Advertisement
MIRROR FOCUS

ನಂದಿನಿ ಹಾಲು ನಂತರ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಪರಿಷ್ಕರಣೆ | KMFನಿಂದ ಗ್ರಾಹಕರ ಮೇಲೆ ಬೆಲೆ ಏರಿಕೆ ಪ್ರಹಾರ

Share

ಜನಸಾಮಾನ್ಯರು(Common people) ದಿನನಿತ್ಯದ ವಸ್ತುಗಳನ್ನು ಕೊಂಡುಕೊಂಡು ಬದುಕುವುದೇ ಕಷ್ಟವಾಗಿದೆ. ಈಗಿನ ಸರ್ಕಾರವಂತೂ(congress govt) ದಿನದಿಂದ ದಿನಕ್ಕೆ ಯಾವೇಲ್ಲಾ ವಸ್ತುಗಳ ಬೆಲೆಯನ್ನು ಏರಿಸಲೂ(Price hike) ಸಾಧ್ಯವೂ ಆ ಎಲ್ಲಾ ವಸ್ತುಗಳ ಬೆಲೆಯನ್ನು ಏರಿಸುತ್ತಿದೆ. ತಮ್ಮ ಅಧಿಕಾರದ ಆಸೆಗೆ ಉಚಿತ ಯೋಜನೆಗಳನ್ನು(Free scheme) ಕೊಟ್ಟು ಇದೀಗ ಜನರಿಗೆ ಬರೆ ಹಾಕುತ್ತಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ(State govt) ಹಾಲಿನ ದರ ಏರಿಕೆ(Milk price) ಮಾಡಿತ್ತು. ಈಗ ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಲು ಕೆಎಂಎಫ್ ಚಿಂತನೆ ನಡೆಸಿದೆ.

ನಂದಿನಿ ಹಾಲಿನ(Nandini Milk) ದರ ಏರಿಕೆ ಮಾಡಿ ಗ್ರಾಹಕರು ಹಾಗೂ ಹಾಲು ಉತ್ಪಾದಕರ ಜೇಬಿಗೂ ಕತ್ತರಿ ಹಾಕಲಾಗಿತ್ತು. ಇದೀಗ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರ ಏರಿಕೆಗೆ ಕೆಎಂಎಫ್ ಆಡಳಿತ ಮಂಡಳಿ ಚಿಂತನೆ ನಡೆಸಿದೆಯಂತೆ. ಶೀಘ್ರದಲ್ಲೇ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆಗೆ ಕೆಎಂಎಫ್ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಜೂನ್ 26 ರಿಂದ ನಂದಿನಿ ಹಾಲಿನ ದರ ಎರಡು ರೂಪಾಯಿ ಏರಿಕೆ ಮಾಡಿದ್ದ ಕೆಎಂಎಫ್, ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ ಗೆ 50 ಎಂಎಲ್ ಸೇರಿಸಿ ಹೆಚ್ಚುವರಿ ದರ ವಿಧಿಸಿತ್ತು.

ಇದೀಗ ಹಾಲು ದರ ಹೆಚ್ಚಳ ಬೆನ್ನಲ್ಲೇ ಮೊಸರು,ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆಗೆ ನಿರ್ಧಾರ ಮಾಡಿದ್ದು, ಅಧಿವೇಶನ ಮುಗಿದ ಬೆನ್ನಲ್ಲೇ ಮೊಸಲು, ಮಜ್ಜಿಗೆ ಹಾಗೂ ಲಸ್ಸಿ ದರ ಏರಿಕೆಗೆ ಪ್ಲ್ಯಾನ್ ಮಾಡಿದೆಂತೆ. ಈಗಾಗಲೇ ನಂದಿನಿ ಹಾಲಿನ ದರ 2 ರೂ ಏರಿಕೆ ಮಾಡಿರುವ ಕೆಎಂಎಫ್ ಈಗ ಪ್ರತಿ ಪ್ಯಾಕೆಟ್ ಮೊಸರು, ಮಜ್ಜಿಗೆ ಹಾಗೂ ಲಸ್ಸಿಗೆ 1 ರಿಂದ 2 ರೂಪಾಯಿ ಏರಿಕೆ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಹಿನ್ನಲೆಯಲ್ಲಿ ಹೆಚ್ಚುವರಿ ಮೊಸರು ಮಜ್ಜಿಗೆ ನೀಡಿ ಹೆಚ್ಚುವರಿ ದರ ನಿಗದಿ ಮಾಡಲು ಕೆಎಂಎಫ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, ನಾವು ಹಾಲಿನ ದರವನ್ನೇ ಏರಿಕೆ ಮಾಡಿಲ್ಲ. ಹಾಲಿನ ಪ್ರಮಾಣ ಮತ್ತು ದರ ಎರಡರಲ್ಲೂ ಏರಿಕೆಯಾಗಿದೆ ಅಷ್ಟೇ ಎಂದಿದ್ದರು. ಕರ್ನಾಟಕದಲ್ಲಿ ಸರಾಸರಿ ಹಾಲು ಉತ್ಪಾದನೆಯು ದಿನಕ್ಕೆ 1 ಕೋಟಿ ಲೀಟರ್‌ಗೆ ತಲುಪಿದೆ, ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮಾಡಿರುವ ನಿರ್ಧಾರ ಲಕ್ಷಾಂತರ ಹೈನುಗಾರರಿಗೆ ನೆರವಾಗಲಿದೆ. ಹೆಚ್ಚುವರಿ ಹಾಲು ಉತ್ಪಾದನೆಯನ್ನು ತೆಗೆದುಕೊಳ್ಳದೆ ವಾಪಸ್ ಕಳುಹಿಸಲು ಆಗೋದಿಲ್ಲ ಎಂದು ಸಿಎಂ ಹೇಳಿದ್ದರು.

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಶೇಕಡಾ 15ರಷ್ಟು ಹೆಚ್ಚಿದ್ದು, ನಿತ್ಯ ಸರಾಸರಿ 90 ಲಕ್ಷ ಲೀಟರ್ ನಿಂದ 99 ಲಕ್ಷ ಲೀಟರ್ ಗೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಕೆಎಂಎಫ್‌ ಹಾಲು ಸಂಗ್ರಹ ದಿನವೊಂದಕ್ಕೆ ಒಂದು ಕೋಟಿ ಲೀಟರ್ ತಲುಪಿದೆ. ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗುತ್ತಿದ್ದು ಅದನ್ನು ಮಾರಾಟ ಮಾಡುವುದೇ ಕೆಎಂಎಫ್‌ಗೆ ದೊಡ್ಡ ಸವಾಲಾಗಿದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬ್ಯಾಂಕ್‌ ಮುಷ್ಕರ ಮುಂದೂಡಿಕೆ – ಇಂದು ಎಂದಿನಂತೆ ಬ್ಯಾಂಕ್‌ ಸೇವೆ

ಸೆ.28ರಿಂದ 30ರವರೆಗೆ ನಡೆಯಬೇಕಿದ್ದ ರಾಷ್ಟ್ರವ್ಯಾಪಿ ಮೂರು ದಿನಗಳ ಬ್ಯಾಂಕ್‌ ಮುಷ್ಕರವನ್ನು ಕೊನೆ ಕ್ಷಣದಲ್ಲಿ…

2 hours ago

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

10 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

13 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

19 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

22 hours ago