ಭಾರತದ ಕೃಷಿಗೆ ಇಂದು ದೊಡ್ಡ ಸಂಕಷ್ಟದ ಹಂತಕ್ಕೆ ಬಂದಿರುವುದು ಸ್ಪಷ್ಟವಾಗುತ್ತಿದೆ. ಹವಾಮಾನ ಬದಲಾವಣೆ, ವಿಪರೀತ ಮಳೆ, ಅತಿಯಾದ ಉಷ್ಣತೆ, ಬರ, ಪ್ರವಾಹ ಇವನ್ನೆಲ್ಲ ಎದುರಿಸಲು ಹಳೆಯ ಪದ್ಧತಿಯ ಕೃಷಿ ಮಾತ್ರ ಸಾಕಾಗುವುದಿಲ್ಲ. ಈ ಹಿನ್ನೆಲೆ ಹವಾಮಾನ ಸಹಿಷ್ಣು ಕೃಷಿ (Climate Resilient Agriculture) ಅತ್ಯವಶ್ಯಕವಾಗಿದೆ. ಭಾರತದ ಭವಿಷ್ಯ, ಆಹಾರ ಭದ್ರತೆ, ಗ್ರಾಮೀಣ ಆರ್ಥಿಕತೆ ಎಲ್ಲದಕ್ಕೂ ಈ ಕೆಲಸ ಅಗತ್ಯವಿದೆ. ಈ ಪರಿಸರ ಸ್ನೇಹಿ ನಡೆಯು ಭಾರತದ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಹವಾಮಾನ ಬದಲಾವಣೆ ಮತ್ತು ಭಾರತೀಯ ಕೃಷಿ : ಭಾರತದ ಸುಮಾರು 50% ಜನರ ಜೀವನೋಪಾಯ ನೇರವಾಗಿ ಕೃಷಿಯ ಮೇಲೆ ಅವಲಂಬಿತವಾಗಿದ್ದಾರೆ. ಮಳೆಯ ಅವಲಂಬಿತ ಕೃಷಿ, ಕಡಿಮೆ ನೀರಿನ ಸಂಪನ್ಮೂಲ, ಫಲವತ್ತತೆ ಕಳೆದುಕೊಳ್ಳುತ್ತಿರುವ ಮಣ್ಣು – ಇವುಗಳ ನಡುವೆ ಹವಾಮಾನ ಬದಲಾವಣೆ ಕೃಷಿಯ ಮೇಲೆ ಮತ್ತಷ್ಟು ಒತ್ತಡ ತರುತ್ತಿದೆ. ಹೆಚ್ಚುತ್ತಿರುವ ಅತಿವೃಷ್ಟಿ, ಬರ, ಬಿಸಿಗಾಳಿ ಜತೆಗೇ, ಹೊಸ ಹೊಸ ಕೀಟ–ರೋಗದ ಹೊಸ ರೂಪಗಳು ರೈತರ ಉತ್ಪಾದನೆ ಹಾಗೂ ಆದಾಯದ ಮೇಲೆ ಹೊಡೆತ ನೀಡುತ್ತಿದೆ. ಇದಕ್ಕಾಗಿ ಕೃಷಿ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹವಾಮಾನ ಎದುರಿಸಲು ಸಿದ್ಧರಾಗಬೇಕಿದೆ, ಇನ್ನೊಂದು ಕಡೆ ಹವಾಮಾನ ಸುಧಾರಣೆಗೆ ಕ್ರಮವೂ ಅಗತ್ಯ ಇದೆ.
