Advertisement
ಸುದ್ದಿಗಳು

ಮುಳಿಯ ಗೋವಿಹಾರದಲ್ಲಿ ಗೋವಿನ ಉತ್ಪನ್ನಗಳ ತಯಾರಿಕಾ ಕಾರ್ಯಾಗಾರ

Share

ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್ ನೇತೃತ್ವದಲ್ಲಿ ‘ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು’ – ಗೋವು ಆಧಾರಿತ ಉತ್ಪನ್ನಗಳ ತಯಾರಿಕಾ ಕಾರ್ಯಗಾರ  ಪುತ್ತೂರಿನ ಕಬಕ ಸಮೀಪದ ಓಜಾಲದಲ್ಲಿರುವ ಮುಳಿಯ ಗೋವಿಹಾರದಲ್ಲಿ ಆಯೋಜಿಸಲಾಗಿತ್ತು.

Advertisement
Advertisement
Advertisement
ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಗೋಫಲ ಟ್ರಸ್ಟ್ ನ ಟ್ರಸ್ಟಿ ಕೇಶವ ಪ್ರಸಾದ್ ಮುಳಿಯ ಅವರು ದೀಪೋಜ್ವಲನ ಮಾಡಿ ನಮ್ಮಲ್ಲಿ ಗೋವಿನ ಮಹತ್ವ, ಗೋವಿನಿಂದ ತಯಾರಾಗುವ ಗೋಜನ್ಯ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಹೇಗೆ ಪೂರಕವಾಗಿರುತ್ತದೆ ಎಂದು ತಮ್ಮ ಅನುಭವ ಹಂಚಿಕೊಳ್ಳುವುದರೊಂದಿಗೆ ಗೋವಿನ ರಕ್ಷಣೆ ಮತ್ತು ಗೋಶಾಲೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಬೇಕೆಂದು ಹೇಳಿದರು.
Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಫಲ ಟ್ರಸ್ಟ್ ನ  ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ ಮಾತನಾಡಿ ಪ್ರತಿಯೊಬ್ಬರು ಗೋವುಗಳನ್ನು ಸಾಕಲು ಮನಸ್ಸು ಮಾಡಬೇಕು, ಪ್ರತಿಯೊಂದು ಮನೆಯಲ್ಲಿ ಗೋವುಗಳನ್ನು ಸಾಕಬೇಕು. ಈಗಿನ ಕಾಲಘಟ್ಟದಲ್ಲಿ ಗೋವುಗಳನ್ನು ಸಾಕಲು ಜನರು ಹೆದರುತ್ತಾರೆ. ಗೋ ಸಾಕಾಣೆಯೂ ಲಾಭದಾಯಕ. ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಬೆಳೆಸುತ್ತಾ ಗೋಶಾಲೆಗಳನ್ನು ಕೂಡ ಬೆಳೆಸಬೇಕು ಎಂದು ಹೇಳಿದರು.

ಕೃಷಿಕರಾದ ಪ್ರಶಾಂತ್ ರೈ ಕೈಕಾರ್ ರವರು ಪ್ರಾಸ್ತಾವಿಕ ಮಾತನ್ನಾಡಿ ಗೋವುಗಳ ಮಹತ್ವ ಗೋ ಉತ್ತನ್ನ ತಯಾರಿಕಾ ಕಾರ್ಯಾಗಾರದ ಅವಶ್ಯಕತೆಗಳನ್ನು ಹೇಳಿದರು.
Advertisement
ಗೋವಿಹಾರ ಅಧ್ಯಕ್ಷರಾದ ಕೃಷ್ಣನಾರಾಯಣ ಮುಳಿಯ ಮಾತನಾಡಿ ಗೋವಿನಿಂದಾಗುವ ಪ್ರಯೋಜನಗಳು ಮತ್ತು ಮುಳಿಯ ಗೋವಿಹಾರದ ಬಗ್ಗೆ ವಿಶೇಷ ಮಾಹಿತಿ, ಹಾಗೂ ಕಾರ್ಯಾಗಾರದ ಉಪಯುಕ್ತತೆ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಮೇಶ್ ಕುಲಕರ್ಣಿ, ಡಾ. ಎಮ್ ಯದುಕುಮಾರ್, ಉದಯ್ ಶಂಕರ್, ಕೆ.ಟಿ ವೆಂಕಟೇಶ್, ಭಾಸ್ಕರ್ ರಾವ್ ಉಬರಡ್ಕ, ಜಯಗುರು ಆಚಾರ್ಯ ಹಿಂದಾರು ಭಾಗವಹಿಸಿದ್ದರು.
Advertisement
ಗೋವಿನಿಂದಾಗಿ ಮನುಷ್ಯರಿಗೆ ದಿನನಿತ್ಯ ಬಳಕೆಯಾಗುವ ದಂತಮಂಜನ್, ಸೋಪು, ದೂಪಬತ್ತಿ, ಹಣತೆ, ವಿಭೂತಿ, ಬೆರಣಿ, ಧೂಪ, ಸ್ವರ್ಗಸಾರ, ಗೋನಂದಾಜಲ, ಎರೆಹುಳ ಗೊಬ್ಬರ, ಗಣಪತಿ ವಿಗ್ರಹ, ಅಮೃತ್ ಮಲಂ ಅಲ್ಲದೆ ಇತರ ಸೌಂದರ್ಯವರ್ಧಕ ಸಾಮಾಗ್ರಿಗಳು, ಕೃಷಿ ಭೂಮಿಗೆ ಬೇಕಾಗುವ ಜೀವಾಮೃತ, ಕೀಟ ನಿಯಂತ್ರಕ, ಜೀವಾಮೃತ ಔಷಧಿಗಳನ್ನು ತಯಾರಿಸುವ ವಿಧಾನವನ್ನು ಈ ಶಿಬಿರದಲ್ಲಿ ಕಲಿಸಿಕೊಡಲಾಯಿತು.
ಕಾರ್ಯಕ್ರಮವನ್ನು ಶಿವಪ್ರಸಾದ್ ನಿರೂಪಿಸಿದರು. ಮುಳಿಯ ಗೋವಿಹಾರದ ಉಸ್ತುವಾರಿ ಸದಾಶಿವ ಸ್ವಾಗತಿಸಿದರು. ಮುಳಿಯ ಗೋವಿಹಾರ ಸದಸ್ಯೆ ಅಶ್ವಿನಿಕೃಷ್ಣ ಮುಳಿಯ ಪ್ರಾರ್ಥಿಸಿದರು. ಶಂಕರ್ ಧನ್ಯವಾದಗೈದರು. ಕೋಕೋ ಗುರು ಮಾಲಕ ಸಂತೋಷ್, ಗೊಲೆಕ್ಸ್ ಕೃಷ್ಣಮೋಹನ್, ದಿನೇಶ್ ಪ್ರಸನ್ನ ಕರಿಯಾಳ, ಇಶಾ ಸುಲೋಚನಾ ಮುಳಿಯ ಮುಂತಾದವರು ಭಾಗವಹಿಸಿದ್ದರು. ಗೋಫಲ ಟ್ರಸ್ಟ್ ನ ಜನರಲ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…

2 hours ago

ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |

ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…

12 hours ago

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…

16 hours ago

ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…

16 hours ago

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…

1 day ago

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

1 day ago