ಮೈಸೂರಿನ ಜಿಲ್ಲೆಯ ಟಿ ನರಸೀಪುರ ತಾಲೂಕಿನ ಮಾಡ್ರಳ್ಳಿ ಗ್ರಾಮದ ಶಂಕರ್ ಗುರು ಅವರು ಭತ್ತದ ಬೀಜ ಸಂಗ್ರಹಣೆ ಮಾಡಿ, ಹೊಸ ತಳಿಯನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಎನ್‌ಎಂಎಸ್ -2 ತಳಿ ಎಂದು ಅವರೇ ಹೆಸರನ್ನೂ ಇಟ್ಟಿದ್ದಾರೆ. ಈ ಎನ್‌ಎಂಎಸ್ -2 ಭತ್ತದ ತಳಿಯಿಂದ ಪ್ರತಿ ಎಕರೆಗೆ 32 ಕ್ವಿಂಟಾಲ್ ಭತ್ತವನ್ನು ಬೆಳೆಯಬಹುದಾಗಿದೆ. ಈ ಹಿನ್ನೆಲೆ ಇವರಿಗೆ ಭಾರತ ಸರ್ಕಾರದಿಂದ ಪೇಟೆಂಟ್ ಹಕ್ಕನ್ನು ನೀಡಲಾಗಿದೆ.
ಹೊಸ ತಳಿ ಭತ್ತವನ್ನು ಬೆಳೆದಾಗ ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಆದ್ದರಿಂದ ನಾವು ಈ ಬಿತ್ತನೆ ಭತ್ತವನ್ನು ಗ್ರಾಂ ಲೆಕ್ಕದಲ್ಲಿ ನೀಡುತ್ತೇವೆ, ಕ್ವಿಂಟಾಲ್‌ಗಟ್ಟಲೆ ನೀಡಿದರೆ ಅದನ್ನು ಬೆಳೆದು ಬೆಂಬಲ ಬೆಲೆ ದೊರೆಯದಿದ್ದರೆ ನಮಗೆ ಕಷ್ಟವಾಗುತ್ತದೆ ಎಂದಿದ್ದಾರೆ.
ಇದು ವಿಭಿನ್ನ ಗುಣಲಕ್ಷಣ ಹೊಂದಿದ್ದು, ಉತ್ತಮವಾದ ತೆನೆ, ಹುಲ್ಲು, ರೋಗ ರಹಿತ ಗುಣಗಳಿರುವ ಈ ತಳಿಯನ್ನು ಸತತ ಏಳು ವರ್ಷ ಅಧ್ಯಯನ ನಡೆಸಿ ಎಲ್ಲಾ ಹವಾಮಾನಗಳಿಗೆ ಹೊಂದಾಣಿಕೆಯಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಭತ್ತದ ಹಿಡುವಳಿಯ ಜೊತೆಗೆ ಹುಲ್ಲು ಕೂಡ ಚೆನ್ನಾಗಿ ಬರುತ್ತದೆ.ಶಂಕರ್ ಗುರು ಅವರಿಗೆ ಎನ್‌ಎಂಎಸ್ -2 ಸ್ಥಳೀಯ ಅಭಿವೃದ್ಧಿಗಾಗಿ ನ್ಯಾಷನಲ್ ಇನ್ನೋವೇಶನ್ ಅವಾರ್ಡ್, ದೇಸಿ ಅಕ್ಕಿ ಮೇಳದಲ್ಲಿ 2011ರಲ್ಲಿ ರೈತ ವಿಜ್ಞಾನಿ ಪ್ರಶಸ್ತಿ ಕೂಡ ಲಭಿಸಿದೆ.
ಹವಾಮಾನ ಬದಲಾವಣೆಯು 2050 ರ ದಶಕದಲ್ಲಿ ಮಳೆಯಾಶ್ರಿತ ಅಕ್ಕಿ ಇಳುವರಿಯನ್ನು 20% ಮತ್ತು…
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ದೈವ ಶಾಪ ದೋಷ ಎಂಬುದು ಗತ ಜನ್ಮದ ಕರ್ಮದಿಂದ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…