Advertisement
ಸುದ್ದಿಗಳು

ನ.13 : ಸೌಗಂಧಿಕಾದಲ್ಲಿ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರ ಛಾಯಾಚಿತ್ರ ಪ್ರದರ್ಶನ

Share

ಪುತ್ತೂರು ತಾಲೂಕಿನ ಪರ್ಪುಂಜದಲ್ಲಿರುವ ಸೌಗಂಧಿಕಾ ದಲ್ಲಿ ಹಿರಿಯ ಪತ್ರಕರ್ತ ಮತ್ತು ವನ್ಯಜೀವಿ ಛಾಯಾಗ್ರಾಹಕ ಕೆ.ಶಿವಸುಬ್ರಹ್ಮಣ್ಯ ಅವರು ಸೆರೆಹಿಡಿದಿರುವ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯು ನ.13 ರಂದು ಶನಿವಾರ ಸಂಜೆ ಐದು ಗಂಟೆಗೆ  ನಡೆಯಲಿದೆ.

Advertisement
Advertisement

ಕನ್ನಡಪ್ರಭ, ಹೊಸ ದಿಗಂತ, ಉದಯವಾಣಿ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಶಿವಸುಬ್ರಮಣ್ಯ ಅವರು ಮೂರು ದಶಕಗಳಿಗೂ ಮಿಗಿಲಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕೃಷಿ ಮನೆತನದಲ್ಲಿ ಹುಟ್ಟಿ ಬೆಳೆದ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು, ಮುಂಗಾರು, ಹೊಸ ದಿಗಂತ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಕೀಯ ವಿದ್ಯಮಾನ ಗಳಲ್ಲಿ ಅಪಾರ ಅನುಭವ ಹೊಂದಿರುವ ಇವರಿಗೆ, ಪರಿಸರ, ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರ ಮೆಚ್ಚಿನ ಜೀವನಾಡಿ. ಇವರ ಮುಖ್ಯ ಹವ್ಯಾಸ ವನ್ಯಜೀವಿ ಛಾಯಾಗ್ರಹಣ. ಪಕ್ಷಿ ಸಂಕುಲಗಳ ಬಗ್ಗೆ ಅಧ್ಯಯನ ಮತ್ತು ವಿಶೇಷವಾದ ಒಲವು ಹೊಂದಿ, ಪಕ್ಷಿ ಛಾಯಾಗ್ರಹಣವನ್ನು ಹೆಚ್ಚು ಮಾಡುತ್ತಿದ್ದಾರೆ. ಇವರ ಕ್ಯಾಮೆರಾ ಕಣ್ಣಿಗೆ ಸಿಕ್ಕ ಪ್ರಾಣಿ, ಪಕ್ಷಿ, ನಿಸರ್ಗದ ಚಿತ್ರಗಳು ಅನೇಕ ಕಡೆ ಪ್ರಕಟಗೊಂಡಿವೆ. ಕ್ಯಾಲೆಂಡರ್ ಗಳಲ್ಲಿ ಮುದ್ರಣಗೊಂಡಿವೆ.

Advertisement
ಶಿವಸುಬ್ರಹ್ಮಣ್ಯ ಕೆ

ಪತ್ರಿಕೋದ್ಯಮ ವೃತ್ತಿಯಿಂದ ಸದ್ಯ ಸ್ವಲ್ಪ ಬಿಡುವು ಪಡೆದಿರುವ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದರೂ ಬಿಡುವಾದಾಗ ಕಲ್ಮಡ್ಕ ದ ಸ್ವಂತ ನೆಲದಲ್ಲಿ ಗಿಡ ಮರ, ಬಳ್ಳಿಗಳ,ಪೋಷಣೆ ಮಾಡುತ್ತಾ ಪಕ್ಷಿ ವೀಕ್ಷಣೆ ಮಾಡುತ್ತಾ, ತನಗಿಷ್ಟವಾದ ಸಂಗೀತವನ್ನು ಆಲಿಸುತ್ತಾ ಪ್ರಕೃತಿಯೊಂದಿಗಿನ ನಂಟನ್ನು ಉಳಿಸಿಕೊಂಡಿದ್ದಾರೆ. ಲೇಖಕಿ ಡಾ. ದೀಪಾ ಫಡ್ಕೆ ಯವರು ಇವರ ಮಡದಿ. ಮಗಳು ಕು. ಗೌತಮಿ.

ಶಿವಸುಬ್ರಹ್ಮಣ್ಯ ಅವರು ಅಂತರ ವಿಶ್ವವಿದ್ಯಾಲಯ ಮಟ್ಟದ ವಿಜಿ ಟ್ರೋಫಿ ಕರ್ನಾಟಕ ವಲಯ ಮಟ್ಟದ ಟೂರ್ನಿ ಹಾಗೂ ರಾಷ್ಟ್ರೀಯ ಮಾಧ್ಯಮ ಕ್ರಿಕೆಟ್ ಟೂರ್ನಿ ಆಡಿದ್ದಾರೆ.ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲೂ ಪಂದ್ಯ ಆಡಿ ಪಂದ್ಯದ ಅರ್ಧ ಶತಕ ಗಳಿಸಿದ ನಮ್ಮ ಜಿಲ್ಲೆಯ ಏಕೈಕ ಆಟಗಾರ. ಮೂಡಬಿದಿರೆಯ ಡಾ. ನಾ. ಮೊಗಸಾಲೆಯವರು ಇವರ ಕುರಿತು “ಮೂರನೆಯ ಕಣ್ಣು,” ಎನ್ನುವ ಹೊತ್ತಿಗೆ ಯೊಂದನ್ನು ಹೊರತಂದಿದ್ದಾರೆ.

Advertisement

ನ 13ರಂದು ಶನಿವಾರ ಸಂಜೆ ನಡೆಯಲಿರುವ ಸರಳ ಸಮಾರಂಭದಲ್ಲಿ ಪುತ್ತೂರಿನ ಉರಗತಜ್ಞ ರವೀಂದ್ರನಾಥ ಐತಾಳರು ಮತ್ತು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇದರ ಕನ್ನಡ ಉಪನ್ಯಾಸಕರು ವಿಜಯಕುಮಾರ ಮೊಳೆಯಾರ , ಪತ್ರಕರ್ತ ಶಿವ ಸುಬ್ರಹ್ಮಣ್ಯ ಕಲ್ಮಡ್ಕ ಭಾಗವಹಿಸುವರು ಎಂದು ಸೌಗಂಧಿಕಾದ ಚಂದ್ರ ತಿಳಿಸಿದ್ದಾರೆ.

ಕೊರೋನಾದ ನಿಯಮಗಳನ್ನು ಪಾಲಿಸುತ್ತಾ ಪೋಷಕರು ಮಕ್ಕಳೊಂದಿಗೆ ನವಂಬರ್ 13 ರಿಂದ ನವೆಂಬರ್ 21 ರವರೆಗೆ ಮುಂಜಾನೆ ಹತ್ತರಿಂದ ಸಂಜೆ ಆರರ ತನಕ ಈ ಪಕ್ಷಿ ಛಾಯಾ ಚಿತ್ರ ಪ್ರದರ್ಶನವನ್ನು ವೀಕ್ಷಿಸಬಹುದು  ಎಂದು  ಚಂದ್ರ ಸೌಗಂಧಿಕಾ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9900409380

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

1 day ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

1 day ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

1 day ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

1 day ago

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

2 days ago