ಭಾರತೀಯ ರಬ್ಬರ್‌ ಮಂಡಳಿ ಸದಸ್ಯರಾಗಿ ಮುಳಿಯ ಕೇಶವ ಭಟ್‌ ನಾಮನಿರ್ದೇಶನ |

September 21, 2022
11:53 AM

ಭಾರತೀಯ ರಬ್ಬರ್‌ ಮಂಡಳಿ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಮುಳಿಯ ಕೇಶವ ಭಟ್‌  ಭಾರತ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ರಾಜ್ಯದಿಂದ ಇಬ್ಬರು ಈ ಮಂಡಳಿಯಲ್ಲಿ ಇದ್ದಾರೆ. ಸಂಸದ ನಳಿನ್‌ ಕುಮಾರ್‌ ಕೂಡಾ ಈ ಮಂಡಳಿ ಸದಸ್ಯರಾಗಿದ್ದಾರೆ.

ಭಾರತೀಯ ರಬ್ಬರ್‌ ಮಂಡಳಿಯು ರಬ್ಬರ್‌ ಬೆಳೆಗಾರರ ಹಿತ ಹಾಗೂ ರಬ್ಬರ್‌ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿದೆ. ದೇಶದ ಅತ್ಯಂತ ಪ್ರತಿಷ್ಠಿತ ಮಂಡಳಿಗಳಲ್ಲಿ ಒಂದಾಗಿರುವ ರಬ್ಬರ್‌ ಮಂಡಳಿಯು, ಅಂತರಾಷ್ಟ್ರೀಯ ರಬ್ಬರ್‌ ಮಾರುಕಟ್ಟೆ ಹಾಗೂ ರಬ್ಬರ್‌ ಸಂಸ್ಥೆಗಳು ಮತ್ತು ರಬ್ಬರ್‌ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತದೆ. ವಾಣಿಜ್ಯ ಇಲಾಖೆಯ ಅಡಿಯಲ್ಲಿ ಬರುವ ಈ ಮಂಡಳಿಯು ರಬ್ಬರ್‌ ಉದ್ಯಮಗಳಿಗೆ ರಬ್ಬರ್‌ ಪೂರೈಕೆ ಹಾಗೂ ರಬ್ಬರ್‌ ಬಳಕೆಯ ಕಡೆಗೂ ಆದ್ಯತೆ ನೀಡುತ್ತದೆ. ಈ ಸಂಸ್ಥೆಗೆ ರಬ್ಬರ್‌ ಬೆಳೆಗಾರರ ಪರವಾಗಿ ಮುಳಿಯ ಕೇಶವ ಭಟ್‌ ಅವರನ್ನು ಭಾರತ ಸರ್ಕಾರವು ಮುಂದಿನ ಮೂರು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿದೆ.‌ ಮುಳಿಯ ಕೇಶವ ಭಟ್‌ ಅವರು 10 ವರ್ಷಗಳಿಂದ ಗುತ್ತಿಗಾರು ರಬ್ಬರ್‌ ಸಹಕಾರಿ ಸಂಘದ ನಿರ್ದೇಶಕರಾಗಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

ಈ ಮಂಡಳಿಯಲ್ಲಿ 16 ಜನ ಸದಸ್ಯರು ಇದ್ದಾರೆ. ವಿವಿಧ ರಾಜ್ಯಗಳ ಐಎಎಸ್‌ ಅಧಿಕಾರಿಗಳು, ಸಂಸದ ನಳಿನ್‌ ಕುಮಾರ್‌ ಕಟೀಲು ಸೇರಿದಂತೆ ಇತರ ರಾಜ್ಯದ ಸಂಸದರು ಹಾಗೂ ತೋಟಗಾರಿಕಾ ಕಮಿಶನರ್‌, ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖರು ಇದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ
September 17, 2026
2:14 PM
by: ಸಾಯಿಶೇಖರ್ ಕರಿಕಳ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror