ಹೊಸ ಭತ್ತದ ತಳಿ ಪತ್ತೆಹಚ್ಚಿ ಪೇಟೆಂಟ್ ಪಡೆದ ರೈತ !

March 25, 2022
10:41 PM

ಮೈಸೂರಿನ ಜಿಲ್ಲೆಯ ಟಿ ನರಸೀಪುರ ತಾಲೂಕಿನ ಮಾಡ್ರಳ್ಳಿ ಗ್ರಾಮದ ಶಂಕರ್ ಗುರು ಅವರು ಭತ್ತದ ಬೀಜ ಸಂಗ್ರಹಣೆ ಮಾಡಿ, ಹೊಸ ತಳಿಯನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಎನ್‌ಎಂಎಸ್ -2 ತಳಿ ಎಂದು ಅವರೇ ಹೆಸರನ್ನೂ ಇಟ್ಟಿದ್ದಾರೆ. ಈ ಎನ್‌ಎಂಎಸ್ -2 ಭತ್ತದ ತಳಿಯಿಂದ ಪ್ರತಿ ಎಕರೆಗೆ 32 ಕ್ವಿಂಟಾಲ್ ಭತ್ತವನ್ನು ಬೆಳೆಯಬಹುದಾಗಿದೆ.  ಈ ಹಿನ್ನೆಲೆ ಇವರಿಗೆ ಭಾರತ ಸರ್ಕಾರದಿಂದ ಪೇಟೆಂಟ್ ಹಕ್ಕನ್ನು ನೀಡಲಾಗಿದೆ.

ಹೊಸ ತಳಿ ಭತ್ತವನ್ನು ಬೆಳೆದಾಗ ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಆದ್ದರಿಂದ ನಾವು ಈ ಬಿತ್ತನೆ ಭತ್ತವನ್ನು ಗ್ರಾಂ ಲೆಕ್ಕದಲ್ಲಿ ನೀಡುತ್ತೇವೆ, ಕ್ವಿಂಟಾಲ್‌ಗಟ್ಟಲೆ ನೀಡಿದರೆ ಅದನ್ನು ಬೆಳೆದು ಬೆಂಬಲ ಬೆಲೆ ದೊರೆಯದಿದ್ದರೆ ನಮಗೆ ಕಷ್ಟವಾಗುತ್ತದೆ ಎಂದಿದ್ದಾರೆ.

ಇದು ವಿಭಿನ್ನ ಗುಣಲಕ್ಷಣ ಹೊಂದಿದ್ದು, ಉತ್ತಮವಾದ ತೆನೆ, ಹುಲ್ಲು, ರೋಗ ರಹಿತ ಗುಣಗಳಿರುವ ಈ ತಳಿಯನ್ನು ಸತತ ಏಳು ವರ್ಷ ಅಧ್ಯಯನ ನಡೆಸಿ ಎಲ್ಲಾ ಹವಾಮಾನಗಳಿಗೆ ಹೊಂದಾಣಿಕೆಯಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಭತ್ತದ ಹಿಡುವಳಿಯ ಜೊತೆಗೆ ಹುಲ್ಲು ಕೂಡ ಚೆನ್ನಾಗಿ ಬರುತ್ತದೆ.ಶಂಕರ್ ಗುರು ಅವರಿಗೆ ಎನ್‌ಎಂಎಸ್ -2 ಸ್ಥಳೀಯ ಅಭಿವೃದ್ಧಿಗಾಗಿ ನ್ಯಾಷನಲ್ ಇನ್ನೋವೇಶನ್ ಅವಾರ್ಡ್, ದೇಸಿ ಅಕ್ಕಿ ಮೇಳದಲ್ಲಿ 2011ರಲ್ಲಿ ರೈತ ವಿಜ್ಞಾನಿ ಪ್ರಶಸ್ತಿ ಕೂಡ ಲಭಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror