ಡಿಸೆಂಬರ್ ಬರುತ್ತಿದ್ದಂತೆ ಬೀದಿ ಬೀದಿಗಳು ಕಳೆಗಟ್ಟುವುದು, ವಿದ್ಯುತ್ ದೀಪಗಳಿಂದ ಅಲಂಕರಿಸ್ಪಡುವುದು, ಸುಂದರವಾದ ಕ್ರಿಸ್ ಮಸ್ ಟ್ರೀ ಗಳು, ತಯಾರಿ ಹಂತದಲ್ಲಿರುವ ನಮೂನೆವಾರು ಕೇಕ್ ಗಳು . ಪ್ರತಿ ವರ್ಷ ಡಿಸೆಂಬರ್ ಇಪ್ಪತೈದರ ಕ್ರಿಸ್ಮಸ್ ಹಬ್ಬ ಮುಗಿಯುವುದು ಜನವರಿ ಒಂದರ ಆರಂಭದೊಂದಿಗೆ.
ವರ್ಷದ ಕೊನೆಯ ತಿಂಗಳು ಆರಂಭವಾತ್ತಿರುವಂತೆ ವಿದೇಶದಲ್ಲಿ ನೆಲೆಸಿರುವ ಬಂಧು ಬಳಗ, ಮಿತ್ರರು ಕಳುಹಿಸುವ ಅಲ್ಲಿನ ಛಾಯಾಚಿತ್ರಗಳನ್ನು ನೋಡುವುದೇ ಸಂಭ್ರಮ. ಒಂದೊಂದು ಕಡೆ ಒಂದೊಂದು ಬಗೆಯ ಆಚರಣೆ. ಕ್ಯಾಲೆಂಡರ್ ವರ್ಷಾಚರಣೆಗೆ ಇತ್ತೀಚೆಗೆ ನಮ್ಮಲ್ಲೂ ಬಹಳ ಸಂಭ್ರಮ ಪಡುತ್ತೇವೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು , ಉಡುಗೊರೆ ಕೊಡುವುದು, ಚಾಕಲೇಟ್, ಸಿಹಿ ಹಂಚುವುದು ಎಲ್ಲಾ ಇದ್ದದ್ದೇ ಅಲ್ಲವೇ . ಇವಕ್ಕೆ ಒಂದು ಕಾರಣ ಬೇಕಷ್ಟೇ!2020 ಹಾಗೂ 2021 ಬಹಳ ನೆನಪಿನಲ್ಲಿ ಉಳಿಯುವ ವರ್ಷಗಳು. ಖುಷಿಯ ವಿಚಾರಕ್ಕಿಂತ ದುರಂತ ವರ್ಷಗಳೇ ಅನ್ನಬಹುದು.
ಅಲ್ಲಾ ಬದಲಾವಣೆ ಜಗದ ನಿಯಮ ಸರಿ, ಆದರೆ ಈ ಪರಿಯ ಬದಲಾವಣೆ?!?!.. ನೈಸರ್ಗಿಕ ಅವಘಡಗಳು ನಿತ್ಯವೆಂಬಂತೆ ನಡೆಯುತ್ತಿವೆ. ಮಳೆಯ ಸ್ವರೂಪ ಬದಲಾಗುತ್ತಿದೆ. ಪರಿಸರದಲ್ಲಿನ ಕಾಯಿಲೆಗಳ ತೀವ್ರತೆ , ಬಾಧಿಸುವ ವ್ಯಾಪ್ತಿ ದಿನದಿಂದ ದಿನಕ್ಕೆ ಬೇರೆ ಬೇರೆಯೇ. ಒಬ್ಬನಿಂದ ಇನ್ನೊಬ್ಬನಿಗೆ ಹರಡುವ , ಆಮೇಲಿನ ಪ್ರಭಾವ ಎಲ್ಲವೂ ವಿಭಿನ್ನ. ಎಲ್ಲವೂ ಆಯೋಮಯವೆನಿಸುತ್ತಿದೆ. ಈ ಕಷ್ಟ, ಸಂಕಷ್ಟ, ಬೇಸರಿಕೆ,ನೋವು ,ನಷ್ಟಗಳ ಭಾವನೆಗಳೆಲ್ಲವನ್ನು ಒಂದು ಗಂಟು ಮಾಡಿ ಬದಿಯಲ್ಲಿರಿಸೋಣ. ಮನಸನ್ನು ಹೊಸ ವರುಷದ ಸ್ವಾಗತಕ್ಕೆ ಸಿದ್ಧಗೊಳಿಸೋಣ.
2022 ದೇಶಕ್ಕೆ ಹಿತವನ್ನೇ ನೀಡಲಿ. ಅಭಿವೃದ್ಧಿಯ ಪಥದಲ್ಲಿ ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯಲಿ. ಮನಸಿನ ಸ್ವಾರ್ಥ, ಲೋಭ, ಹೊಟ್ಟೆಗಿಚ್ಚು ಬದಿಗಿಟ್ಟು ದೇಶಹಿತವೇ ಮುಖ್ಯವಾಗಲಿ . ಉಲ್ಲಾಸಕರವಾಗಿ ಮನಮನದಲ್ಲಿ ಸಂತಸವೇ ತುಂಬಿರಲಿ. ಹೊಸ ವರುಷದ ಶುಭಾಶಯಗಳು.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…