ಮ್ಯಾನ್ಮಾರ್‌ ಅಡಿಕೆ ಕಳ್ಳಸಾಗಾಣಿಕೆ ನಿಯಂತ್ರಣ – ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ

November 25, 2025
9:43 PM

ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಕಡಿಮೆಯಾಗಿರುವ ಕಾರಣದಿಂದ ಮಿಜೋರಾಂ ಅಡಿಕೆ ರೈತರಿಗೆ ಸದ್ಯ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಕಳ್ಳಸಾಗಾಣಿಕೆ ಕಡಿಮೆಯಾಗಿರುವ ಕಾರಣದಿಂದ  ರಾಜ್ಯದಲ್ಲೂ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇದೆ.

ಈ ವರ್ಷದ ಆರಂಭದಿಂದಲೇ ಮಿಜೋರಾಂ ಜಿಲ್ಲೆಯಲ್ಲಿ  ಅಡಿಕೆ ಬೆಳೆಗಾರರು ಈ ವರ್ಷ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆದಿದ್ದಾರೆ.  ಈ ವರ್ಷ  ರೈತರು ಸುಮಾರು 50 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಕೊಯ್ಲು ಮಾಡಿದ್ದಾರೆ,  ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಲೆಗಳೂ ಉತ್ತಮವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಮಿಜೋರಾಂನ ಹಚ್ಚೇಕ್ ಪ್ರದೇಶದ ಸುಮಾರು 32 ಹಳ್ಳಿಗಳಲ್ಲಿ ಸುಮಾರು 30 ಹಳ್ಳಿಗಳಲ್ಲಿ ಅಡಿಕೆ ಬೆಳೆಯುತ್ತವೆ.

ತ್ರಿಪುರ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಮಾಮಿತ್ ಜಿಲ್ಲೆಯ ಹಚೇಕ್ ಪ್ರದೇಶದ ಅಡಿಕೆ ಬೆಳೆಗಾರರ ಸಂಘದ  ಕಾರ್ಯದರ್ಶಿ ವಿಕ್ಟರ್ ಎಂ.ಎಸ್. ಡಾಂಗ್ಲಿಯಾನ ಅವರ ಪ್ರಕಾರ, ಈ ವರ್ಷ ಈ ಪ್ರದೇಶದ ರೈತರಿಗೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉತ್ತಮ ಬೆಲೆಗಳು ಲಭ್ಯವಾಗಿದೆ. ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಕಡಿಮೆಯಾದ ಕಾರಣ ಸ್ಥಳೀಯವಾಗಿ ಉತ್ಪಾದಿಸುವ ಅಡಿಕೆ ಉತ್ತಮ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.  ಅಡಿಕೆ ಕಳ್ಳಸಾಗಣೆ ವ್ಯಾಪಕವಾಗಿದ್ದ ಕಾಲದಲ್ಲಿ ಪ್ರತಿ ಚೀಲಕ್ಕೆ 1,200 ರಿಂದ 1,500 ರೂ.ವರೆಗೆ ಮಾರಾಟವಾಗುತ್ತಿದ್ದ ಅಡಿಕೆ ಈಗ ಪ್ರತಿ ಚೀಲಕ್ಕೆ 2,500 ರಿಂದ 3,000 ರೂ.ವರೆಗೆ ಮಾರಾಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಡಿಕೆ ಕಳ್ಳಸಾಗಾಣಿಕೆ ತಡೆಯಾದಂತೆಯೇ ರಾಜ್ಯದಲ್ಲೂ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಈ ಬಾರಿ ಅಡಿಕೆಯ ಕೊರತೆಯೂ ಇರುವುದರಿಂದ ಹೊಸ ಅಡಿಕೆ ಧಾರಣೆ ಕೂಡಾ ಏರಿಕೆ ಸಾಧ್ಯತೆ ಇದೆ. ಕಳೆದ ವರ್ಷ ಮಾರ್ಚ್‌ ಬಳಿಕ ಹೊಸ ಅಡಿಕೆ ಧಾರಣೆ 450 ರೂಪಾಯಿ ತಲುಪಿದ್ದರೆ, ಈ ಬಾರಿ ಜನವರಿ ಅಂತ್ಯ-ಫೆಬ್ರವರಿಯ ಹೊತ್ತಿಗೆ 450 ರೂಪಾಯಿ ತಲಪುವ ನಿರೀಕ್ಷೆ ಇದೆ. ಹಳೆ ಅಡಿಕೆ ಧಾರಣೆ ಈಗಾಗಲೇ 500 ರೂಪಾಯಿ ದಾಟಿರುವುದರಿಂದ ಮುಂದೆ ಗಣನೀಯವಾಗಿ ಧಾರಣೆ ಏರಿಕೆಯ ನಿರೀಕ್ಷೆಯನ್ನು ಬೆಳೆಗಾರರು ಇಲ್ಲಿ ಇರಿಸಿಕೊಳ್ಳಬೇಕಾಗಿಲ್ಲ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror