ಪ್ರಕೃತಿಯೊಳಗಣ ನಡೆ ಏನು ಅದ್ಭುತವಪ್ಪಾ…!!

June 5, 2021
8:55 PM

ವಾವ್,  ಪ್ರಕೃತಿಯ ‌ಒಳಗಣ ನಡೆ ಏನು ಅದ್ಭುತವಪ್ಪಾ….!!

ಎಲ್ಲಿಂದಲೋ ಓಡೋಡಿ ಬರುವ ಮಾರುತಗಳು, ಅದನೇರಿ ಬರುವ ಮುಗಿಲ ಸಾಲುಗಳು…. ಇದರ ಹಿಂದಿನ ಲೆಕ್ಕಗಳ ಗ್ರಹಿಸಿ ಶಿರಸಿಯ ಸುಧಾಪುರದ. ಮುಂಡಿಗೆ ಕೆರೆಗಿಳಿದು ಸಂಸಾರದ ರಥವೇರುವ ಬೆಳ್ಳಕ್ಕಿಗಳು…. ವಾವ್…. ಯಾವುದೀ ಸಂಬಂಧ …. ಇದರ ಹೆಣೆದವನ್ಯಾರೋ……??

ಪಾಪ… ಈ ಬೆಳ್ಳಕ್ಕಿಗಳ ಅಂಗೈಯಲ್ಲಿ ಮನುಜರಂತೆ ವಾಟ್ಸಾಪೂ, ಸೆಟಲೈಟೂ ಅದೂ ಇದೂ ಎನ್ನುವ ಮಹದಾದ ಸೋ ಕಾಲ್ಡ್ ತಂತ್ರಜ್ಞಾನ ಏನಿಲ್ಲ….ಆದರೂ ಕರಾರುವಾಕ್ಕಾಗಿ ಮಳೆ ಬಂದು ಕೆರೆ ತುಂಬುವ ದಿನದ ಲೆಕ್ಕ ಈ ಬೆಳ್ಳಕ್ಕಿಗಳು ಮಾಡಬಲ್ಲವು….

ಮಾನವ ನಿರ್ಮಿತ ಸೆಟಲೈಟು ಲೆಕ್ಕ ತಪ್ಪೀತು, ಆದರೆ ಪ್ರಕೃತಿಯ ಮಡಿಲಲ್ಲೊಂದಾಗಿ ನಡೆವ ಮಾನವನ ಹೊರತಾದ ಜೀವಿಗಳೆಲ್ಲ ಲೆಕ್ಕ ಪರೀಕ್ಷೆಯಲ್ಲಿ ಸದಾ ಮುಂದೆಯೇ ಸರಿ. ಹಾಗಾದರೆ ಈ ಜ್ಞಾನ ಅಜ್ಞಾನಗಳ ಮದ್ಯದ ಆ ಶಕ್ತಿ ಯಾವುದಪ್ಪಾ….?

ಹುಮ್…!!

ಸಾವಿರಾರು ವರ್ಷಗಳ ಹಿಂದೆ, ವೇದಕಾಲದಲ್ಲಿ , ತಪೋನಿರತರಾದ ಮಾನವ ಸಾಧಕರೂ ಈ ಶಕ್ತಿಯ ರಹಸ್ಯ ಕಂಡುಕೊಂಡಿದ್ದರಲ್ಲಾ…. ಹೌದು.
ಕೇನೋಪನಿಷತ್ತಿನ ಸಾಲುಗಳಲ್ಲಿ … ಬರುವ ಗುರು ಶಿಷ್ಯ ಪ್ರಶ್ನೆ ಉತ್ತರಗಳ ಮಾಲೆಯಲ್ಲಿ ಈ ಶಕ್ತಿಯ ಬಗ್ಗೆ ಪ್ರಶ್ನೆಗಳ ಮೂಲಕ ವರ್ಣನೆ ಮಾಡಲಾಗಿದೆ.

