ಚಾಲಿ ಅಡಿಕೆ ಮಾರುಕಟ್ಟೆ | ಹೊಸ ಅಡಿಕೆಗೆ 350 ರೂಪಾಯಿ ದರ ನಿಗದಿ

October 3, 2025
11:37 AM

ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನಿಂದ ಹೊಸ ಅಡಿಕೆಗೆ ದರ ನಿಗದಿಯಾಗಿದೆ. ಕ್ಯಾಂಪ್ಕೊ ಹಾಗೂ ಇತರ ಸಹಕಾರಿ ಸಂಸ್ಥೆಗಳು ಹೊಸ ಅಡಿಕೆಗೆ 350 ರೂಪಾಯಿ ದರವನ್ನು ನಿಗದಿ ಮಾಡಿದೆ. ಇಂದಿನಿಂದ ಈ ವರ್ಷದ ಅಡಿಕೆ ಮಾರುಕಟ್ಟೆ ಪ್ರವೇಶವಾಗಲಿದ್ದು, ಕಳೆದ ವರ್ಷದ ಅಡಿಕೆಯು ಹಳೆ ಅಡಿಕೆಯಾಗಿ ಚೋಲ್‌ ಅಡಿಕೆಗೆ 490 ರೂಪಾಯಿ ಮತ್ತು  ಡಬಲ್‌ ಚೋಲ್‌ ಅಡಿಕೆಗೆ 530 ರೂಪಾಯಿಗೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಮಾರುಕಟ್ಟೆ 350 ರಿಂದ 355 ರೂಪಾಯಿಗೆ ಖರೀದಿ ನಡೆಸುವ ಬಗ್ಗೆ ಮಾಹಿತಿ ಇದೆ. ಚೋಲ್‌ ಅಡಿಕೆ 495-500 ರೂಪಾಯಿ ಹಾಗೂ ಡಬಲ್‌ ಚೋಲ್‌ ಅಡಿಕೆ 530-535 ರೂಪಾಯಿವರೆಗೂ ಖರೀದಿ ನಡೆಯುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಈ ಬಾರಿ ಅಡಿಕೆಯ ಫಸಲು ಶೇ.70 ರಷ್ಟು ಕೊಳೆರೋಗ ಹಾಗೂ ಇಳುವರಿ ಕೊರತೆ, ಎಲೆಚುಕ್ಕಿ ರೋಗದಿಂದ ಅಡಿಕೆ ಇಳುವರಿ ಮೇಲೆ ಹೊಡೆತ, ಹವಾಮಾನ ವೈಪರೀತ್ಯದ ಕಾರಣದಿಂದ ಎಳೆ ಅಡಿಕೆ ಬಿದ್ದಿರುವುದು ಸೇರಿದಂತೆ ವಿವಿಧ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಿದ್ದರೂ ಆರಂಭದ ಮಾರುಕಟ್ಟೆಯಾಗಿ 350 ರೂಪಾಯಿಗೆ ಅಡಿಕೆ ಮಾರುಕಟ್ಟೆ ಬಂದಿದೆ. ಆದರೆ ಈ ಬಾರಿ ಆರಂಭದ ಧಾರಣೆಯೇ ಕಡಿಮೆ ನಿಗದಿಯಾಗಿದೆ. 2024 ರಲ್ಲಿ 340 ರೂಪಾಯಿ ದರ ನಿಗದಿಯಾಗಿದ್ದರೆ  2023 ರಲ್ಲಿ 365 ರೂಪಾಯಿ ನಿಗದಿಯಾಗಿತ್ತು, 2021 ರಲ್ಲಿ  425 ರೂಪಾಯಿ ನಿಗದಿಯಾಗಿತ್ತು. ಈ ಬಾರಿ ಕಳೆದ ವರ್ಷದ ದರಕ್ಕಿಂತ 10 ರೂಪಾಯಿ ಹೆಚ್ಚಾಗಿ ನಿಗದಿಯಾಗಿದೆ. ಆದರೆ ಬೆಳೆ ಕಡಿಮೆ, ಬೆಳೆ ನಷ್ಟ ಹಾಗೂ ಅಡಿಕೆ ಬೆಳೆಗಾರರ ಸಂಕಷ್ಟ ಹಿನ್ನೆಲೆಯಲ್ಲಿ ಈ ಬಾರಿ ಕನಿಷ್ಟ 375 ರೂಪಾಯಿ ಆರಂಭದ ದರ ನಿಗದಿಯಾಗಬೇಕಿತ್ತು ಎನ್ನುವುದು ಅಡಿಕೆ ಬೆಳೆಗಾರರ ನಿರೀಕ್ಷೆಯಾಗಿತ್ತು.  ಕಳೆದ ಮೂರು ವರ್ಷದ ಅಡಿಕೆ ಮಾರುಕಟ್ಟೆಯ ಆರಂಭದ ಮಾಹಿತಿ ಹೀಗಿತ್ತು….

ದೀಪಾವಳಿ ಬಳಿಕ ಚುರುಕಾಯ್ತು ಅಡಿಕೆ ಮಾರುಕಟ್ಟೆ | ಚಾಲಿ ಅಡಿಕೆ ಈಗ ಹೇಗಿದೆ..? ಏನಾದೀತು ಈ ಬಾರಿಯ ಅಡಿಕೆ ಧಾರಣೆ..?

#Arecanut | ಹೊಸ ಚಾಲಿ ಅಡಿಕೆಗೆ ಧಾರಣೆ ನಿಗದಿ | 365 ರೂಪಾಯಿಗೆ ಖಾತೆ ತೆರೆದ ಚಾಲಿ ಹೊಸ ಅಡಿಕೆ | ಏನಾಗಬಹುದು ಈ ಬಾರಿಯ ಅಡಿಕೆ ಮಾರುಕಟ್ಟೆ.. ?

ಅಡಿಕೆ ಮಾರುಕಟ್ಟೆ | ಹೊಸ ಅಡಿಕೆಗೆ ಆರಂಭದಲ್ಲಿಯೇ ಭರ್ಜರಿ ರೇಟು |ಹೊಸ ಚಾಲಿ ಅಡಿಕೆಗೆ 425 ರೂಪಾಯಿ ದರ ನಿಗದಿ |

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ
September 23, 2026
9:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!
September 23, 2026
1:58 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?
September 23, 2026
9:18 AM
by: ದ ರೂರಲ್ ಮಿರರ್.ಕಾಂ
₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror