Advertisement
ಸುದ್ದಿಗಳು

ಸಾಕು ಪ್ರಾಣಿಗಳಿಂದ ತೊಂದರೆ ಉಂಟಾದರೆ ಮಾಲಕರಿಗೆ ದಂಡ |

Share

ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ನೋಯ್ಡಾ ಪ್ರಾಧಿಕಾರವು ಸಾಕುಪ್ರಾಣಿಗಳಿಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ರೂಪಿಸಿದೆ.  ಸಾಕುಪ್ರಾಣಿಗಳಿಂದ ತೊಂದರೆ ಉಂಟಾದರೆ, ಮಾಲಕರು 10,000 ರೂ. ದಂಡ ಪಾವತಿಸಬೇಕಾಗುತ್ತದೆ.

ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ಶ್ವಾನ  ಅಥವಾ ಬೆಕ್ಕುಗಳನ್ನು ಮುಂದಿನ ವರ್ಷ ಜನವರಿ 31 ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ ಯಾವುದೇ ಅನಾಹುತ ಉಂಟಾದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಗರದಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ.

ನೋಯ್ಡಾ ಪ್ರಾಧಿಕಾರದ ಹೊಸ ನೀತಿಯ ಪ್ರಕಾರ, ಸಾಕು ನಾಯಿಗಳು ಅಥವಾ ಬೆಕ್ಕುಗಳ ನೋಂದಣಿಯು ಜನವರಿ 31, 2023 ರವರೆಗೆ ಕಡ್ಡಾಯವಾಗಿದೆ. ನೋಂದಣಿಯಾಗದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ. ಅಷ್ಟೇ ಅಲ್ಲದೆ ಸಾಕು ನಾಯಿಗಳಿಗೆ ಕ್ರಿಮಿನಾಶಕ ಅಥವಾ ಆ್ಯಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿಯ ಸಭೆಯಲ್ಲಿ, ಬೀದಿ ನಾಯಿಗಳು / ಸಾಕು ಬೆಕ್ಕುಗಳಿಗೆ ನೋಯ್ಡಾ ಪ್ರಾಧಿಕಾರದ ನೀತಿಯನ್ನು ರೂಪಿಸುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನೋಯ್ಡಾ ಪ್ರದೇಶಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಾಧಿಕಾರವು ಈ ನೀತಿಯನ್ನು ನಿರ್ಧರಿಸಿದೆ ಎಂದು ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ರಿತು ಮಹೇಶ್ವರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

18 hours ago

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

2 days ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

2 days ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

3 days ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

3 days ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

3 days ago