ಆಯುರ್ವೇದ ಔಷಧಿಯಲ್ಲಿ ಅರಸಿನವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಬ್ಯಾಕ್ಟೀರಿಯಾ ನಿವಾರಕ, ವೈರಸ್ ನಿವಾರಕ ಹಾಗೂಅಲರ್ಜಿನಿವಾರಕ ಮತ್ತು ಊತ ಗಾಯಗಳಿಗೆ ಅತ್ಯಂತ ಉಪಯೋಗಕಾರಿಯಾಗಿದೆ.
ಇದನ್ನು ಅನೇಕ ಚರ್ಮರೋಗಗಳಲ್ಲಿ ಮಧುಮೇಹದಲ್ಲಿ ಶ್ವಾಸಕೋಶ ಸಂಬಂಧ ಕಾಯಿಲೆಗಳಲ್ಲಿ ಔಷಧಿ ರೂಪದಲ್ಲಿ ಉಪಯೋಗಿಸಲಾಗುತ್ತದೆ. ಹಾಗೂ ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲಾಗುವುದು ಇದನ್ನು ದಿನನಿತ್ಯದ ಆಹಾರದಲ್ಲೂ ಸಹ ಬಳಸಲಾಗುವುದು. ಅರಸಿನ ಎಲೆಯನ್ನು ಕರಾವಳಿಯ ಜಿಲ್ಲೆಗಳಲ್ಲಿ ನಾಗರಪಂಚಮಿಯ ಹಬ್ಬದಂದು ಸಿಹಿ ಕಡಬು ತಯಾರಿಸಲು ಉಪಯೋಗಿಸುವುದು ಸಾಂಪ್ರದಾಯಿಕವಾಗಿದೆ.
ಇದು ರುಚಿಯ ಜೊತೆಗೆ ಆರೋಗ್ಯಕರವಾದ ಒಂದು ತಿಂಡಿ ಆಗಿದೆ. ಅರಸಿನದ ಎಲೆಗಳನ್ನು ಸುಟ್ಟ ಗಾಯಗಳಲ್ಲಿ, ಚರ್ಮದ ರೋಗಗಳಲ್ಲಿ ಹಾಗೂ ಸೌಂದರ್ಯವರ್ಧಕವಾಗಿ ಉಪಯೋಗಿಸಲಾಗುವುದು. ತೆಂಗಿನ ಮರದಂತೆ ಅರಿಶಿನ ಕೂಡ ತನ್ನ ಪ್ರತಿ ಭಾಗದಲ್ಲಿ ಒಂದಲ್ಲ ಒಂದು ಪ್ರಯೋಜನ ನೀಡುವ ಗಿಡಮೂಲಿಕೆಯಾಗಿದೆ.
ಹಿಂದೂ ಧರ್ಮದಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಈ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಸಂಭ್ರಮ ಉಂಟಾಗುತ್ತದೆ ಎಂದು ನಂಬಲಾಗಿದೆ. ಹಾಗೆ ಇಂದು ಅರಶಿನ ಹುಡಿಯನ್ನು ನಾಗನ ಕಲ್ಲುಗಳಿಗೆ ಗಂಧವಾಗಿ ಉಪಯೋಗಿಸಲಾಗುತ್ತದೆ. ಭಕ್ತರಿಗೂ ಇದನ್ನೇ ಪ್ರಸಾದವಾಗಿ ನೀಡಲಾಗುತ್ತದೆ.
ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು, ಎಲ್ಲರೂ ಆರೋಗ್ಯವಂತರಾಗಿರಲಿ ಎಂದು ಹಾರೈಸುವ..
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…
ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…