ಪ್ರಜಾಪ್ರಭುತ್ವದಲ್ಲಿ ಹಣಕ್ಕಾಗಿ ಯಾರೂ ರಾಜಕೀಯಕ್ಕೆ ಬರಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹಣದ ದುರಾಸೆಯಿಂದ ಯಾವ ಚುನಾವಣೆಗೂ ಸ್ಪರ್ಧಿಸಬಾರದು, ಬದಲು ಪ್ರಾಮಾಣಿಕವಾಗಿ ಜನರ ಸೇವೆ ನಡೆಸುವುದಿದ್ದರೆ ರಾಜಕೀಯಕ್ಕೆ ಬನ್ನಿ ಎಂದು ಕರೆ ನೀಡಿದರು. ಸದನದಲ್ಲಿ ಆಡಳಿತ-ವಿಪಕ್ಷಗಳ ವಿಚಾರದಲ್ಲಿ ಸಭಾತ್ಯಾಗ ನಡೆದಾಗಲೇ ಪ್ರಮುಖ ಮಸೂದೆಗಳು ಚರ್ಚೆ ಇಲ್ಲದೆಯೇ ಅಂಗೀಕಾರಗೊಳ್ಳುತ್ತವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel