Opinion

ಪ್ರತಿಶತ ತೊಂಬತ್ತು ಭಾಗ ಅರಣ್ಯ ಒತ್ತುವರಿ ಆಗಿದೆ..! | ಜಾನುವಾರುಗಳು ಇವತ್ತು ಮೇಯಲು ಭೂಮಿಯೇ ಇಲ್ಲ| ಹೊಟ್ಟೆ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ಬೇಲಿ ಹಾರುತ್ತವೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಲೆನಾಡು ಗಿಡ್ಡ ಅಥವಾ ಊರ ದನಗಳು ಬೇಲಿ ಹಾರುತ್ತವೆ ಅಂತ ಬಹುದೊಡ್ಡ ಅಪವಾದ ಇದೆ. ಆದರೆ ಏಕೆ ಹಾರುತ್ತವೆ ಎನ್ನುವ ಬಗ್ಗೆ ಯೋಚನೆಗಳು ನಡೆಯುತ್ತಿಲ್ಲ. ಕಾಡುಗಳು, ಬಯಲುಗಳು, ಗೋಮಳಗಳು ಈಗ ಎಲ್ಲಿವೆ…?

Advertisement

ಮಲೆನಾಡು ಗಿಡ್ಡ ಹಸುಗಳು(Desi cow) ಈ ನೆಲದವು. ಅವು ನಮಗಿಂತ ಈ ನೆಲದಲ್ಲಿ ಹೆಚ್ಚಿನ ಹಿರಿತನ ಹೊಂದಿವೆ. ನಾವು ಮನುಷ್ಯರು ನಾಗರೀಕತೆ, ಅನುಕೂಲತೆ, ಆಧುನಿಕತೆ ಎಂದೆಲ್ಲಾ ತಂತ್ರಜ್ಞಾನ ಬಳಸಿ , ಪ್ರಭಾವ ಬಳಸಿ ಗುಡ್ಡ ಬೆಟ್ಟ ಬಯಲು ಎಲ್ಲಾ ಪ್ರದೇಶವನ್ನು ಒತ್ತುವರಿ ಮಾಡಿ ಮಲೆನಾಡು ಗಿಡ್ಡ ಹಸುಗಳೂ ಸೇರಿದಂತೆ ಕಾಡ ಪ್ರಾಣಿಗಳಿಗೂ ಮೇವಿಲ್ಲದಂತೆ ಮಾಡಿದ್ದೇವೆ. ಪ್ರತಿ‌ ಗ್ರಾಮ ಪಂಚಾಯತಿಗೂ ಸಿ& ಡಿ ಲ್ಯಾಂಡ್ ವಿಭಾಗದಲ್ಲಿ ಗೋಮಾಳ ರಿಸರ್ವೇಷನ್ ಇರುತ್ತದೆ. ಆದರೆ ಎಷ್ಟು ಗೋಮಾಳ ಇದೆ..? ಪ್ರತಿಶತ ತೊಂಬತ್ತು ಭಾಗ ಅರಣ್ಯ ಒತ್ತುವರಿ ಆಗಿದೆ…! ಅರಣ್ಯ ಗೋಮಾಳ ಗುಡ್ಡ ಬಯಲು ಎಲ್ಲಾ ಒತ್ತುವರಿ. ಜಾನುವಾರುಗಳು ಇವತ್ತು ಮೇಯಲು ಭೂಮಿಯೇ ಇಲ್ಲ.. ದಿನಕ್ಕೆ ನಾಲ್ಕನೂರು ಗ್ರಾಮ್ ಅನ್ನ ತಿನ್ನುವ ನಮಗೆ ಎಷ್ಟು ಭೂಮಿ ಇದ್ದರೂ ಸಾಲದು. ಆದರೆ ದಿನಕ್ಕೆ ಹತ್ತು ಕೆಜಿ‌ ಆಹಾರ ತಿನ್ನುವ ಹಸುಗಳಿಗೆ ನಮ್ಮ ಊರಿನಲ್ಲಿ ನೂರಡಿ ಜಾಗವೂ ಮೇಯಲು ಇಲ್ಲ. ಜಾನುವಾರುಗಳನ್ನು ಬೆಳಿಗ್ಗೆ ಕೊಟ್ಟಿಗೆಯಿಂದ ಹೊರಗೆ ಮೇಯಲು ಬಿಟ್ಟರೆ ರಸ್ತೆಲೇ ಹೋಗಿ ರಸ್ತೆಲೇ ವಾಪಸು ಕೊಟ್ಟಿಗೆಗೆ ಬರಬೇಕು. ತುಂಬಾ ಬೇಸರ ವಾಗುತ್ತದೆ ‌.

ಬಹಳಷ್ಟು ಜನ ತುಂಬಾ ಪ್ರಾಕ್ಟಿಕಲ್ ಆಗಿ ಚಿಂತನೆ ಮಾಡುತ್ತಾರೆ. ಅವರು ಯೋಚಿಸುವುದು ಮನುಷ್ಯ ಮತ್ತು ಮನುಷ್ಯ ತಿನ್ನುವ ಕೃಷಿ ಬೆಳೆಗಳು ಮತ್ತು ಈ ಕೋಳಿ, ಕುರಿ, ಹಂದಿ, ಮೀನು ಮತ್ತು ಪಾಪಿ ಪರ್ದೇಸಿ ಹಾಲು ಕಡಿಮೆಯ ದನ ಹೋರಿಗಳು ತಿನ್ನಲು ಸಿಕ್ಕರೆ ಸಾಕು. ಇನ್ಯಾವುದಕ್ಕೂ ಈ ಭೂಮಿಯ ಮೇಲೆ ಜಾಗ ಇಲ್ಲ. ಈ ಮನಸ್ಥಿತಿಯಿಂದ ಜಾನುವಾರುಗಳು ಮೇಯಲು ಜಾಗ ಇಲ್ಲದೇ, ಜನರಿಗೂ ಕರುಣೆ ಇಲ್ಲದೇ ಕಸಾಯಖಾನೆ ಸೇರಿದವು. ನಾವು ಮನುಷ್ಯರು ನಮ್ಮ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ನಮ್ಮ ಕಂದಾಯ ಹಕ್ಕು, ಬಗರ್ ಹುಕುಂ, ಅರಣ್ಯ ಭೂಮಿ, ಗೋಮಾಳ ಭೂಮಿ, ಕೆರೆ ಒತ್ತುವರಿ ನಮ್ಮದೆಂದು ಸಕ್ರಮ ಮಾಡಿಕೊಳ್ಳಲು ಮುನ್ನುಗ್ಗುತ್ತೇವೆ. ಆದರೆ ಬಾಯಿ ಬಾರದ ಮೂಕ ಪ್ರಾಣಿಯಾದ ಜಾನುವಾರುಗಳು ನಮ್ಮ ಮೇವು ನಮ್ಮ ಹಕ್ಕು ಎಂದು ದಬ್ಬಾಳಿಕೆಯೋ ಒತ್ತಡವೋ ಮಾಡೋಲ್ಲ…

ಜಾನುವಾರುಗಳ ಮೇವಿನ ಹಕ್ಕನ್ನು ಕೇಳುವರಾರು…? ನಮಗೆ ಎಷ್ಟು ಈ ಭೂಮಿಯ ಮೇಲೆ ಜೀವಿಸುವ ಹಕ್ಕು ಇದೆಯೀ ಅಷ್ಟೇ ಹಕ್ಕು ಜಾನುವಾರುಗಳಿಗೂ ಇದೆಯಲ್ವಾ…? ಅವಕ್ಕೆ, ಬಾಯಿ ಇಲ್ಲ , ಹಕ್ಕೊತ್ತಾಯ ಮಾಡಲು ಬರೋಲ್ಲ. ನಮ್ಮ ಹಾಗೆ ಜಾನುವಾರುಗಳ ಸಾಕುವವರಿಗೆ ಈ ಮೂಕ ಪ್ರಾಣಿಗಳ ಅಸಾಹಯಕತೆ ಹಸಿವು ಕಾಣಿಸುತ್ತದೆ….

ದೊಡ್ಡ ದೊಡ್ಡ ಜಮೀನ್ದಾರರರು ಒತ್ತುವರಿ ಶೂರರು ಯಾವುದೋ ರೀತಿಯಿಂದ ಜಾನುವಾರು ಸಾಕುವವರಿಗೆ ಸಾಕದಂತೆ ಅವರ ಮೂಕ ಪ್ರಾಣಿಗಳ ಪ್ರೀತಿಗೆ ತಣ್ಣೀರು ಎರೆಚುತ್ತಾರೆ….!! ಖಂಡಿತವಾಗಿಯೂ ಕೃಷಿ ಜಮೀನಿನಲ್ಲಿ ಜಾನುವಾರುಗಳ ಮೇಯಲು ಬಿಡಬಾರದು ಸರಿ. ಆದರೆ ಅದೇ ರೀತಿಯಲ್ಲಿ ಊರಿನಲ್ಲಿ ಜಾನುವಾರುಗಳ ಹಕ್ಕಿನ‌ ಮೇವಿನ ಭೂಮಿಯಾದ ಅರಣ್ಯ ಭೂಮಿಯ ಬಯಲು ಪ್ರದೇಶ, ಗೋಮಾಳ ಒತ್ತುವರಿ ಮಾಡಬಾರದು ಕೂಡ. ಜಾನುವಾರುಗಳು ತುಡುಗುತನ ಮಾಡಲು, ಕೃಷಿ ಜಮೀನಿಗೆ ದಾಳಿ ಮಾಡಲು ಈ ಒತ್ತುವರಿ ಕೂಡ ಅತ್ಯಂತ ಪ್ರಮುಖ ಕಾರಣ. ಜಾನುವಾರುಗಳ ಮತ್ತು ಜಾನುವಾರುಗಳ ಸಾಕುವ ಗೋಪಾಲಕರ ನೋವು ಕೇಳುವರಾರು…? ಗೋಪಾಲಕರು ಈ ಸಮಾಜ ಅನುತ್ಪಾದಕ ಎಂದು ಸಾಕದೇ ಬಿಟ್ಟ ಬುದ್ದಿವಂತ ರೈತರ ಮದ್ಯ “ದಡ್ಡರು”… ಜಾನುವಾರುಗಳು ಈ ಮನುಷ್ಯ ಜೀವಿಗಳ ಆಧುನಿಕ ರಾಕ್ಷಸಿತನ ಅರ್ಥವಾಗದ ಮುಗ್ದ ಜೀವಿಗಳು…

The highland cows belong to this land. They have more seniority on this earth than us. We human beings have occupied all areas of hilly plains using civilization, convenience, modernity, technology and influence. Every gram panchayat has cow reservation in C&D land division. But how many cows are there? Ninety percent of the forest is encroached…! All encroachment on the hilly plains of forest. There is no land for cattle to graze today..

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 17-04-2025 | ಎ.20 ರಿಂದ ರಾಜ್ಯದ ವಿವಿದೆಡೆ ಮತ್ತೆ ಮಳೆ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ…

1 hour ago

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

8 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

13 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

21 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

22 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago