ವಾವ್, ಪ್ರಕೃತಿಯ ಒಳಗಣ ನಡೆ ಏನು ಅದ್ಭುತವಪ್ಪಾ….!!
ಎಲ್ಲಿಂದಲೋ ಓಡೋಡಿ ಬರುವ ಮಾರುತಗಳು, ಅದನೇರಿ ಬರುವ ಮುಗಿಲ ಸಾಲುಗಳು…. ಇದರ ಹಿಂದಿನ ಲೆಕ್ಕಗಳ ಗ್ರಹಿಸಿ ಶಿರಸಿಯ ಸುಧಾಪುರದ. ಮುಂಡಿಗೆ ಕೆರೆಗಿಳಿದು ಸಂಸಾರದ ರಥವೇರುವ ಬೆಳ್ಳಕ್ಕಿಗಳು…. ವಾವ್…. ಯಾವುದೀ ಸಂಬಂಧ …. ಇದರ ಹೆಣೆದವನ್ಯಾರೋ……??
ಪಾಪ… ಈ ಬೆಳ್ಳಕ್ಕಿಗಳ ಅಂಗೈಯಲ್ಲಿ ಮನುಜರಂತೆ ವಾಟ್ಸಾಪೂ, ಸೆಟಲೈಟೂ ಅದೂ ಇದೂ ಎನ್ನುವ ಮಹದಾದ ಸೋ ಕಾಲ್ಡ್ ತಂತ್ರಜ್ಞಾನ ಏನಿಲ್ಲ….ಆದರೂ ಕರಾರುವಾಕ್ಕಾಗಿ ಮಳೆ ಬಂದು ಕೆರೆ ತುಂಬುವ ದಿನದ ಲೆಕ್ಕ ಈ ಬೆಳ್ಳಕ್ಕಿಗಳು ಮಾಡಬಲ್ಲವು….
ಮಾನವ ನಿರ್ಮಿತ ಸೆಟಲೈಟು ಲೆಕ್ಕ ತಪ್ಪೀತು, ಆದರೆ ಪ್ರಕೃತಿಯ ಮಡಿಲಲ್ಲೊಂದಾಗಿ ನಡೆವ ಮಾನವನ ಹೊರತಾದ ಜೀವಿಗಳೆಲ್ಲ ಲೆಕ್ಕ ಪರೀಕ್ಷೆಯಲ್ಲಿ ಸದಾ ಮುಂದೆಯೇ ಸರಿ. ಹಾಗಾದರೆ ಈ ಜ್ಞಾನ ಅಜ್ಞಾನಗಳ ಮದ್ಯದ ಆ ಶಕ್ತಿ ಯಾವುದಪ್ಪಾ….?
ಹುಮ್…!!
ಸಾವಿರಾರು ವರ್ಷಗಳ ಹಿಂದೆ, ವೇದಕಾಲದಲ್ಲಿ , ತಪೋನಿರತರಾದ ಮಾನವ ಸಾಧಕರೂ ಈ ಶಕ್ತಿಯ ರಹಸ್ಯ ಕಂಡುಕೊಂಡಿದ್ದರಲ್ಲಾ…. ಹೌದು.
ಕೇನೋಪನಿಷತ್ತಿನ ಸಾಲುಗಳಲ್ಲಿ … ಬರುವ ಗುರು ಶಿಷ್ಯ ಪ್ರಶ್ನೆ ಉತ್ತರಗಳ ಮಾಲೆಯಲ್ಲಿ ಈ ಶಕ್ತಿಯ ಬಗ್ಗೆ ಪ್ರಶ್ನೆಗಳ ಮೂಲಕ ವರ್ಣನೆ ಮಾಡಲಾಗಿದೆ.
