ರಸ್ತೆ ಬದಿಯ ಸೂಚನಾ ಫಲಕವನ್ನು ಸ್ವಚ್ಛ ಮಾಡುವ ಕಾರ್ಯವೊಂದರ ಕತೆ ಇದು. ಅದರಲ್ಲೇನು ವಿಶೇಷ ..? . ಈ ಕಾರ್ಯ ಮಾಡಿರುವುದು ಮಾನಸಿಕ ದುರ್ಬಲನೊಬ್ಬ. ಈ ಮೂಲಕ ಸಾರ್ವಜನಿಕರಿಗೆ ಜವಾಬ್ದಾರಿಯ ಪಾಠ ಕಲಿಸಿದ್ದಾನೆ.
ಭಾನುವಾರ ಬೆಳಗ್ಗಿನ ಜಾವ ಶಿಶಿಲ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಪ್ರಾ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಕೆಲಸದ ನಿಮಿತ್ತ ಕೊಕ್ಕಡಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ -ಶಿಶಿಲ ತಿರುವಿನಲ್ಲಿರುವ ಸೂಚನಾ ಫಲಕವನ್ನು ಓರ್ವ ವ್ಯಕ್ತಿ ಸ್ವಚ್ಚ ಮಾಡುತ್ತಿದ್ದ. ಇದನ್ನು ಕಂಡ ಅವರಿಗೆ ಧನ್ಯವಾದ ತಿಳಿಸಲು ಹತ್ತಿರ ತೆರಳಿದ್ದಾರೆ. ಆದರೆ ಆ ವ್ಯಕ್ತಿ ಮಾನಸಿಕವಾಗಿ ತುಂಬಾ ದುರ್ಬಲನಾಗಿದ್ದ ಮತ್ತು ತೀರಾ ಬಳಲಿದ್ದ. ವಿಚಾರಿಸಿದಾಗ ಆತ ತಾನು ಹಾಸನದ ರಮೆಶ, ” ಮಂಜಣ್ಣನ ಸೇವೆ ” ಮಾಡುತ್ತಿರುವುದಾಗಿ ಹೇಳಿದ.
ಬಳಿಕ ನೆರೆದ ಸ್ಥಳಿಯರು ಒಂದಷ್ಟು ಧನ ಸಹಾಯ ಮಾಡಿದಾಗ ಸಂತೊಷದಿಂದ ಸ್ವೀಕರಿಸಿದ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಈ ಸಮಾಜಕ್ಕೆ ನೀಡಿದ ಸಂದೇಶ ಗಮನಾರ್ಹವಾಗಿತ್ತು.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…