ಕೇನೇಷಿತಂ ಪತತಿ ಪ್ರೇಷಿತಂ ಮನಃ
ಕೇನಃ ಪ್ರಥಮಃ ಪ್ರೈತಿಯುಕ್ತಃ
ಕೇನೇಷಿತಾಂ ವಾಚಮಿಮಾಮ್ ವದಂತಿ
ಚಕ್ಷು ಶ್ರೋತಂ ಕ ಉ ದೇವೋ ಯುನಕ್ತಿಃ…

ಅಂದರೆ…,

ಓ ಗುರುದೇವಾ..

ನನ್ನ ಮನಸಿನ ಆಲೋಚನಾ ಲಹರಿಯ ಪ್ರೇರಕನಾರು
ನನ್ನ ಮಾತಿನ,ದೃಷ್ಟಿಯ,ಶ್ರೋತೃಗುಣದ ಹಿಂದಿನ ಶಕ್ತಿ ಯಾರೋ
ಇದಕ್ಕೆಲ್ಲ ಶಕ್ತಿತುಂಬುವ ಪ್ರಾಣ ಪ್ರಥಮನಾರೂ

ಎಂಬುದಾಗಿ ಕೇಳಿದ ಶಿಷ್ಯನಿಗೆ ಗುರುವು…ತತ್ವಂ ಅಸಿ….ಇದು ಇಷ್ಟೇ… ಸರ್ವಂ ಖಲ್ವಿದಂ ಬ್ರಹ್ಮಾಸಿ…. ಅಂದರೆ…ನಿನ್ನನ್ನೂ ನನ್ನನ್ನೂ ಆವರಿಸಿ, ವ್ಯಾಪಿಸಿ ನಡೆಸುವ ಆ ಮಹತೋ ಶಕ್ತಿ ಅದೇ ಪರಮಾತ್ಮ… ಅಣುರೇಣು ತೃಣಕಾಯದಲೂ ಅವನದೇ ಛಾಯೇ ಎಂಬುದಾಗಿ‌ ಪ್ರಕೃತಿಗೆ ತಲೆಬಾಗುವ ಪಾಠವನ್ನು ಹೇಳುತ್ತಾರೆ ಅಂತೆಯೇ ಶಿಷ್ಯ ಪ್ರಕೃತಿಯ ಮದ್ಯದ ಜೀವನದಲ್ಲಿ ಸಂತೃಪ್ತನಾಗುತ್ತಾನೆ.

ಅಂತೆಯೇ … ಈ ಬೆಳ್ಲಕ್ಕಿಗಳಿಗೂ ದಾರಿದೀವಿಗೆಯಾದವನು ಆ ಪರಮಪುರುಷನೇ ಅಲ್ಲವೇ….

ಯಬ್ಬ, ಸಮಯಕ್ಕನುಗುಣವಾಗಿ ವಿಶ್ವ ಪಥವ ದಿಗ್ದರ್ಶಿಸುವ ಆತನ ಮೀರುವ ಪ್ರಯತ್ನ ಮಾಡುವವ ಮನುಜ ಮಾತ್ರರಲ್ಲವೇ… ಹಾಗಿದ್ದರೆ ತಾನು ತಿಳಿದ ಒಂದು ಕೊಂಡಿಯೇ ಸಂಪೂರ್ಣ ವಿಜ್ಞಾನ ಎಂದು ತಿಳಿದ ಮಾನವ ಯಾವ ಲೆಕ್ಕ… ಹಾಗಿದ್ದರೆ ಜ್ಞಾನ ಎಂದರೆ ಯಾವುದು…?

ಖಂಡಿತಾ… ನಾವು ತಿಳಿದ ವಿಜ್ಞಾನಕ್ಕಿಂತಲೂ ಮೇಲೆ ಒಂದು ಸುಜ್ಞಾನವೊಂದಿದೆ..ಅದರ ಅರಿವ ಸತ್ವ ನಮ್ಮದಾಗಬೇಕಿದೆ ಅಷ್ಟೇ

 

# ಟಿ ಆರ್‌ ಸುರೇಶ್ಚಂದ್ರ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ
March 13, 2026
7:02 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror