಕೆಲಸ ಮಾಡಿದ ರೈತರು -13 ರೈತ ಗುಂಪುಗಳಿಂದ ₹21 ಲಕ್ಷಕ್ಕೂ ಅಧಿಕ ಕೂಲಿ ವೆಚ್ಚ ಉಳಿತಾಯ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 13 ರೈತ ಗುಂಪುಗಳು ಪರಸ್ಪರರ ಹೊಲಗಳಲ್ಲಿ ಸರದಿಯಂತೆ ಕೆಲಸ…

1 day ago

ಅಡಿಕೆ ಬೆಲೆ ಕುಸಿತ, ಕಾರ್ಮಿಕರ ಕೊರತೆ – ಬೆಳೆಗಾರರಿಗೆ ಸಂಕಷ್ಟ

ಅಡಿಕೆ ಬೆಳೆಗಾರರಿಗೆ ಈ ಬಾರಿ ಬೆಲೆ ಕುಸಿತ, ಹೆಚ್ಚಿದ ಕಾರ್ಮಿಕ ವೇತನ, ನುರಿತ…

1 day ago

ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹ : ಬೆಳಗಾವಿಯಲ್ಲಿ ರೈತರಿಂದ ‘ಜೈಲ್ ಭರೋ’ ಚಳುವಳಿ ಆರಂಭ

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ಹಿಂಡಲಗಾ…

1 day ago

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಪೊಲೀಸ್ ಇಲಾಖೆಯಿಂದ 19 ಅಂಶಗಳ ಮಾರ್ಗಸೂಚಿ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಪರಿಸರ ಸ್ನೇಹಿ ಹಾಗೂ ಸುರಕ್ಷಿತ…

1 day ago

ಮೊಬೈಲ್ ಟವರ್‌ಗಳ ನಡುವೆ ಹಕ್ಕಿಗಳ ಕಲರವ – ಬಸ್‌ ನಿಲ್ದಾಣದ ಬೇವಿನ ಮರದಲ್ಲಿ ನೂರಾರು ಹಕ್ಕಿಗಳ ವಾಸ

ಕೊಪ್ಪಳ ಜಿಲ್ಲೆಯ ತಳಕಲ್‌ ಸರ್ಕಾರಿ ಬಸ್‌ ನಿಲ್ದಾಣದ ಎರಡು ಮರಗಳಲ್ಲಿ ನೂರಾರು ಹಕ್ಕಿಗಳು…

2 days ago

ಮಳೆ ಕೈಕೊಟ್ಟರೂ ಬಗ್ಗದ ಛಲ – ಸೂರ್ಯಕಾಂತಿ ಬೆಳೆದು ಮಾದರಿಯಾದ ದಿವ್ಯಾಂಗ ರೈತ ಮಹಿಳೆ

ಕೊಪ್ಪಳ ಜಿಲ್ಲೆಯ ದ್ಯಾಂಪುರ ಗ್ರಾಮದ ದಿವ್ಯಾಂಗ ರೈತ ಮಹಿಳೆ ಅನ್ನಪೂರ್ಣೇಶ್ವರಿ, ಮುಂಗಾರು ಮಳೆಯಿಂದ…

2 days ago