ನೆಲ್ಯಾಡಿಯ ಮುಳಿಯ ಸಿಲ್ವರಿಯ ಮಳಿಗೆಯಲ್ಲಿ ಚಿನ್ನದ ಕರಿಮಣಿ ಉತ್ಸವವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಪೂವಾಜೆ ಅವರು ಭಾಗವಹಿಸಿ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಥಮ ಖರೀದಿದಾರಗಿ ಸುಬ್ರಹ್ಮಣ್ಯ ಆಚಾರ್ಯ ಇವರು ಚಿನ್ನದ ಕರಿಮಣಿಯನ್ನು ಖರೀದಿಸಿದರು. ಈ ಸಂದರ್ಭದಲ್ಲಿ 18 ಕ್ಯಾರೇಟ್ ಗುಣಮಟ್ಟದ ರೋಸ್ ಗೋಲ್ಡ್ ಕರಿಮಣಿಗಳನ್ನು ಬಿಡಿಗಡೆಗೊಳಿಸಲಾಯಿತು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಫ್ಲೋರ್ ಮ್ಯಾನೇಜರ್ ಪ್ರವೀಣ್ ಮಾತನಾಡಿ ನಮ್ಮಲ್ಲಿ ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಸುಮಾರು 2 ಗ್ರಾಂ ನಿಂದ 100 ಗ್ರಾಂನ ವರೆಗೆ 300ಕ್ಕೂ ಅಧಿಕ ಡಿಸೈನ್‍ಗೆ ¼ ಕರಿಮಣಿಗಳು ನೆಲ್ಯಾಡಿ ಜನತೆಗೆ ಲಭ್ಯ ಅದಲ್ಲದೆ ಮುಷ್ಠಿ ಪಿರಿ, ಮುಷ್ಠಿ ಕಟ್ಸ್, ಕಟ್ಸ್ ಕಂಠಿ, ಗೋಲು ಕಂಠಿ, ದಳಪತಿ, ಗಾಂಚು ಕಂಠಿ, ಗಾಂಚು ಪಿರಿ, ಧೃವಂ ಕಂಠಿ, ಕೆಕೆಜಿಸಿ, ನುಗ್ಗೆ ಕಂಠಿ, ನುಗ್ಗೆ ಕವರ್, ದಳ ಕವರ್, ಧ್ರುವಂ ಕವರ್, ಅಂಜಲಿ ಕಂಠಿ, ಪಟ್ಟಿ ಕಂಠಿ, ಚಕ್ರ ಕಂಠಿ, ಎಫ್‍ಡಿಸಿ ಕಂಠಿ, ಬಾಂಬೆ ಕಂಠಿ, ಜೋಮಾಲೆ ಕಂಠಿ, ಜಿಜಿ ಕಂಠಿ, ಜಿಜಿಪಿರಿ ಕಂಠಿ, ಪವಿತ್ರ ಕಂಠಿ, ತ್ರೀರಿಂಗ್ ಕಂಠಿ, ಮುಷ್ಠಿ ಕಂಠಿ, ಗ್ಲಾಸ್ ಕಟ್ ಕಂಠಿ, ಕಟ್ಸ್ ಕವರ್ ಕಂಠಿ, ದಳ ಪಿರಿ ಕಂಠಿ. ಮುಂತಾದ ಕರಿಮಣಿ ಲಭ್ಯವಿದೆ ಎಂದು ಹೇಳಿದರು.
ನೆಲ್ಯಾಡಿ ಸಿಲ್ವರಿಯ ವ್ಯವಸ್ಥಾಪಕ ಪ್ರಶಾಂತ್ ಧನ್ಯವಾದ ಮಾಡಿದರು, ಮುಳಿಯ ಸಿಲ್ವರಿಯ ಸಿಬ್ಬಂದಿ ದೀಪಕ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…