#NagaraPanchami | ನಿಜ ನಾಗರಹಾವನ್ನು ತಂದು ವಿಶೇಷವಾಗಿ ಆರಾಧನೆ…! | ಎರಡು ದಿನಗಳ ಕಾಲ ನಾಗರಹಾವಿಗೆ ವಿಶೇಷ ಪೂಜೆ..! |

August 23, 2023
2:53 PM
ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ನಿಜ ನಾಗರಹಾವನ್ನು ಕಾಡಿನಿಂದ ತಂದು ವಿಶೇಷ ಪೂಜೆ ಮಾಡಿ ಮತ್ತೆ ಕಾಡಿಗೆ ಬಿಡುವ ವಿಶೇಷ ಆಚರಣೆ ಅನೇಕ ಸಮಯಗಳಿಂದ ನಡೆಯುತ್ತಿದೆ.

ಈಚೆಗೆ ನಾಗರಪಂಚಮಿ ಎಲ್ಲೆಡೆ ಸಂಭ್ರಮದಿಂದ ನಡೆಯಿತು. ತುಳುನಾಡಿನಲ್ಲಿ ನಾಗ ಬನಗಳಲ್ಲಿ, ನಾಗನ ಕಟ್ಟೆಗಳಲ್ಲಿ ನಾಗನ ಕಲ್ಲಿಗೆ ಹಾಲೆರೆದು ವಿಶೇಷ ಪೂಜೆಯ ಮೂಲಕ ಆಚರಣೆ ನಡೆಯಿತು. ಆದರೆ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ನಿಜ ನಾಗರಹಾವನ್ನು ಕಾಡಿನಿಂದ ತಂದು ವಿಶೇಷ ಪೂಜೆ ಮಾಡಿ ಮತ್ತೆ ಕಾಡಿಗೆ ಬಿಡುವ ವಿಶೇಷ ಆಚರಣೆ ಅನೇಕ ಸಮಯಗಳಿಂದ ನಡೆಯುತ್ತಿದೆ.

ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಬತ್ತಿಸ್ ಶಿರಾಳ ಎಂಬ ಊರಿನಲ್ಲಿ ಈ ಆಚರಣೆ ನಡೆಯುತ್ತದೆ. ಅಲ್ಲಿ ಪ್ರತಿವರ್ಷ ನಾಗರ ಪಂಚಮಿಯಂದು ಲೈವ್  ಆಗಿ ಆಚರಿಸುತ್ತಾರೆ. ಈ ಆಚರಣೆಗೆ ಎರಡು ದಿನ ಮುನ್ನ ಕಾಡಿಗೆ ಹೋಗಿ ಜನರು ನಿಜ ನಾಗರಹಾವನ್ನು ಹಿಡಿದುಕೊಂಡು ಬರುತ್ತಾರೆ. ಎಲ್ಲರೂ ಊರಿನ ಹೊರಭಾಗದಲ್ಲಿ ಸೇರುತ್ತಾರೆ ನಂತರ ಮೆರವಣಿಗೆ ಮೂಲಕ ಬರುತ್ತಾರೆ. ಮಣ್ಣಿನ ಮಡಿಕೆಯಲ್ಲಿ ನಿಜ ಹಾವನ್ನು  ಇರಿಸಿ ಮನೆಗೆ  ತಂದು ಮನೆಯಲ್ಲಿ ಎರಡು ದಿನಗಳ ಕಾಲ ಪೂಜಿಸಿ ನಂತರ ಪುನಃ ಕಾಡಿಗೆ ಹೋಗಿ ಬಿಟ್ಟು ಬರುತ್ತಾರೆ.

ಈ ಆಚರಣೆಯನ್ನು ನೂರಾರು ವರ್ಷಗಳಿಂದ ಈ ಹಳ್ಳಿಯ ಜನರು ಮಾಡುತ್ತಾ ಬಂದಿದ್ದಾರೆ. ಇನ್ನೊಂದು ವಿಶೇಷವೇನೆಂದರೆ, ಇದುವರೆಗೂ ಯಾವ ಹಾವಿಗೂ ಹಿಂಸೆ ತೊಂದರೆ ಮಾಡಿಲ್ಲ. ಈ ಸಮಯದಲ್ಲಿ ಯಾವ ಹಾವುಗಳು ಮನುಷ್ಯರಿಗೆ ಕಚ್ಚಿದ ಉದಾಹರಣೆಗಳು ಕಡಿಮೆ. ಇಂತಹ ವಿಶೇಷ ಆಚರಣೆಯ ಮೂಲಕ ನಾಗರಪಂಚಮಿಯು ಶಿರಾಳ ಎಂಬ ಊರಿನಲ್ಲಿ ಗಮನ ಸೆಳೆದಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror