Advertisement
MIRROR FOCUS

ನೇಪಾಳದಲ್ಲಿ ಕೈಗಾರಿಕಾ ಬಳಕೆಗೆ ಅಡಿಕೆ, ಏಲಕ್ಕಿ, ಕಾಳುಮೆಣಸು ಆಮದುಗೆ ಅನುಮತಿ

Share

ನೇಪಾಳ ಸರ್ಕಾರವು ಈ ಆರ್ಥಿಕ ವರ್ಷಕ್ಕೆ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ , ಏಲಕ್ಕಿ , ಕಪ್ಪು ಮತ್ತು ಬಿಳಿ ಕಾಳುಮೆಣಸು ಆಮದುಗೆ ಅಧಿಕೃತ ಅನುಮತಿ ನೀಡಿದೆ. ಆದರೆ ಆಮದು ಮಾಡಲು ಇಚ್ಛಿಸುವ ಕೈಗಾರಿಕೆಗಳು ಉದ್ಯಮ ಇಲಾಖೆ (Department of Industry)ಯಿಂದ ಕಡ್ಡಾಯ ಅನುಮೋದನೆ ಪಡೆಯಬೇಕು. ಇಲಾಖೆಯು ಕೈಗಾರಿಕಾ ಅವಶ್ಯಕತೆ, ದೇಶೀಯ ಲಭ್ಯತೆ ಹಾಗೂ ಅಗತ್ಯ ಪ್ರಮಾಣವನ್ನು ಪರಿಶೀಲಿಸಿ ಅನುಮತಿ ನೀಡಲಿದೆ.

ಹೊಸವಾಗಿ ಸ್ಥಾಪಿತವಾಗಿರುವ ಕೈಗಾರಿಕೆಗಳು ತಮ್ಮ ಉದ್ಯಮ ನೋಂದಣಿ ದಾಖಲೆಗಳು, ತೆರಿಗೆ ವಿವರಗಳು ಹಾಗೂ ಉತ್ಪಾದನಾ ಯೋಜನೆಗಳನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ಹಿಂದಿನ ವರ್ಷಗಳಲ್ಲಿ ಮಾಡಿರುವ ಆಮದು ಪ್ರಮಾಣ ಮತ್ತು ಬಳಕೆಯ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಪ್ರಕಾರ, ಈ ಕ್ರಮವು ಆಮದು ಪದಾರ್ಥಗಳ ಸರಿಯಾದ ಕೈಗಾರಿಕಾ ಬಳಕೆಯನ್ನು ಖಚಿತಪಡಿಸುವುದು, ಅಕ್ರಮ ವ್ಯಾಪಾರವನ್ನು ನಿಯಂತ್ರಿಸುವುದು ಹಾಗೂ ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧಿತ ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಎಂಬ ಉದ್ದೇಶ ಹೊಂದಿದೆ.

ನೇಪಾಳದ ಆಮದು ನಿರ್ಧಾರವು ಭಾರತದ ಅಡಿಕೆ ಮಾರುಕಟ್ಟೆಗೆ ಪರಿಣಾಮ ಬೀರಲಿದೆಯೇ ಎಂಬುದು ಈಗಿನ ಪ್ರಶ್ನೆ. ನೇಪಾಳ ಸರ್ಕಾರ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ ಆಮದುಗೆ ಅಧಿಕೃತ ಅನುಮತಿ ನೀಡಿರುವುದು ದಕ್ಷಿಣ ಏಷ್ಯಾದ ಅಡಿಕೆ ವ್ಯಾಪಾರದಲ್ಲಿ ಹೊಸ ಸಂಚಲನ ತಂದಿದೆ. ಇದರಿಂದ ಭಾರತ, ವಿಶೇಷವಾಗಿ ಕರ್ನಾಟಕ ಮತ್ತು ಕೇರಳದ ಅಡಿಕೆ ಮಾರುಕಟ್ಟೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ ಮತ್ತು ನೇಪಾಳ ನಡುವೆ ಮುಕ್ತ ಗಡಿ ವ್ಯಾಪಾರ ಇರುವುದರಿಂದ, ನೇಪಾಳಕ್ಕೆ ಆಮದುಗೊಳ್ಳುವ ಅಡಿಕೆಯ ಒಂದು ಭಾಗ ಮರುರಪ್ತಾಗಿ ಭಾರತಕ್ಕೆ ಹರಿದುಬರುವ ಅಪಾಯ ಇರುತ್ತದೆ. ಕೈಗಾರಿಕಾ ಬಳಕೆ ಎಂದು ಆಮದು ಮಾಡಿದ ಅಡಿಕೆ,  ಅಕ್ರಮವಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದರೆ ಸ್ಥಳೀಯ ಉತ್ಪಾದಕರಿಗೆ ಬೆಲೆ ಕುಸಿತ ಉಂಟಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಕೆಲವು ದೇಶಗಳಿಗೆ ಅಡಿಕೆ ರಫ್ತು ಮಾಡುತ್ತದೆ.  ನೇಪಾಳದಲ್ಲಿ ಕೈಗಾರಿಕೆಗಳಿಗೆ ಅಧಿಕೃತ ಆಮದು ಅವಕಾಶ ನೀಡಿದರೆ, ನೇಪಾಳ ಮಾರುಕಟ್ಟೆಯಲ್ಲಿ ಭಾರತೀಯ ಅಡಿಕೆಗೆ ಬೇಡಿಕೆ ಕಡಿಮೆಯಾಗಬಹುದು ಹಾಗೂ ಆಮದು ಅಡಿಕೆಯ ಮೇಲಿನ ಅವಲಂಬನೆ ಹೆಚ್ಚಬಹುದು, ಇದರಿಂದ ಭಾರತದ ರಫ್ತು ಅವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

18 hours ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

18 hours ago

‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ

ಪರಿಸರ ನಾಶವು ಕೇವಲ ಸಮಸ್ಯೆಯಲ್ಲ, ಅದು ಅಪರಾಧ ಎಂಬುದನ್ನು “ಗ್ರೀನ್ ಕ್ರೈಮ್” ಪುಸ್ತಕ…

19 hours ago

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…

1 day ago

ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?

ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…

2 days ago

ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…

2 days ago