2020 ರ ಆರಂಭದಲ್ಲೇ ಶುರುವಾದ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಯಿತು. ವುಹಾನ್ ನಲ್ಲಿ ಆರಂಭವಾದ ಕೋವಿಡ್ ಕೆಲವೇ ದಿನಗಳಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಿಸಿತು. ಕಂಡು ಕೇಳರಿಯದ ಪರಿಣಾಮಗಳನ್ನು ಎದುರಿಸಬೇಕಾಯಿತು. ಅನಿರೀಕ್ಷಿತ ಪರಿಸ್ಥಿತಿ.
ಮನುಜನ ದುರಾಸೆ ಹೆಚ್ಚಾಯಿತೋ, ಪ್ರಕೃತಿ ಬದಲಾವಣೆ ಬಯಸಿತೋ ಅರಿಯದು. ಬದುಕಿನ ಏಕತಾನತೆಯಿಂದ ಬೇಸತ್ತವರು ಒಂದು ಬದಲಾವಣೆ ಬಯಸಿದರು. ಕೊರೊನಾ ಬಂದು ಎಲ್ಲವನ್ನೂ ಬದಲಿಸಿ ಬಿಟ್ಟಿತು. 2020 ಯಾರು ಕೂಡ ಮರೆಯಲಾರದ ವರ್ಷವೆಂದೇ ದಾಖಲಾಯಿತು.
ಬದಲಾದ ಜೀವನ ಶೈಲಿಗೆ ಒಗ್ಗಿಕೊಂಡ ಜನತೆ 2021 ನ್ನು ಹೊಸ ನಿರೀಕ್ಷೆಯೊಂದಿಗೆ ಸ್ವಾಗತಿಸಲು ಸಜ್ಜಾಗಿಯಾಗಿದೆ. ಇಂದಿನ ಜನರ ಆಯ್ಕೆಗಳು, ಆದ್ಯತೆಗಳು ಬದಲಾಗಿವೆ. ದುಬಾರಿ ಜೀವನ ಶೈಲಿಗಿಂತ, ಸರಳ ಆರೋಗ್ಯಕರ ಪರಿಸರವೇ ಮುಖ್ಯ ಆಯ್ಕೆಗಳಾಗಿವೆ. ಆಹಾರದ ವಿಷಯದಲ್ಲೂ ಮನೆ ಆಹಾರದತ್ತಲೇ ಒಲವು ಮೂಡಿದೆ. ಕಹಿ , ಒಗರು ಆದರೂ ಅಮ್ಮ ಮಾಡಿ ಕೊಡುವ ಕಷಾಯವೇ ಅಮೃತವಾಗಿದೆ.
ಹೊಸ ವರುಷದ ಹೊಸ್ತಿಲಲ್ಲಿ ನಿಂತಿದ್ದೇವೆ, ನವ ಕನಸುಗಳೊಂದಿಗೆ. ಒಳ್ಳೆಯ ಮನಸಿನಿಂದ, ಸುಂದರ ಕಲ್ಪನೆಗಳೊಂದಿಗೆ 2021ನೇಯ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಅಶ್ವಿನಿಮೂರ್ತಿ ಅಯ್ಯನಕಟ್ಟೆ
ರಾಷ್ಟ್ರೀಯ ರಾಜಧಾನಿ ದೆಹಲಿಗೆ ಮುಂಗಾರು ಮಳೆ ವಿಳಂಬವಾಗಿದ್ದು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸಾಮಾನ್ಯವಾಗಿ…
ಒಂದೇ ತಾಯಿಯ ಗರ್ಭದಿಂದ ಸಂಜನಿಸಿದ ಸಹೋದರರ ಗುಣಗಳಲ್ಲಿ ವ್ಯತ್ಯಾಸಗಳಿವೆ. ವ್ಯಕ್ತಿತ್ವ ರೂಪೀಕರಣದಲ್ಲೂ ಭಿನ್ನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಸ್ತೆಯ ಗುಂಡಿಗಳಲ್ಲಿ ನೀರಿನ ಅಂಶ ಇರುವಾಗಲೂ ರಸ್ತೆ ತೇಪೆ ಕೆಲಸ ಮಾಡಬಹುದು ಹಾಗೂ…
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…