ನವರಾತ್ರಿ ಎಂದರೆ ಮನರಂಜನೆಯಲ್ಲ, ಅದು ದೇವಿಯ ಆರಾಧನೆ – ರಾಘವೇಶ್ವರ ಶ್ರೀ

September 28, 2025
11:45 AM

ನವರಾತ್ರಿ ಎಂದರೆ ಅದು ಮನರಂಜನೆಗಾಗಿ ಇರುವ ಪರ್ವವಲ್ಲ ಬದಲಾಗಿ ದೇವಿಯ ಆರಾಧನೆ ಕಾಲ ಎಂದು ಶ್ರೀರಾಮಚಂದ್ರಾಪುರಮಠದ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ ಆರನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು. ಲೋಕ ಕಲ್ಯಾಣ ಕಾರ್ಯದಲ್ಲಿ ತಾಯಿ ಮಗ್ನವಾಗಿರುವಾಗ ಆಕೆಯ ಪರಿವಾರ ಆಕೆಗೆ ಯಾವ ರೀತಿಯ ಸಹಕಾರ ನೀಡಿದರು ಮತ್ತು ಆ ಎಲ್ಲ ದೇವಿಯರು ಯಾರು ಎನ್ನುವ ಹೆಸರನ್ನು ತಿಳಿದರೆ, ಅವರ ನಾಮ ಜಪಿಸಿದರೆ ಅದಕ್ಕಿಂತ ಪುಣ್ಯ ಬೇರೆ ಯಾವುದಿಲ್ಲ ಎಂದ ಅವರು ಅಂತಹ ಪುಣ್ಯ ಸಂಪಾದನೆಯನ್ನು ಮಾಡಿಕೊಳ್ಳುವುದಕ್ಕಾಗಿಯೇ ನವರಾತ್ರಿ ಎನ್ನುವುದು ಶ್ರೇಷ್ಟವಾದ ಕಾಲ ಹಾಗಾಗಿ ಇದು ಪೂರ್ಣ ದೇವಿಯ ಆರಾಧನೆಯ ಸಮಯವೇ ಹೊರತು ಮನರಂಜನೆಯ ಸಮಯವಲ್ಲ ಎಂದರು.

ಆಧುನಿಕ ಪದ್ಧತಿ ವೈಜ್ಞಾನಿಕವೂ ಅಲ್ಲ ಖಗೋಳದ ಬೆಂಬಲವೂ ಇಲ್ಲ. ಜನವರಿ ,ಫೆಬ್ರವರಿ, ಒಂದು ಎರಡು ದಿನಾಂಕದ ಆಧುನಿಕ ಪದ್ದತಿಗೆ ವೈಜ್ಞಾನಿಕ ಅರ್ಥವೂ ಇಲ್ಲ, ಖಗೋಳದ ಬೆಂಬಲವೂ ಇಲ್ಲ. ಆದರೆ ತಿಥಿ, ಮಾಸಗಳಿಗೆ ಪ್ರಕೃತಿ ಸಹಜತೆ ಕಂಡು ಬರಿದೆ. ಉದಾಹರಣೆ ಹುಣ್ಣಿಮೆ ಎನ್ನುವ ತಿಥಿಗೆ ಆಕಾಶ ತೋರಿದರೆ ಅಲ್ಲಿ ಗೋಚರವಾಗಲಿದೆ ಇದು ಪ್ರತಿ ತಿಥಿಗೂ ಹಾಗೆ ಆಯಾ ಮಾಸಗಳಲ್ಲಿ ಪ್ರಕೃತಿಯ ಬದಲಾವಣೆಗಳನ್ನು ತಿಳಿಸುವ ವೈಜ್ಞಾನಿಕ ನಿಜವಿದೆ ಎಂದ ಅವರು ಈ ಪ್ರತಿ ತಿಥಿ ನಕ್ಷತ್ರಗಳಲ್ಲಿ ದೈವಿ ಸ್ವರೂಪ ಇದೆ ಅದನ್ನು ನಿತ್ಯ ಗಮನಿಸಿದರೆ ಪೂರ್ವಜರು ತಿಳಿಸಿರುವ ವಿಧಾನದ ಸತ್ಯ ಅರಿವಾಗಲಿದೆ ಎಂದ ಅವರು ಅಂತಹ ಪ್ರಕೃತಿ ಸಹಜತೆಯ ವಿಧಾನವನ್ನು ಬಿಟ್ಟು ವೈಜ್ಞಾನಿಕವಲ್ಲದ ಮೌಡ್ಯವನ್ನು ಅನುಸರಿಸುತ್ತಿರುವುದು ಬೇಸರದ ಸಂಗತಿ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಕೊಡ ಮಾಡಿದ ಸಮಾಜ ಗೌರವವನ್ನು ಗುಡಿಗಾರ ಸಮಾಜ, ಮಡಿವಾಳ ಸಮಾಜ, ಹಸಲರ ಸಮಾಜ, ವೀರಶೈವ ಸಮಾಜ, ಬಲಿಜ ಸಮಾಜ, ಬಾಹುಸಾರ ಕ್ಷತ್ರಿಯ ಸಮಾಜ, ಹಾಗೂ ಉಪ್ಪಾರ ಸಮಾಜಕ್ಕೆ ಕೊಡಲಾಯಿತು. ಆಯಾ ಸಮಾಜದ ಪರವಾಗಿ ಅಧ್ಯಕ್ಷರಾದ ಅಣ್ಣಪ್ಪ ಗುಡಿಗಾರ, ಕೊಟ್ರಪ್ಪ, ಮಲ್ಲೇಶಪ್ಪ, ಕೆ.ವಿ. ಪ್ರವೀಣ್, ಸತೀಶ, ರವಿ ಮಹೇಂದ್ರಕರ್, ಮಲ್ಲೇಶಪ್ಪ ಗೌರವ ಸ್ವೀಕರಿಸಿದರು.
ನವರಾತ್ರ ನಮಸ್ಯಾ ಸಮಿತಿಯ ಪ್ರಧಾನ ಸಂಚಾಲಕ ಮುರಳಿ ಗೀಜಗಾರು, ಅಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ, ಶ್ರೀಮಠದ ವಿತ್ತಾಧ್ಯಕ್ಷ ಜಿ.ಎಲ್. ಗಣೇಶ್, ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ, ಹವ್ಯಕ ಮಂಡಲದ ಪ್ರಮುಖರಾದ ಗಣಪತಿ ಬೇದೂರು, ವಿ.ಜಿ. ಹೆಗಡೆ, ಕೆ.ಆರ್. ಗೋಪಾಲ, ತೀರ್ಥಹಳ್ಳಿ ಮಠದ ಸಮಿತಿ ಅಧ್ಯಕ್ಷ ಕಾರ್ತಿಕ್, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಶ್ರೀನಾಥ ಸಾರಂಗ, ಎಂ.ಜಿ. ರಾಮಚಂದ್ರ, ಗೌತಮ ಮತ್ತಿತರರು ಇದ್ದರು.

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror