ಆಹಾರೋತ್ಪಾದನೆಯ ಕ್ಷೇತ್ರದಲ್ಲಿ ಹಾಲಿ ಉತ್ಪಾದನೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಭಾರತದಲ್ಲಿ ಆಹಾರ ಪದಾರ್ಥಗಳಿಗಾಗಿ ಪ್ರತಿ ವರ್ಷ ಜನರು ತಮ್ಮ ಸಂಪಾದನೆಯ ಶೇಕಡಾ 40ರಿಂದ 46ರಷ್ಟು ವೆಚ್ಚ ಮಾಡುತ್ತಾರೆ. ಆಹಾರ ಪದಾರ್ಥಗಳ ಹಣದುಬ್ಬರ ಅತಿಯಾಗಿದೆ. ಆದರೆ ಹಾಲು ಮತ್ತು ಹಾಲಿನ ಮೇಲಿನ ವೆಚ್ಚ ತುಂಬಾ ಕಡಿಮೆಯಾಗಿದೆ. ವಾರ್ಷಿಕ ಹಾಲಿನ ಉತ್ಪನ್ನಗಳ ಮೇಲಿನ ಹಣದುಬ್ಬರ ಕೇವಲ 2.4ರಷ್ಟಿದೆ ಎಂದು ಭಾರತೀಯ ಡೈರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಆರ್.ಎಸ್.ಸೋಧಿ ಹೇಳಿದರು.
ಅವರು ಇಂಡಿಯನ್ ಡೈರಿ ಅಸೋಸಿಯೇಷನ್ ದಕ್ಷಿಣ ವಲಯದ ವತಿಯಿಂದ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಡೈರಿಗಳು ಸಾಧಿಸಿರುವ ಸದೃಢ ಬೆಳವಣಿಗೆಯಿಂದ ಹಣದುಬ್ಬರ ಕಡಿಮೆಯಾಗಲು ಸಾಧ್ಯವಾಗಿದೆ. ಡೈರಿ ಕ್ಷೇತ್ರಕ್ಕೆ ಆಧುನೀಕರಣ ಮತ್ತು ತಾಂತ್ರಿಕ ಪ್ರವೇಶ ಹಾಲಿನ ಗುಣಮಟ್ಟ, ಬೆಲೆ , ಉತ್ಪಾದನೆ ಹೆಚ್ಚಳಕ್ಕೆ ಶಕ್ತಿ ನೀಡಿತು ಎಂದು ಅಭಿಪ್ರಾಯಪಟ್ಟರು.
ಭಾರತೀಯ ಡೈರಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ.ರಾಮ್ ಪಿ. ಅನೇಜಾ, ಹಿಂದೆ ಪೂರ್ವ ದೇಶಗಳಲ್ಲಿ ಹಾಲಿನ ಸೇವನೆ ಜನಪ್ರಿಯವಾಗಿರಲಿಲ್ಲ . ಹಾಲು ಸೇವನೆ ಮಾಡುವವರು ದೈಹಿಕವಾಗಿ ಎತ್ತರವಾಗಿರುತ್ತಾರೆ. ಈ ಕಾರಣದಿಂದಲೇ ಹಾಲು ಸೇವಿಸುತ್ತಿದ್ದ ಅಮೆರಿಕದವರು ಜಪಾನಿಯರ ವಿರುದ್ಧ ಎರಡನೇ ಎರಡನೇ ಮಹಾಯುದ್ಧದಲ್ಲಿ ಗೆದ್ದರು ಎಂಬ ತಮಾಶೆಯ ಮಾತು ದಶಕಗಳ ಹಿಂದೆ ಜನಪ್ರಿಯವಾಗಿತ್ತು. ಹಾಲಿನ ಉತ್ಪಾದನೆಯನ್ನು ದಶಕಗಳಿಂದ ನಿರ್ಲಕ್ಷಿಸಿದ್ದ ಚೀನಿಯರೂ ಬಳಿಕ ಹಾಲು ಸೇವಿಸುವುದನ್ನು ಕಲಿತರು. ಇಂದು ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು 60 ಮಿಲಿಯನ್ ಟನ್ ಹಾಲು ಉತ್ಪಾದಿಸುತ್ತಿದೆ. ಡೈರಿ ಇಂದು ಹೈನುಗಾರಿಕೆಯಿಂದ ಉದ್ಯಮದ ವರೆಗೆ ಬೆಳೆದು ನಿಂತಿದ್ದು, ಈ ಕ್ಷೇತ್ರ ಉಜ್ವಲ ಭವಿಷ್ಯ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಬಿಎಲ್ಇ ಅಧ್ಯಕ್ಷ ಜಿ.ಎಸ್.ಕೃಷ್ಣನ್, ದೊಡ್ಲಾ ಸಂಸ್ಥೆಯ ಬಿ.ವಿ.ಕೆ.ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…
ರೈತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಕಲ ಸಹಕಾರ…
21ನೇ ಜಾನುವಾರು ಗಣತಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಥಮ ಸ್ಥಾನ…