ಆರೋಗ್ಯ

ಪೋಷಕಾಂಶಗಳ ಕಣಜ ಹುಣಸೆ ಹಣ್ಣು : ಇದರಲ್ಲಿರುವ ಔಷಧೀಯ ಗುಣಗಳು ಹೇರಳ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹುಣಸೆ ಹಣ್ಣು ಶರ್ಕರಪಿಷ್ಟ, ನಾರಿನಾಂಶ, ಕೊಬ್ಬು, ಸಸಾರಜನಕ, ಜೀವಸತ್ವಗಳಾದ ಬಿ6, ‘ಸಿ’, ‘ಕೆ’, ‘ಇ’, ಖನಿಜಂಶಗಳಾದ ಸುಣ್ಣ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಸೋಡಿಯಂ, ಸತು ಸೇರಿದಂತೆ ವಿವಿಧ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.

Advertisement

ಹುಣಸೆ ಹಣ್ಣಿನಲ್ಲಿರುವ ತಿರುಳು ಪಿಷ್ಟರಹಿತ ಪಾಲಿಸ್ಯಾಕರೈಡ್ ಅಥವಾ ಹೆಮಿಸೆಲ್ಯುಲೋಸ್, ಮ್ಯೂಸಿಲೇಜ್, ಪೆಕ್ಟಿನ್ ಮತ್ತು ಟ್ಯಾನಿನ್‌ಗಳಂತಹ ಆಹಾರಗಳು ನಾರಿನ ಸಮೃದ್ಧ ಮೂಲವಾಗಿದೆ. ೧೦೦ ಗ್ರಾಂ. ಹಣ್ಣಿನ ತಿರುಳು ಹೆಚ್ಚು ನಾರಿನಾಂಶವನ್ನು ಒದಗಿಸುತ್ತದೆ. ಆಹಾರದಲ್ಲಿನ ನಾರಿನಾಂಶವು ಕರುಳಿನಲ್ಲಿ ಪಚನಕ್ರಿಯೆಯನ್ನು ಪ್ರಚೋದಿಸಿ ಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮಲಬದ್ಧತೆಯನ್ನು ತಡೆಯುತ್ತದೆ.

ತಿರುಳಿನಲ್ಲಿರುವ ನಾರಿನಾಂಶವು ಕೊಲೆಸ್ಟ್ರಾಲ್‌ನಿಂದ ಉತ್ಪತ್ತಿಯಾದ ಪಿತ್ತ ಲವಣಗಳನ್ನು ಬಂಧಿಸುತ್ತವೆ. ಇದರಿಂದ ಕೊಲೊನ್‌ನಲ್ಲಿ ಅವುಗಳ ಮರುಹೀರಿಕೆ ಕಡಿಮೆಯಾಗುತ್ತದೆ. ಆ ಮೂಲಕ ದೇಹದಿಂದ “ಕೆಟ್ಟ” ಅಥವಾ ಎಲ್‌ಡಿ.ಎಲ್. ಕೊಲೆಸ್ಟರಾಲ್ ಮಟ್ಟವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದರೆ, ಹುಣಸೆಹಣ್ಣು ಟಾರ್ಟಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಟಾರ್ಟಾರಿಕ್ ಆಮ್ಲವು ಆಹಾರಕ್ಕೆ ಹುಳಿ ರುಚಿಯನ್ನು ನೀಡುತ್ತದೆ ಮತ್ತು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ, ದೇಹವನ್ನು ಹಾನಿಕಾರಕ ಫ್ರೀ ರಾಡಿಕಲ್ಸ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಹುಣಸೆ ಹಣ್ಣು ಲಿಮೋನೆನ್, ಜೆರೇನಿಯೊಲ್, ಸಫ್ರೋಲ್, ಸಿನಾಮಿಕ್ ಆಮ್ಲ, ಮಿಥೈಲ್ ಲಿಸಿಲೇಟ್, ಪಿರಜಿನ್ ಮತ್ತು ಆಲ್ಕೆöಲ್ದಿಯಾಜೋಲ್‌ಗಳಂತಹ ಅನೇಕ ಬಾಷ್ಪಶೀಲ ಫೈಟೊಕೆಮಿಕಲ್‌ಗಳನ್ನು ಒಳಗೊಂಡಿದೆ. ಈ ಸಂಯುಕ್ತಗಳು ಹುಣಸೆ ಹಣ್ಣಿನ ಔಷಧೀಯ ಗುಣಗಳಿಗೆ ಕಾರಣವಾಗಿದೆ.

ಹುಣಸೆ ಹಣ್ಣು ತಾಮ್ರ, ಪೊಟ್ಯಾಷಿಯಂ, ಸುಣ್ಣ, ಕಬ್ಬಿಣ, ಸೆಲೆನಿಯಮ್, ಸತು ಮತ್ತು ಮೆಗ್ನೀಷಿಯಂನಂತಹ ಖನಿಜಗಳ ಉತ್ತಮ ಮೂಲವಾಗಿದೆ. ಪೊಟ್ಯಾಷಿಯಂ ಜೀವಕೋಶ ಮತ್ತು ದೇಹದ ದ್ರವಗಳ ಒಂದು ಪ್ರಮುಖ ಅಂಶವಾಗಿದ್ದು, ಅದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಕಬ್ಬಿಣವು ಅವಶ್ಯಕವಾಗಿದೆ ಮತ್ತು ಸೈಟೋಕ್ರೋಮ್ ಆಕ್ಸಿಡೇಸ್ ಕಿಣ್ವಗಳಿಗೆ ಸಹ-ಅಂಶವಾಗಿದೆ.

