ರೂರಲ್‌ ಮಿರರ್‌ ಪ್ರಕಾಶನದ ಪುಸ್ತಕ “ಮುಸ್ಸಂಜೆಯ ಹೊಂಗಿರಣ” ಆನ್‌ ಲೈನ್‌ ಖರೀದಿಗೆ ಅವಕಾಶ

February 22, 2021
11:21 AM

ರೂರಲ್‌ ಮಿರರ್‌ ಪ್ರಕಾಶನದ ಕೊರೋನಾ ಸಮಯದ ಪಾಸಿಟಿವ್‌ ಸಂಗತಿಗಳ ಬಗೆಗಿನ ಹಿರಿಯ ಬರಹಗಾರ , ಪತ್ರಕರ್ತ ನಾ.ಕಾರಂತ ಪೆರಾಜೆ ಅವರು ಬರೆದಿರುವ “ಮುಸ್ಸಂಜೆಯ ಹೊಂಗಿರಣ” ಪುಸ್ತಕ ಬಿಡುಗಡೆಯಾಗಿದೆ. ಈಗಾಗಲೇ ಉತ್ತಮ ಪ್ರತಿಕ್ರಿಯೆ ಬಂದಿರುವ ಈ ಪುಸ್ತಕ ಇದೀಗ ಆನ್‌ ಲೈನ್‌ ಮೂಲಕವೂ ಖರೀದಿಗೆ ಅವಕಾಶ ಮಾಡಲಾಗಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ. ಕೆಳಗಿನ ಫೋಟೋದಲ್ಲಿ ಈ ಬಗ್ಗೆ ವಿವರ ನೀಡಲಾಗಿದೆ.

 

ಪುಸ್ತಕದ ಬಗ್ಗೆ ಡಾ . ಬಿ .ಎ . ವಿವೇಕ ರೈ ಅವರು ಹೀಗೆ ಹೇಳಿದ್ದಾರೆ, 

ಕೊರೋನ ಉಂಟುಮಾಡಿದ ಬಹುರೂಪಿ ಪಾಸಿಟಿವ್ ಪರಿಣಾಮಗಳನ್ನು ನೈಜ ಘಟನೆಗಳ ನಿದರ್ಶನಗಳ ಮೂಲಕ ಮನಮುಟ್ಟುವಂತೆ ವರ್ಣಿಸಿದ್ದೀರಿ . ಈ ಪುಸ್ತಕದ ಒಂದೊಂದು ಕಿರು ಕಥನವೂ ಬದುಕು ಕಟ್ಟುವ ಒಂದೊಂದು ಸಾಹಸಗಾಥೆಯಾಗಿದೆ . ಸಂಕಷ್ಟದ ಕಾಲದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ , ಹೊಸ ಬದುಕನ್ನು ಕಟ್ಟಬಹುದು ಎಂದು ಮಾಡಿ ತೋರಿಸಿದ ಜನರು ನಮಗೆ ನಿಜವಾದ ಮಾರ್ಗದರ್ಶಕರಾಗಿದ್ದಾರೆ . ನೂರು ಉಪದೇಶಗಳಿಗಿಂತ ಇಂತಹ ಒಂದು ದಿಟ್ಟಹೆಜ್ಜೆ ಹೆಚ್ಚು ಆತ್ಮವಿಶ್ವಾಸವನ್ನು ಉಂಟುಮಾಡುತ್ತದೆ . ಬದುಕನ್ನು ಹೊಸತಾಗಿ ಕಟ್ಟುವವರು , ಹಳ್ಳಿಗಳ ನೈಸರ್ಗಿಕ ಸುಖವನ್ನು ಅರಸುವವರು , ಕೃಷಿಯ ಮೂಲಕ ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವವರು , ಸಾವಯವ ಸಾಮೂಹಿಕ ಜೀವನಕ್ಕೆ ಒಲಿಯುವವರು ಓದಬೇಕಾದ ಪುಸ್ತಕ ‘ ಮುಸ್ಸಂಜೆಯ ಹೊಂಗಿರಣ ‘ . ಅದು ಗಾತ್ರದಲ್ಲಿ ಕಿರಿದಾದುದು , ಸೂತ್ರದಲ್ಲಿ ಹಿರಿದಾದುದು .

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?
October 5, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?
October 5, 2026
12:09 PM
by: ಸಾಯಿಶೇಖರ್ ಕರಿಕಳ
ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror