ಅಡಿಕೆ ಬೆಳೆಗಾರರಿಗೆ ಮಾಹಿತಿ…| ಅಡಿಕೆ ಹಾಳಾಗದಂತೆ ಮಾತ್ರೆ ಹಾಕಬೇಡಿ | ಪಿಂಗಾರ ಸಂಸ್ಥೆ ಮಾಡಿರುವ ಅಧ್ಯಯನ ಇಲ್ಲಿದೆ.. |

Advertisement

ಅಡಿಕೆ ಹಾಳಾಗದಂತೆ ದಾಸ್ತಾನು ಮಾಡುವುದು ಹೇಗೆ? ಈ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಇರುವ ಬಹುವಾದ ಚರ್ಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಪರಿಹಾರವೊಂದನ್ನು ಕಂಡುಕೊಂಡಿದೆ. ಅಡಿಕೆ ದಾಸ್ತಾನು ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. ನೈಟ್ರೋಜನ್‌ ಗ್ಯಾಸ್‌ ಬಳಕೆ ಈ ಪ್ರಯತ್ನದ ಹೆಜ್ಜೆ.

Advertisement

ಅಡಿಕೆ ಬೆಳೆಗಾರರ ಎಲ್ಲರಲ್ಲೂ ಇರುವ ಚರ್ಚೆ , ಅಡಿಕೆ ಹಾಳಾಗದಂತೆ ದಾಸ್ತಾನು ಇಡುವುದು  ಹೇಗೆ ?. ಎಲ್ಲರಲ್ಲೂ ಇರುವ ಸುಲಭ ವಿಧಾನ ಅಡಿಕೆಗೆ ಮಾತ್ರೆ ಹಾಕಿ ದಾಸ್ತಾನು ಇಡುವುದು. ಈಚೆಗೆ ಕೆಲವು ಸಮಯಗಳಿಂದ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ಅಡಿಕೆಗೆ ಹಾಕುವ ಮಾತ್ರೆಯಿಂದಾಗಿಯೇ ಅಡಿಕೆ ಹಾನಿಕಾರಕವಾಗುತ್ತಿದೆ ಎನ್ನುವುದು ಚರ್ಚೆಯ ವಿಷಯ. ಹಾಗಿದ್ದರೆ ಏನು ಮಾಡಬಹುದು ಪರ್ಯಾಯ ಎನ್ನುವುದಕ್ಕೆ ಉತ್ತರ ಇದ್ದಿರಲಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಈ ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. (ರಾಮ್‌ ಕಿಶೋರ್‌ ಮಂಚಿ ಅವರ ಸಂದರ್ಶನದ ಯೂಟ್ಯೂಬ್‌ ಲಿಂಕ್‌ ಇಲ್ಲಿದೆ…..)

Advertisement
Advertisement

Advertisement

ಪಿಂಗಾರ ಸಂಸ್ಥೆಯು ಕಳೆದ ವರ್ಷದಿಂದಲೇ ಈ ಅಧ್ಯಯನ ಆರಂಭ ಮಾಡಿದೆ. ಅಡಿಕೆ ದಾಸ್ತಾನು ಮಾಡಲು ಮಾತ್ರೆಯ ಬದಲಾಗಿ ನೈಟ್ರೋಜನ್‌ ಗ್ಯಾಸ್‌ ಬಳಕೆ ಮಾಡಿದೆ. ದಾಸ್ತಾನು ಕೋಣೆಯ ಒಳಗಡೆ ಗಾಳಿಯಾಡದಂತೆ ಎಚ್ಚರಿಸಿ ವಹಿಸಿ, ದಾಸ್ತಾನು ಕೊಠಡಿಯ ಒಳಗೆ ನೈಟ್ರೋಜನ್‌ ಗ್ಯಾಸ್‌ ತುಂಬಿಸುವ ಮೂಲಕ ಯಾವುದೇ ಕೀಟಗಳು ಕ್ರಿಯಾಶೀಲವಾಗದಂತೆ ಮಾಡುವ ಕೆಲಸವನ್ನು ಮಾಡಿದೆ. ಹೀಗಾಗಿ ಅಡಿಕೆ ಯಾವುದೇ ರಾಸಾಯನಿಕ ಇಲ್ಲದೆಯೇ ಗುಣಮಟ್ಟ ಕಾಯ್ದುಕೊಂಡಿರುವುದು  ಪಿಂಗಾರ ಸಂಸ್ಥೆ ಗಮನಿಸಿದೆ. ಇದೀಗ ಬೆಳೆಗಾರರಿಗೂ ಈ ಮಾಹಿತಿ ನೀಡಿ, ಮುಂದೆ ಆಸಕ್ತ ಕೃಷಿಕರ ಅಡಿಕೆಯನ್ನೂ ದಾಸ್ತಾನು ಇರಿಸಲು ಹೆಜ್ಜೆ ಇರಿಸಿದೆ.

Advertisement

ರಾಮ್‌ ಕಿಶೊರ್‌ ಮಂಚಿ

ಈ ಪ್ರಯತ್ನ ಎಲ್ಲೆಡೆಯೂ ಮಾಡಬಹುದಾಗಿದೆ. ಆಹಾರ ಪದಾರ್ಥಗಳ ರಕ್ಷಣೆ, ದಾಸ್ತಾನುನಲ್ಲಿಯೂ ಬಳಕೆ ಮಾಡಬಹುದು  ಎಂದು ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಹೇಳಿದ್ದಾರೆ. ಅಡಿಕೆಯು ಯಾವುದೇ ಹಾನಿಯಾಗದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. ವಿವಿಧ ಬಗೆಯ ಅಡಿಕೆಯನ್ನು ಈ ಪ್ರಯೋಗದಲ್ಲಿ ಒಳಪಡಿಸಲಾಗಿದೆ, ಎಲ್ಲಾ ಬಗೆಯ ಅಡಿಕೆಯೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು  ಹೇಳುತ್ತಾರೆ ರಾಮ್‌ ಕಿಶೋರ್‌ ಮಂಚಿ.

 

Advertisement
Advertisement
ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಡಿಕೆ ಬೆಳೆಗಾರರಿಗೆ ಮಾಹಿತಿ…| ಅಡಿಕೆ ಹಾಳಾಗದಂತೆ ಮಾತ್ರೆ ಹಾಕಬೇಡಿ | ಪಿಂಗಾರ ಸಂಸ್ಥೆ ಮಾಡಿರುವ ಅಧ್ಯಯನ ಇಲ್ಲಿದೆ.. |"

Leave a comment

Your email address will not be published.


*