ಕೇನೇಷಿತಂ ಪತತಿ ಪ್ರೇಷಿತಂ ಮನಃ
ಕೇನಃ ಪ್ರಥಮಃ ಪ್ರೈತಿಯುಕ್ತಃ
ಕೇನೇಷಿತಾಂ ವಾಚಮಿಮಾಮ್ ವದಂತಿ
ಚಕ್ಷು ಶ್ರೋತಂ ಕ ಉ ದೇವೋ ಯುನಕ್ತಿಃ…
ಅಂದರೆ…,
ಓ ಗುರುದೇವಾ..
ನನ್ನ ಮನಸಿನ ಆಲೋಚನಾ ಲಹರಿಯ ಪ್ರೇರಕನಾರು
ನನ್ನ ಮಾತಿನ,ದೃಷ್ಟಿಯ,ಶ್ರೋತೃಗುಣದ ಹಿಂದಿನ ಶಕ್ತಿ ಯಾರೋ
ಇದಕ್ಕೆಲ್ಲ ಶಕ್ತಿತುಂಬುವ ಪ್ರಾಣ ಪ್ರಥಮನಾರೂ
ಎಂಬುದಾಗಿ ಕೇಳಿದ ಶಿಷ್ಯನಿಗೆ ಗುರುವು…ತತ್ವಂ ಅಸಿ….ಇದು ಇಷ್ಟೇ… ಸರ್ವಂ ಖಲ್ವಿದಂ ಬ್ರಹ್ಮಾಸಿ…. ಅಂದರೆ…ನಿನ್ನನ್ನೂ ನನ್ನನ್ನೂ ಆವರಿಸಿ, ವ್ಯಾಪಿಸಿ ನಡೆಸುವ ಆ ಮಹತೋ ಶಕ್ತಿ ಅದೇ ಪರಮಾತ್ಮ… ಅಣುರೇಣು ತೃಣಕಾಯದಲೂ ಅವನದೇ ಛಾಯೇ ಎಂಬುದಾಗಿ ಪ್ರಕೃತಿಗೆ ತಲೆಬಾಗುವ ಪಾಠವನ್ನು ಹೇಳುತ್ತಾರೆ ಅಂತೆಯೇ ಶಿಷ್ಯ ಪ್ರಕೃತಿಯ ಮದ್ಯದ ಜೀವನದಲ್ಲಿ ಸಂತೃಪ್ತನಾಗುತ್ತಾನೆ.
ಅಂತೆಯೇ … ಈ ಬೆಳ್ಲಕ್ಕಿಗಳಿಗೂ ದಾರಿದೀವಿಗೆಯಾದವನು ಆ ಪರಮಪುರುಷನೇ ಅಲ್ಲವೇ….
ಯಬ್ಬ, ಸಮಯಕ್ಕನುಗುಣವಾಗಿ ವಿಶ್ವ ಪಥವ ದಿಗ್ದರ್ಶಿಸುವ ಆತನ ಮೀರುವ ಪ್ರಯತ್ನ ಮಾಡುವವ ಮನುಜ ಮಾತ್ರರಲ್ಲವೇ… ಹಾಗಿದ್ದರೆ ತಾನು ತಿಳಿದ ಒಂದು ಕೊಂಡಿಯೇ ಸಂಪೂರ್ಣ ವಿಜ್ಞಾನ ಎಂದು ತಿಳಿದ ಮಾನವ ಯಾವ ಲೆಕ್ಕ… ಹಾಗಿದ್ದರೆ ಜ್ಞಾನ ಎಂದರೆ ಯಾವುದು…?
ಖಂಡಿತಾ… ನಾವು ತಿಳಿದ ವಿಜ್ಞಾನಕ್ಕಿಂತಲೂ ಮೇಲೆ ಒಂದು ಸುಜ್ಞಾನವೊಂದಿದೆ..ಅದರ ಅರಿವ ಸತ್ವ ನಮ್ಮದಾಗಬೇಕಿದೆ ಅಷ್ಟೇ
# ಟಿ ಆರ್ ಸುರೇಶ್ಚಂದ್ರ
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…