ವಿವಿಧ ಶೈಲಿಗಳ ನಡುವೆ ಹೊಸತನದ ಭಾಗವತರ ಕೊಂಡಿಯಾಗಿ ಯಕ್ಷಗಾನ ರಂಗ ಸಾಗಿಸಿದವರು ಪದ್ಯಾಣ ಗಣಪತಿ ಭಟ್ ಅವರು ಕಲಾವಿದನಾಗಿಯೂ ಅಭಿಜಾತ ಕಲಾವಿದನಾಗಿಯೂ ಬೆಳೆದವರು. ಅನೇಕರನ್ನು ಬೆಳೆಸಿದವರು ಪದ್ಯಾಣ ಗಣಪತಿ ಭಟ್ ಎಂದು ನ್ಯಾಯವಾದಿ ಗಿರೀಶ್ ಭಟ್ ಮುಳಿಯಾಲ ಹೇಳಿದರು.
ಅವರು ಗುತ್ತಿಗಾರಿನ ವಳಲಂಬೆಯಲ್ಲಿ ಯಕ್ಷಕಲಾಭಿಮಾನಿ ಮಿತ್ರರ ವತಿಯಿಂದ ನಡೆದ ಯಕ್ಷಗಾನ ಗಾನಾರ್ಚನೆ ಕಾರ್ಯಕ್ರಮದಲ್ಲಿ “ಪದ್ಯಾಣ ಗಣಪತಿ ಭಟ್ ” ಅವರಿಗೆ ನುಡಿನಮನ ಸಲ್ಲಿಸಿದರು. ಪದಯಾನದ ಚಿಗುರು ಹೆಮ್ಮರವಾಗಿ ಬೆಳೆದದ್ದು ಮಾತ್ರವಲ್ಲ ಅನೇಕರನ್ನು ಬೆಳೆಯಿಸಿದ್ದಾರೆ ಕೂಡಾ. ಪದ್ಯಾಣ ಎಂಬ ಶಬ್ದದಲ್ಲಿಯೇ ಪದ್ಯ ಎನ್ನುವ ಭಾವವೂ ಇದೆ, ಹೀಗಾಗಿ ವಿವಿಧ ಶೈಲಿಗಳ ನಡುವೆ ಹೊಸತನದ ಅಧ್ಯಯನದಲ್ಲಿ ನಿರತರಾಗಿ ಹೊಸಶೈಲಿಯ ಜೊತೆಗೆ ಪರಿಪಕ್ವವಾದ ಪದಯಾನ ಮಾಡಿದ್ದಾರೆ ಎಂದರು.
ಸೂಕ್ತವಾದ ರಾಗ ಅಳವಡಿಕೆ, ಪಕ್ಕವಾದ್ಯದವರೊಂದಿಗೆ ಕಸರತ್ತು ಇತ್ಯಾದಿಗಳಲ್ಲೂ ಪ್ರೌಢಿಮೆ ಮೆರೆದವರು. ಸಂಘಟನೆ ದೃಷ್ಟಿಯಿಂದಲೂ ಸಹಭಾಗಿತ್ವ ನೀಡುವ ಪದ್ಯಾಣರು , ಒಡನಾಡಿಯಾಗಿ ಕಲಾವಿದರನ್ನು ಮಾತನಾಡಿಸುವವರಾಗಿದ್ದರು. ಯಕ್ಷಗಾನ ರಂಗದಲ್ಲಿ ಪದ್ಯಾಣರು ಅಭಿಜಾತ ಎನಿಸಿಕೊಂಡವರು, ಕಲೆಯನ್ನು ಧಾರೆ ಎರೆದು ಬೆಳೆಸುವವರು ಆಗಿದ್ದರು, ಅಂತಹ ಮೇರು ವ್ಯಕ್ತಿತ್ವ ಇಲ್ಲವಾಗಿರುವುದು ಯಕ್ಷರಂಗಕ್ಕೆ ತುಂಬಲಾರದ ನಷ್ಟ, ಆದರೆ ಅದೇ ಪರಂಪರೆ ಮುಂದುವರಿಯಲಿ ಎಂದು ಗಿರೀಶ್ ಮುಳಿಯಾಲ ಹೇಳಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…