ಮುಳಿಯ ಕೇಶವ ಭಟ್
ಭಾರತೀಯ ರಬ್ಬರ್ ಮಂಡಳಿ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಮುಳಿಯ ಕೇಶವ ಭಟ್ ಭಾರತ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ರಾಜ್ಯದಿಂದ ಇಬ್ಬರು ಈ ಮಂಡಳಿಯಲ್ಲಿ ಇದ್ದಾರೆ. ಸಂಸದ ನಳಿನ್ ಕುಮಾರ್ ಕೂಡಾ ಈ ಮಂಡಳಿ ಸದಸ್ಯರಾಗಿದ್ದಾರೆ.
ಭಾರತೀಯ ರಬ್ಬರ್ ಮಂಡಳಿಯು ರಬ್ಬರ್ ಬೆಳೆಗಾರರ ಹಿತ ಹಾಗೂ ರಬ್ಬರ್ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿದೆ. ದೇಶದ ಅತ್ಯಂತ ಪ್ರತಿಷ್ಠಿತ ಮಂಡಳಿಗಳಲ್ಲಿ ಒಂದಾಗಿರುವ ರಬ್ಬರ್ ಮಂಡಳಿಯು, ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ಹಾಗೂ ರಬ್ಬರ್ ಸಂಸ್ಥೆಗಳು ಮತ್ತು ರಬ್ಬರ್ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತದೆ. ವಾಣಿಜ್ಯ ಇಲಾಖೆಯ ಅಡಿಯಲ್ಲಿ ಬರುವ ಈ ಮಂಡಳಿಯು ರಬ್ಬರ್ ಉದ್ಯಮಗಳಿಗೆ ರಬ್ಬರ್ ಪೂರೈಕೆ ಹಾಗೂ ರಬ್ಬರ್ ಬಳಕೆಯ ಕಡೆಗೂ ಆದ್ಯತೆ ನೀಡುತ್ತದೆ. ಈ ಸಂಸ್ಥೆಗೆ ರಬ್ಬರ್ ಬೆಳೆಗಾರರ ಪರವಾಗಿ ಮುಳಿಯ ಕೇಶವ ಭಟ್ ಅವರನ್ನು ಭಾರತ ಸರ್ಕಾರವು ಮುಂದಿನ ಮೂರು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿದೆ. ಮುಳಿಯ ಕೇಶವ ಭಟ್ ಅವರು 10 ವರ್ಷಗಳಿಂದ ಗುತ್ತಿಗಾರು ರಬ್ಬರ್ ಸಹಕಾರಿ ಸಂಘದ ನಿರ್ದೇಶಕರಾಗಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
ಈ ಮಂಡಳಿಯಲ್ಲಿ 16 ಜನ ಸದಸ್ಯರು ಇದ್ದಾರೆ. ವಿವಿಧ ರಾಜ್ಯಗಳ ಐಎಎಸ್ ಅಧಿಕಾರಿಗಳು, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಇತರ ರಾಜ್ಯದ ಸಂಸದರು ಹಾಗೂ ತೋಟಗಾರಿಕಾ ಕಮಿಶನರ್, ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖರು ಇದ್ದಾರೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…