ಹವಾಮಾನ ಸಹಿಷ್ಣು ಕೃಷಿ ಎಂದರೇನು? ಅಥವಾ Climate Resilient Agriculture (CRA) ಎಂದರೇನು..? : ಹವಾಮಾನ ಬದಲಾವಣೆಯ ಪರಿಣಾಮಕ್ಕೆ ತಾನೇ ಹೊಂದಿಕೊಂಡು ಉತ್ಪಾದನೆಯನ್ನು ಸ್ಥಿರವಾಗಿ ಇರಿಸಿಕೊಳ್ಳುವುದು. ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಜೀವ ವೈವಿಧ್ಯತೆಯನ್ನು ಕಾಪಾಡುತ್ತಾ ರೈತನ ಆದಾಯವನ್ನೂ ಸುರಕ್ಷಿತಗೊಳಿಸುವ ಕೃಷಿ ವಿಧಾನವೇ ಹವಾಮಾನ ಸಹಿಷ್ಣು ಕೃಷಿ. ಇದು ಕೇವಲ ತಾಂತ್ರಿಕ ಪದ್ಧತಿಗಳಲ್ಲ, ಪೂರ್ಣ ಕೃಷಿ–ವ್ಯವಸ್ಥೆಯಲ್ಲಿ ನಡೆಯುವ ಬದಲಾವಣೆಯಾಗಿರುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಹವಾಮಾನ ಸಹಿಷ್ಣು ಕೃಷಿಯ ಪ್ರಮುಖ ಅಂಶಗಳು ಹೀಗಿದೆ…
ಕೃಷಿ ನೀತಿ ಮತ್ತು ಸರ್ಕಾರದ ಪಾತ್ರ : ಹವಾಮಾನ ಆಧಾರಿತವಾಗಿ ಕೃಷಿ ಮಾಡುವ ವೇಳೆ ರೈತರಿಗೆ ಸರ್ಕಾರದಿಂದ ನೆರವು ನೀಡುವುದು ಅಗತ್ಯ. PM–Fasal Bima Yojana ಮೂಲಕ ಬೆಳೆ ವಿಮಾ ಯೋಜನೆಗಳು ರೈತನಿಗೆ ಹವಾಮಾನ ಅಪಾಯದಿಂದ ರಕ್ಷಣೆ ನೀಡುವುದು. PM–KSY, PM–Krishi Sinchayee Yojana ಮೂಲಕ ನೀರಾವರಿ ವಿಸ್ತರಣೆ, ನೀರಿನ ಪ್ರಯೋಜನಕಾರಿ ಬಳಕೆಗೆ ಆದ್ಯತೆ ನೀಡುವುದು. Guardians of climate ಆಗಿರುವ ರೈತರಿಗೆ ಸೂಕ್ತ ಬೆಲೆ, ಮಾರುಕಟ್ಟೆ ಪ್ರವೇಶ, ಸಂಗ್ರಹಣಾ ಸೌಲಭ್ಯ ಒದಗಿಸುವ ಅವಶ್ಯಕತೆ ಇದೆ. ರಾಜ್ಯ ಸರ್ಕಾರಗಳು ಕ್ಲೈಮೇಟ್–ಸ್ಮಾರ್ಟ್ ಕೃಷಿ ಯೋಜನೆಗಳು, ಮಳೆ ಆಧಾರಿತ ಪ್ರದೇಶಗಳ ವಿಶೇಷ ಯೋಜನೆಗಳನ್ನು ರೂಪಿಸಬೇಕು.
