ಜಗತ್ತಿನಲ್ಲಿ ಅಶಾಂತಿ ಹೆಚ್ಚಾಗಲಿದೆ | ಭೂಮಿ ನಡುಗುತ್ತದೆ… | ಕೋಡಿಮಠದ ಶ್ರೀ ಭವಿಷ್ಯ

October 23, 2022
12:20 PM

ಮುಂದಿನ ಮೂರು ತಿಂಗಳಲ್ಲಿ ಪ್ರಕೃತಿ ವಿಕೋಪ, ಮತಾಂಧತೆ, ಅಶಾಂತಿ, ಕಲಹ ಹೆಚ್ಚಾಗಲಿದೆ. ನಾಡಿನಲ್ಲಿ ಅಶಾಂತಿ ಹೆಚ್ಚಾಗಲಿದೆ.ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ.  ಭವಿಷ್ಯದಲ್ಲಿ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ. ಮನುಷ್ಯನಿಗೆ ಪ್ರಕೃತಿ, ಮಳೆಯಿಂದ ಸಮಸ್ಯೆಗಳಾಗುತ್ತವೆ. ಗುಡ್ಡಗಳು ಕುಸಿತ. ಭೂಕಂಪ ಹೆಚ್ಚಾಗುವ ಲಕ್ಷಣ ಇದೆ. ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ… ಹೀಗೆಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮಳೆ, ರೋಗದಿಂದ ಭೂಮಿಯಿಂದ ದೇಶಕ್ಕೆ ತೊಂದರೆಯಾಗುತ್ತದೆ. ಹಿಂದೆ ನುಡಿದ ಮಾತಿನಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಇದು ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ . ಪ್ರಾರಂಭದಲ್ಲೇ ನಾನು ಹೇಳಿದಂತೆ ಮಳೆ, ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳಾಗುತ್ತವೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ಕೊರೊನಾ ರೋಗ ಹೆಚ್ಚಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ ಎಂದು ಹೇಳಿದ್ದೆ ಇದೆಲ್ಲಾ ನಿಜವಾಗಿದೆ ಎಂದು ಸ್ವಾಮೀಜಿ ಒಂದೆಡೆ ಪ್ರಕೃತಿ ವಿಕೋಪ, ಮತಾಂದತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ. ಈಗ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆ ಕಾಲದಲ್ಲಿ ಈ ಬಗ್ಗೆ ಹೇಳುತ್ತೇನೆ. ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಜನವರಿವರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ. ಇದು ಮತ್ತೊಂದು ರೂಪವಾಗುವ ಲಕ್ಷಣವೂ ಇದೆ ಎಂದು ಕೋಡಿ ಶ್ರೀ ಹೇಳಿದರು. ರಾಜ್ಯ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಅದಕ್ಕೇಕೆ ನಾನು ಅಪಶಕುನ ನುಡಿಯುವುದು ಬೇಡ. ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಹೇಳುತ್ತೇನೆ. ಅದನ್ನು ಯುಗಾದಿ ಫಲದ ಮೇಲೆ ಹೇಳುತ್ತೇನೆ ಎಂದಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror