ಈ ಕನ್ನಡದ ಮಣ್ಣಿನ, ಕನ್ನಡ ನಾಡಿನ ಹೆಮ್ಮೆಯ ಆಭರಣ ಸಂಸ್ಥೆ ಮುಳಿಯ ಜ್ಯುವೆಲ್ಸ್ ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತನವನ್ನು ವಿಶೇಷವಾಗಿ ನ.10 ರಂದು ಬೆಳಿಗ್ಗೆ 10:30 ರಿಂದ ಆಚರಿಸುತ್ತಿದೆ. ಈ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದೆ. ಕನ್ನಡ ಭಾವಗೀತಾಭಿನಯ ಹೆಗ್ಗಳಿಕೆಯ ಮಾನಸಿ ಸುಧೀರ್ ಇವರಿಂದ “ಕನ್ನಡ ಬದುಕು ಬಂಗಾರ” ಎಂಬ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ಆಯೋಜಿಸುತ್ತಿದೆ. ಇದರ ಮುಖಾಂತರ “ಬೆಳೆಸೋಣ ನಮ್ಮತನ” ಎಂಬ ಸಂದೇಶವನ್ನು ಸಂಸ್ಥೆಯು ಸಾರಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ನಿಕಟಪೂರ್ವಾಧ್ಯಕ್ಷ ಆಗಿರುವ ಬಿ ಐತ್ತಪ್ಪ ನಾಯ್ಕ್ ಆಗಮಿಸಲಿದ್ದಾರೆ. ಈ ಕನ್ನಡತನದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ.
ಮುಳಿಯ ಚಿನ್ನೋತ್ಸವದ ಸಂದರ್ಭದಲ್ಲಿ ನಡೆಯುವ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಂಸ್ಥೆಯ ಚೇರ್‍ಮೇನ್‍ರವರಾದ ಮುಳಿಯ ಕೇಶವ ಪ್ರಸಾದ್ ಅವರು “ಕನ್ನಡತನದ ಸಾಂಸ್ಕೃತಿಕ ಪರಂಪರೆಯುಳ್ಳ ನಾಡಿನ ಹೆಮ್ಮೆಯ ಆಭರಣ ಉದ್ಯಮ ಸಂಸ್ಥೆಯಾದ ಮುಳಿಯ ಜ್ಯುವೆಲ್ಸ್ ಸಾಹಿತ್ಯ, ಸಂಸ್ಕøತಿಯನ್ನು ನಮ್ಮ ಮನೆತನದ ಬದುಕು-ಭಾವವಾಗಿದೆ. ಹೀಗಾಗಿ ಈ ಬಗೆಯ ಕಾರ್ಯಕ್ರಮ ಎಂದು ಹೇಳಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…