ರೈತ–ಕೇಂದ್ರಿತ ಹವಾಮಾನ ನೀತಿ ಏಕೆ ಬೇಕು? : ಹವಾಮಾನ ಬದಲಾವಣೆ ಪರಿಣಾಮವನ್ನು ರೈತ ಮೊದಲಿಗೆ ಅನುಭವಿಸುತ್ತಾನೆ. ಈ ಬದಲಾವಣೆಯ ಕಾರಣದಿಂದ ಆದಾಯದ ಅನಿಶ್ಚಿತತೆ, ಸಾಲದ ಭಾರ, ಬೆಳೆ ಹಾನಿ–ಇವೆಲ್ಲ ಸಮಾಜದಲ್ಲಿಯೂ ಅಸ್ಥಿರತೆ ಮೂಡಿಸುತ್ತವೆ. ಹೀಗಾಗಿ ಇಂದಿನ ಹವಾಮಾನ ಬದಲಾವಣೆಯ ಸಮಯದಲ್ಲಿ ಅತಿ ತುರ್ತಾಗಿ ಹವಾಮಾನ ಸಹಿಷ್ಣು ಕೃಷಿಯ ಅಗತ್ಯ ಅಗತ್ಯ ಇದೆ. ಈ ಮೂಲಕ ಉತ್ಪಾದನೆ ಸ್ಥಿರವಾಗುತ್ತದೆ, ರೈತನ ಆದಾಯ ಹೆಚ್ಚಲು ಸಾಧ್ಯವಿದ್ದು, ದೇಶದ ಆಹಾರ ಭದ್ರತೆಯೂ ಸಂರಕ್ಷಿತವಾಗುತ್ತದೆ. ಇದಕ್ಕಾಗಿ ಹವಾಮಾನ ಸಹಿಷ್ಣು ಕೃಷಿಯನ್ನು ಕೇವಲ ಯೋಜನೆ ಮಟ್ಟದಲ್ಲಲ್ಲ, ಗ್ರಾಮ ಮಟ್ಟದ ಕ್ರಿಯಾಶೀಲ ಅಭಿಯಾನವಾಗಿಸಬೇಕು. ರೈತರ ಸಂಘಗಳು, ಸಹಕಾರಿ ಸಂಸ್ಥೆಗಳು, ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು – ಎಲ್ಲರೂ ಸೇರಿ ಕಾರ್ಯ ನಿರ್ವಹಿಸಬೇಕು. “ಹವಾಮಾನ ಸ್ನೇಹಿ ರೈತ – ಹವಾಮಾನ ಸುರಕ್ಷಿತ ಭಾರತ” ಎಂಬ ಧ್ಯೇಯದೊಂದಿಗೆ ತರಬೇತಿ, ಬೆಂಬಲ, ತಾಂತ್ರಿಕ ಸಲಹೆ, ಹಣಕಾಸು ನೆರವು ನಿರಂತರವಾಗಿ ದೊರಕುವಂತೆ ವ್ಯವಸ್ಥೆ ರೂಪಿಸಬೇಕು ಎಂದು ವರದಿಗಳು ಹೇಳಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಡಿಕೆ (Arecanut) ಶತಮಾನಗಳಿಂದ ಭಾರತೀಯ ಉಪಖಂಡದಲ್ಲಿ ಸಾಂಸ್ಕೃತಿಕ, ಔಷಧೀಯ ಹಾಗೂ ಕೃಷಿ ಆಧಾರಿತ…
ಕೃಷಿಯನ್ನು ನಂಬಿ ಸೋತ ಉದಾಹರಣೆ ಕಡಿಮೆ. ಆದರೆ ಹವಾಮಾನ, ನೀರಾವರಿ ಹಾಗೂ ಅವೈಜ್ಞಾನಿಕ…
ಚಳಿಗಾಲದಲ್ಲಿ ಬಿಸಿಬಿಸಿ ಕಡಲೆಕಾಯಿ ತಿನ್ನುವುದೇ ಖುಷಿ. ಕಡಲೆಕಾಯಿ ತಿನ್ನುವಾಗ ಹೆಚ್ಚಿನ ಜನರು ಅದರ…
ಕರ್ನಾಟಕ ಸರ್ಕಾರದ ವಿಕಲಚೇತನರು ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು “ಸಾಧನೆ” ಯೋಜನೆಯ…
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಮೂಲಕ ಗರ್ಭಿಣಿಯರಿಗೆ ಗರ್ಭಧಾರಣೆಯ…
ಅಡಿಕೆ ಬೆಳೆಗಾರರಿಗೆ ನೂತನ ತಂತ್ರಜ್ಞಾನವೊಂದನ್ನು ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್…