ಪರಿಸರ ಆಧಾರಿತ ಹೂಡಿಕೆಗಳಿಂದ 32 ಮಿಲಿಯನ್‌ ಉದ್ಯೋಗ ಸೃಷ್ಟಿ | ಹೊಸ ಅಧ್ಯಯನ ವರದಿ |

December 10, 2024
6:32 AM
ಪರಿಸರ ಆಧಾರಿತವಾದ ಹೂಡಿಕೆಗಳು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯ ಇದೆ. ಭವಿಷ್ಯದಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣದ ಅಗತ್ಯ ಇರುವುದರಿಂದ ಈಗಲೇ ನೀತಿ ನಿರೂಪಕರು ಎಚ್ಚರಿಕೆ ವಹಿಸಬೇಕಾಗಿದೆ.

ಪರಿಸರ ಆಧಾರಿತ ಮೂಲಸೌಕರ್ಯಗಳ ಒದಗಿಸುವಿಕೆ ಹಾಗೂ ಹೂಡಿಕೆಗಳನ್ನು ಮಾಡುವುದರಿಂದ  2030 ರ ವೇಳೆಗೆ 32 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಹಾಗೂ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಇವರ ಹೊಸ ವರದಿ ಹೇಳಿದೆ.

Advertisement

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಪರಿಸರ ಆಧಾರಿತ ಪರಿಹಾರ ಕ್ರಮಗಳ ಬಗೆಗಿನ ಸಮ್ಮೇಳನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಪ್ರಸ್ತುತ, 60 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪರಿಸರ ಆಧಾರಿತವಾದ ಚಟುವಟಿಕೆಗಳಲ್ಲಿ ಜಾಗತಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ನೈಸರ್ಗಿಕ ವ್ಯವಸ್ಥೆ , ಗಾಳಿ, ನೀರು, ಮಣ್ಣು, ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು, ಸಂರಕ್ಷಿಸಲು ಹೀಗೇ ಹಲವಾರು  ವಿಧಾನಗಳ ಮೂಲಕ ಪರಿಸರ ಉಳಿವಿನ ಕೆಲಸವನ್ನು ಮಾಡುತ್ತಿದ್ದಾರೆ.

ಮುಂದಿನ ದಿನಗಳನ್ನು ಯಾವುದೇ ಹೂಡಿಕೆಗಳನ್ನು, ಮೂಲಸೌಕರ್ಯಗಳನ್ನು ಒದಗಿಸುವ ವೇಳೆ  ಪರಿಸರ ಆಧಾರಿತ ಹೂಡಿಕೆಗಳನ್ನು ಮಾಡುವ ಮೂಲಕ  ಜಾಗತಿಕವಾಗಿ 32 ಮಿಲಿಯನ್ ಉದ್ಯೋಗಗಳನ್ನು ಹೆಚ್ಚಿಸಬಹುದು. ನಮ್ಮ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಸಮರ್ಥವಾಗಿ  ಕೆಲಸ ನಿರ್ವಹಿಸುವಲ್ಲಿ ಯೋಗ್ಯವಾದ ಕೆಲಸಗಳ ಅಗತ್ಯ ಇದೆ. ಅದಕ್ಕೆ  ಪ್ರಾಮುಖ್ಯತೆ ನೀಡುವ ಕುರಿತು ಜಾಗತಿಕವಾಗಿ ಯೋಚಿಸಬೇಕಾಗಿದೆ. ಹೀಗಾಗಿ ಪರಿಸರ ಆಧಾರಿತ ಹೂಡಿಕೆ ಅಥವಾ ಕೆಲಸ ಮಾಡುವಾಗ ಮತ್ತು ಕಾರ್ಯಗತಗೊಳಿಸುವಾಗ  ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ನೀತಿ ನಿರೂಪಕರು ಮಾರ್ಗದರ್ಶನ ನೀಡಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಪರಿಸರ ಹಾಗೂ ಹವಾಮಾನದ ಬಗ್ಗೆ ಅತ್ಯಂತ ಕಾಳಜಿಯೂ ಅಗತ್ಯ ಇದೆ ಎನ್ನುವುದು ಸಂವಾದದಲ್ಲಿ ಚರ್ಚಿಸಲಾಗಿತ್ತು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group