ಹುಣಸೆ ಹಣ್ಣಿನಲ್ಲಿ ಥಯಾಮಿನ್, ಜೀವಸತ್ವ ‘ಎ’, ಪೋಲಿಕ್ ಆಮ್ಲ, ರೈಬೋಫ್ಲೇವಿನ್, ನಿಯಾಸಿನ್ ಮತ್ತು ಜೀವಸತ್ವ ‘ಸಿ’ ಸೇರಿದಂತೆ ಹಲವು ಪ್ರಮುಖ ಜೀವಸತ್ವಗಳು ಸಮೃದ್ಧವಾಗಿದೆ. ಈ ಜೀವಸತ್ವಗಳಲ್ಲಿ ಹೆಚ್ಚಿನವು ಮಾನವನ ದೇಹದಲ್ಲಿನ ಕಿಣ್ವ ಚಯಾಪಚಯ ಕ್ರಿಯೆಗೆ ಉತ್ಕರ್ಷಣ ನಿರೋಧಕ ಮತ್ತು ಸಹ-ಅಂಶದ ಕಾರ್ಯಗಳನ್ನು ನಿರ್ವಹಿಸುತ್ತವೆ.

ಹುಣಸೆ ಹಣ್ಣಿನಲ್ಲಿ ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ (ಹೆಚ್.ಸಿ.ಎ.) ಅಧಿಕವಾಗಿದೆ. ಈ ಅಂಶವು ಕೊಬ್ಬಿನ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಈ ಆಮ್ಲವು ಸಿಟ್ರಿಕ್ ಆಮ್ಲವನ್ನು ಹೋಲುತ್ತದೆ. ಈ ಗುಣವು ವಿವಿಧ ಸಸ್ಯಗಳಲ್ಲಿ ಇರುವುದನ್ನು ನಾವು ಗಮನಿಸಬಹುದು, ಆದರೆ ಹುಣಸೆ ಹಣ್ಣಿನಲ್ಲಿ ಇದು ಸಮೃದ್ಧವಾಗಿರುವುದನ್ನು ಕಾಣಬಹುದು.

ಹೈಡ್ರೋಕ್ಸಿ ಸಿಟ್ರಿಕ್ ಆಮ್ಲ ದೇಹದಲ್ಲಿ ಇರುವ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ. ಕೊಬ್ಬನ್ನು ಉತ್ತೇಜಿಸುವ ಕಿಣ್ವಗಳನ್ನು ನಿಯಂತ್ರಿಸುವುದು. ಸೆರೊಟೋನಿನ್ ನರಸಂವಾಹಕ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಹೈಡ್ರೋಕ್ಸಿ ಸಿಟ್ರಿಕ್ ಆಮ್ಲವು ಹಸಿವನ್ನು ನಿಗ್ರಹಿಸುವುದು. ದೀರ್ಘಕಾಲದ ವ್ಯಾಯಾಮದ ಸಮಯದಲ್ಲಿ ಇದು ಕೊಬ್ಬನ್ನು ಕೂಡ ಕರಗಿಸುತ್ತದೆ.

ಹುಣಸೆ ಹಣ್ಣಿನಲ್ಲಿರುವ ನಾರಿನಾಂಶ ಮತ್ತು ‘ಬಿ’ಜೀವಸತ್ವಗಳು ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸಲು ತುಂಬಾ ಸಹಕಾರಿಯಾಗಿವೆ. ಹುಣಸೆ ಹಣ್ಣಿನ ಸೇವನೆಯು ಹಸಿವನ್ನು ನಿಯಂತ್ರಣದಲ್ಲಿಡಲು ಹಾಗೂ ದೇಹದ ತೂಕ ಕಡಿಮೆಗೊಳಿಸಲು ಸಹಕಾರಿಯಾಗಿದೆ.

ಹುಣಸೆ ಹಣ್ಣಿನಲ್ಲಿ ಅಲ್ಫಾ-ಅಮೈಲೇಸ್ ಇನ್‌ಹಿಬಿಟರ್ ಇದ್ದು, ಇದು ದೇಹದಲ್ಲಿ ಕಾರ್ಬೋಹೈಡ್ರೇಟ್ ಕರಗುವಿಕೆಯನ್ನು ತಡೆಯುತ್ತದೆ. ಇದರಿಂದ ಕಾರ್ಬೋಹೈಡ್ರೇಟ್ ಕರಗಿ ಸಕ್ಕರೆಯಾಗಿ ಪರಿವರ್ತನೆಯಾಗದಂತೆ ತಡೆಯುತ್ತದೆ. ಆದ್ದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವು ಹಿಡಿತದಲ್ಲಿರುವಂತೆ ಮಾಡುತ್ತದೆ.

ಹುಣಸೆ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ನಿಯಂತ್ರಣದಲ್ಲಿಡುವುದಲ್ಲದೇ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ. ಹುಣಸೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಷಿಯಂ, ನಾರಿನಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

ಇದರಲ್ಲಿರುವ ನಾರಿನಾಂಶವು ದೇಹದಲ್ಲಿರುವ ಕೊಲೆಸ್ಟರಾಲ್‌ನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹಾಗೆಯೇ ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿಯಂತ್ರಣದಲ್ಲಿಡುತ್ತವೆ.

ಹುಣಸೆ ಹಣ್ಣಿನ ಇತರೆ ಪ್ರಯೋಜನಗಳೆಂದರೆ, ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ನಿವಾರಿಸುವುದು. ಹುಣಸೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿರುವುದರಿಂದ ವಿಟಮಿನ್ ‘ಸಿ’ ಕೊರತೆಯ ಕಾಯಿಲೆಗಳಿಗೆ ರಾಮಬಾಣ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ

ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…

1 hour ago

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

8 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

16 hours ago

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…

17 hours ago

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

2 days ago