ಕೆಂಪೇಗೌಡ ಅವರ ಕಲ್ಪನೆಯಂತೆಯೇ ಬೆಂಗಳೂರು ಪ್ರಗತಿ | ಪ್ರಧಾನಿ ನರೇಂದ್ರ ಮೋದಿ

November 11, 2022
7:28 PM

ನಾಡಪ್ರಭು ಕೆಂಪೇಗೌಡ ಅವರ ಅದ್ಭುತ ಹಾಗೂ ಅದ್ವಿತೀಯ ಕಲ್ಪನೆಯಂತೆಯೇ ಬೆಂಗಳೂರು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

Advertisement
Advertisement
Advertisement

ಬೆಂಗಳೂರಿನ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟಿಸಿ, ವಿಶ್ವದ ಅತೀ ಎತ್ತರದ ಪ್ರಗತಿ ಪ್ರತಿಮೆ ಹೆಸರಿನಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡ ಅವರ 108 ಅಡಿಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ, ನಾಡ ಪ್ರಭು ಕೆಂಪೇಗೌಡ, ಸಂತ ಶ್ರೇಷ್ಠ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವ ಅವರ ಭಾವಚಿತ್ರಗಳಿಗೆ ಪುಷ್ಟ ನಮನ ಸಲ್ಲಿಸಿ ಸಾರ್ವಜನಿಕ ಸಭೆಯನ್ನುಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

Advertisement

ಕೋವಿಡ್-19 ರ ಸಂದರ್ಭದಲ್ಲೂ ಕರ್ನಾಟಕದಲ್ಲಿ ನಾಲ್ಕು ಲಕ್ಷ ಕೋಟಿ ರೂ ಹೂಡಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಜೈವಿಕ ತಂತ್ರಜ್ಞಾನ, ರಕ್ಷಣಾ ಉಪಕರಣಗಳ ತಯಾರಿಕೆ, ವೈಮಾನಿಕ ಹಾಗೂ ಅಂತರಿಕ್ಷ ಕೈಗಾರಿಕಾ ಕ್ಷೇತ್ರಗಳೂ ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿ ಶೇಕಡಾ 25 ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ವಾಣಿಜ್ಯ ಕ್ಷೇತ್ರದಲ್ಲಿ ಬೆಂಗಳೂರು ಎಷ್ಟು ಮುಂದಿದೆ ಎಂದರೆ ನವೋದ್ಯಮದ ತವರಾಗಿ ರೂಪಿತರಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ನವ ಭಾರತದ ಹೊಸ ಅಸ್ಮಿತೆಯೇ ಆಗಿದೆ ಎಂದರು.

ದೇಶದಲ್ಲಿಯೇ ಅತೀ ಹೆಚ್ಚು ವಿದೇಶೀ ನೇರ ಬಂಡವಾಳದ ಹೂಡಿಕೆ ಕರ್ನಾಟಕದಲ್ಲಾಗಿದೆ. ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ಶೇಕಡಾ 70 ರಷ್ಟು ಕೊಡುಗೆ ಕರ್ನಾಟಕದ್ದೇ ಆಗಿದೆ. ಫಾರ್ಚೂನ್ – 500 ಕಂಪನಿಗಳ ಪಟ್ಟಿಯಲ್ಲಿರುವ 400 ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿವೆ. ವಿದ್ಯುತ್ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿಯೂ ಕರ್ನಾಟಕವು ಮುಂಚೂಣಿಯಲ್ಲಿದೆ. ಇದು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವ ಡಬಲ್ ಎಂಜಿನ್ ಸರ್ಕಾರದ ತಾಕತ್ತಾಗಿದೆ ಎಂದರು.

Advertisement

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ನಿರ್ಮಿಸಿರುವ 35 ಕೋಟಿ ಮನೆಗಳ ಪೈಕಿ ಎಂಟು ಲಕ್ಷ ಮನೆಗಳನ್ನು ಕರ್ನಾಟಕದಲ್ಲಿಯೇ ನಿರ್ಮಿಸಲಾಗಿದೆ. ಕೊಳವೆ ನೀರು ಸರಬರಾಜು ಯೋಜನೆಯಲ್ಲಿ ಏಳು ಕೋಟಿ ಸಂಪರ್ಕಗಳಿಗೆ ಪ್ರತಿಯಾಗಿ 30 ಲಕ್ಷ ಸಂಪರ್ಕಗಳು ಕರ್ನಾಟಕದಲ್ಲಿವೆ. ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಲ್ಲಿ ದೇಶದ ನಾಲ್ಕು ಕೋಟಿ ಫಲಾನುಭವಿಗಳ ಪೈಕಿ 30 ಲಕ್ಷ ಫಲಾನುಭವಿಗಳು ಕರ್ನಾಟಕದವರೇ ಆಗಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10 ಕೋಟಿ ರೈತರಿಗೆ ಪ್ರತಿಯಾಗಿ 2.25 ಲಕ್ಷ ಫಲಾನುಭವಿಗಳು ಕರ್ನಾಟಕದವರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಅಂಕಿ-ಅಂಶಗಳನ್ನು ಪ್ರಧಾನಿ ಹಂಚಿಕೊಂಡರು.

