ಭಾರತದ ವಾಯವ್ಯ ಭಾಗದಲ್ಲಿ ಪಾಕಿಸ್ತಾನದ ಮೂಲಕ ಭಾರಿ ಶೀತ ಮಾರುತಗಳು ಬೀಸುತ್ತಿರುವ ಪರಿಣಾಮ, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜನವರಿ 23ರಿಂದ ವಾತಾವರಣದ ಉಷ್ಣಾಂಶ ತೀವ್ರವಾಗಿ ಕುಸಿಯುವ ಸಾಧ್ಯತೆ ಇದ್ದು ಹಿಮಪಾತ ಕೂಡಾ ಸಂಭವಿಸುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ವಾಯುಭಾರ ಕುಸಿತವೂ ಉಂಟಾಗುವ ಲಕ್ಷಣಗಳು ಕಂಡುಬಂದಿವೆ.
ಇದೇ ವೇಳೆ, ಅರಬ್ಬಿ ಸಮುದ್ರದ ಮೂಲಕ ಉತ್ತರ ಭಾರತದ ಕಡೆಗೆ ಬೀಸುವ ತೇವಾಂಶಭರಿತ ಗಾಳಿಯ ಪರಿಣಾಮ, ದೆಹಲಿ, ಹರಿಯಾಣ, ಪಂಜಾಬ್, ರಾಜಸ್ತಾನ, ಗುಜರಾತ್, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಕೆಲವು ಭಾಗಗಳಲ್ಲಿ ಜನವರಿ 24 ಮತ್ತು 25ರಂದು ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ದಕ್ಷಿಣ ಭಾರತಕ್ಕೆ ಮಳೆಯ ಸೂಚನೆ: ಬಂಗಾಳಕೊಲ್ಲಿಯಲ್ಲಿ ಉಷ್ಣ ಮಾರುತಗಳ ಪರಿಚಲನೆ (Anti-Cyclonic Circulation) ಉಂಟಾಗುವ ಲಕ್ಷಣಗಳು ಕಂಡುಬಂದಿದ್ದು, ತಮಿಳುನಾಡು ಮೂಲಕ ಬೀಸುವ ತೇವಾಂಶಭರಿತ ಗಾಳಿಯ ಪರಿಣಾಮದಿಂದ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಜನವರಿ 24ರಿಂದ 26ರವರೆಗೆ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. The Rural Mirror Epaper & Date : 2026-01-21 (Page 4) https://epaper.theruralmirror.com/hd.php?date=2026-01-21&page=4
ಶೀತ ಮಾರುತ ಹಾಗೂ ಅಸಮಯ ಮಳೆಯ ಪರಿಣಾಮದಿಂದ ಬೆಳೆಗಳಿಗೆ ಹಾನಿ, ರಸ್ತೆ ಸಂಚಾರಕ್ಕೆ ಅಡಚಣೆ, ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ



