ಕಳೆದ 11 ವರ್ಷಗಳಲ್ಲಿ ದೇಶವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ಸರಣಿಯಲ್ಲಿ ಅವರು, ದೇಶಾದ್ಯಂತ ಮಹಿಳೆಯರು, ಯುವಕರು ಮತ್ತು ರೈತರನ್ನು ಸಬಲೀಕರಣಗೊಳಿಸಿ 25 ಕೋಟಿಗೂ ಹೆಚ್ಚು ಜನರನ್ನು ಬಡತನ ರೇಖೆಯಿಂದ ಹೊರತರುವ ಮಹತ್ವದ ಉಪಕ್ರಮಗಳು ಸಫಲವಾಗಿವೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತ ಪ್ರಕಾಶಮಾನವಾಗಿ ಬೆಳಗುತ್ತಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಭಾರತ ನೆಲೆಯಾಗಿದ್ದು, ವ್ಯಾಪಕ ಸುಧಾರಣೆಗಳನ್ನು ತರಲಾಗಿದೆ. ದೇಶವನ್ನು ಆತ್ಮನಿರ್ಭರವಾಗಿಸುವ ಸಂಕಲ್ಪ ಆಶಾದಾಯಕವಾಗಿ ಸಾಗಿದೆ. ಸಂವಿಧಾನದ ಮೌಲ್ಯಗಳು ತಮ್ಮ ನಿರಂತರ ಮಾರ್ಗದರ್ಶಿಯಾಗಿ ಉಳಿದಿವೆ. ಮುಂಬರುವ ವರ್ಷಗಳಲ್ಲಿ ವಿಕಸಿತ ಭಾರತದ ಸಾಮೂಹಿಕ ಕನಸನ್ನು ನನಸಾಗಿಸಲು ಇನ್ನಷ್ಟು ಶ್ರಮಿಸುವ ಬದ್ಧತೆಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