ರೈಲು ಸಂಪರ್ಕ ಕ್ಷೇತ್ರದಲ್ಲೂ ಕ್ರಾಂತಿಕಾಂತಿ ಬೆಳವಣಿಗಳಾಗಿವೆ. ಎಲ್ಲಾ ನಿಲ್ದಾಣಗಳಲ್ಲೂ ನಿಲುಗಡೆ ಮಾಡಿ ತೆರಳುತ್ತಿದ್ದ ರೈಲುಗಳ ವೇಗ ಹೆಚ್ಚಿಸಲಾಗಿದೆ. ದೇಶಾದ್ಯಂತ ವಂದೇ ಭಾರತ್ ಮತ್ತು ವಿಸ್ಟೋಡೋಮ್ ನ 400 ಕ್ಕೂ ಹೆಚ್ಚು ರೈಲುಗಳು ಸಧ್ಯದಲ್ಲಿಯೇ ಸಂಚರಿಸಲಿವೆ.ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸಪ್ರೆಸ್ ಹಾಗೂ ಬೆಂಗಳೂರು ಮತ್ತು ವಾರಣಾಸಿ ನಡುವೆ ಸಂಚರಿಸಲಿರುವ ಭಾರತ್ ಗೌರವ್ ಎಕ್ಸ್‍ಪ್ರೆಸ್ ರೈಲುಗಳಿಗೆ ಇಂದು ಹಸಿರು ನಿಶಾನೆ ತೋರಿ ರಾಜ್ಯದ ಜನತೆಗೆ ಕೊಡುಗೆಯಾಗಿ ನೀಡಲಾಗಿದೆ ಎಂದರು.

Advertisement

ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ದರ್ಶನ, ಪ್ರಯಾಗ್ ರಾಜ್ ( ಅಲಹಾಬಾದ್ ) ನಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಕಣ್ತುಂಬಿಕೊಳ್ಳಲು ಭಾರತ್ ಗೌರವ್ ಎಕ್ಸ್ ಪ್ರಸ್ ರಿಯಾಯಿತಿ ದರದಲ್ಲಿ ವಿಶೇಷ ಅವಕಾಶ ದೊರಕಿಸಿಕೊಡಲಿದೆ ಎಂದು ನರೇಂದ್ರ ಮೋದಿ ಅವರು ತಿಳಿಸಿದರು. ಬೆಂಗಳೂರಿನಲ್ಲಿನ ಸರ್ ಎಂ ವಿಶ್ವೇಶ್ವರಯ್ಯ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ ಹೊಸ ಅನುಭವವನ್ನೇ ನೀಡುತ್ತದೆ ಎಂದು ಹೇಳಿದ ಮೋದಿ ಅವರು ಬೆಂಗಳೂರಿನ ಕಂಟೋನ್ ಮೇಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳಿಗೂ ಕಾಯಕಲ್ಪ ನೀಡಲಾಗಿದೆ ಎಂದು ಹೇಳಿದರು.

ಜಾತಿ-ಜಾತಿಗಳ ನಡುವೆ ಸಂಘರ್ಷ ಬೇಡ ಎಂಬ ಸಂದೇಶ ಹೊತ್ತ ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂತ ಶ್ರೇಷ್ಠ ಕನಕದಾಸರ ಸತ್ವಭರಿತ ತತ್ವ ಪದವನ್ನು ಸ್ಮರಿಸಿದ ನರೇಂದ್ರ ಮೋದಿ ಅವರು ಮನಷ್ಯ-ಮನುಷ್ಯರನ್ನು ಒಂದುಗೂಡಿಸುವ ಭಗವತ್ ಭಕ್ತಿ ಹಾಗೂ ಸಾಮಾಜಿಕ ಶಕ್ತಿಗೆ ಕನಕದಾಸರು ಪ್ರೇರಣೆ ಯಾಗಿದ್ದರು ಎಂದು ಬಣ್ಣಿಸಿದರು. ಹದಿನೈದನೇ ಶತಮಾನ ದಲ್ಲಿಯೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಕನಕದಾಸರು ಸಿರಿಧಾನ್ಯದ ಮಹತ್ವವನ್ನು ಉಲ್ಲೇಖಿಸಿದ್ದುದ್ದನ್ನು ಪ್ರಧಾನ ಮಂತ್ರಿ ನೆನಪಿಸಿಕೊಂಡರು. ಸಿರಿಧಾನ್ಯಗಳಲ್ಲೊಂದಾದ ರಾಗಿ ಕರ್ನಾಟಕದ ಬಹುಜನರ ಜನಪ್ರಯ ಆಹಾರವಾಗಿದೆ ಎಂದು ಅವರು ಹೇಳಿದರು.

Advertisement

ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡ ಅವರು ತೊಡುತ್ತಿದ್ದ ಶೈಲಿಯ ಪೇಟವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತೊಡಿಸಿದರು. ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮೋದಿ ಅವರಿಗೆ ಕೇಂಪೇಗೌಡ ಅವರ ಪ್ರತಿಕೃತಿಯ ಸ್ಮರಣಿಕೆ ನೀಡಿದರು. ಕಂದಾಯ ಸಚಿವ ಆರ್ ಅಶೋಕ್ ಅವರು ಪ್ರಧಾನಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಅವರೂ ಸೇರಿದಂತೆ ಹಲವು ಗಣ್ಯರು ಈ ಗೌರವ ಸಮರ್ಪಣೆಯ ವೇಳೆ ಸಾಕ್ಷಿಯಾಗಿದ್ಧರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror