ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

May 3, 2026
7:10 AM
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗಿದೆ.

ಈರುಳ್ಳಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಜೇನುನೊಣಗಳ ಪರಾಗಸ್ಪರ್ಶ ಅತ್ಯಂತ ಪರಿಣಾಮಕಾರಿ ವಿಧಾನವಾಗಿದ್ದು, ರೈತರಿಗೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ತಜ್ಞ ಡಾ. ಈಶ್ವರಪ್ಪ  ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಟ್ಟಿಗೆ ಮಾಚೇನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಗಳಲ್ಲಿ ‘ಜೇನುನೊಣಗಳ ಪರಾಗಸ್ಪರ್ಶ’ ಕುರಿತ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪರಾಗಸ್ಪರ್ಶದ ಮಹತ್ವ ಏನು? :  ಈರುಳ್ಳಿ ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶ (cross pollination) ಅಗತ್ಯವಾಗಿದ್ದು, ಜೇನುನೊಣಗಳು ಹೂವಿನಿಂದ ಹೂವಿಗೆ ಪರಾಗವನ್ನು ಸಾಗಿಸುವ ಮೂಲಕ ಉತ್ತಮ ಪರಾಗಸ್ಪರ್ಶವನ್ನು ನೆರವೇರಿಸುತ್ತವೆ. ಇದರಿಂದ ಪ್ರತಿ ಹೂಗುಚ್ಛದಿಂದ ಹೆಚ್ಚಿನ ಬೀಜ ಉತ್ಪಾದನೆ, ಉತ್ತಮ ಗುಣಮಟ್ಟದ ಬೀಜ ಹಾಗೂ ಇಳುವರಿ ಹೆಚ್ಚಳವಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಜೇನುನೊಣಗಳ ಪಾತ್ರ:  ಹೂವಿನಿಂದ ಹೂವಿಗೆ ಪರಾಗ ಸಾಗಣೆ, ಬೆಳೆ ಉತ್ಪಾದನೆಗೆ ನೈಸರ್ಗಿಕ ಸಹಾಯ ಹಾಗೂ ರಾಸಾಯನಿಕ ಅವಲಂಬನೆ ಕಡಿತಗಳಿಗೆ ಜೇನುನೊಣಗಳು ಕಾರಣವಾಗುತ್ತವೆ. ಇದರಿಂದ ರೈತರಿಗೆ ಇಳುವರಿ ಹೆಚ್ಚಳ, ಹೆಚ್ಚುವರಿ ಆದಾಯ,  ನೈಸರ್ಗಿಕ ವಿಧಾನದಲ್ಲಿ ಉತ್ಪಾದನೆ,  ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯವಿದೆ. ಹೀಗಾಗಿ ಜೇನುನೊಣಗಳ ಪರಾಗಸ್ಪರ್ಶ ವಿಧಾನವನ್ನು ಅನುಸರಿಸುವ ಮೂಲಕ ಈರುಳ್ಳಿ ಬೆಳೆಯಲ್ಲಿ ಉತ್ತಮ ಉತ್ಪಾದನೆ ಸಾಧ್ಯ ಅಲ್ಲದೆ  ರೈತರು ಜೇನು ಸಾಕಾಣಿಕೆಯನ್ನು ಕೃಷಿಯ ಜೊತೆಗೆ ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು.

Beekeeping expert Dr. Ishwarappa highlighted that bee pollination significantly improves onion yield by enhancing cross-pollination and seed production. Demonstrations were conducted in Bengaluru Rural district to educate farmers.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ
June 14, 2026
3:27 PM
by: ಸಾಯಿಶೇಖರ್ ಕರಿಕಳ
ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ
June 14, 2026
12:52 PM
by: ದ ರೂರಲ್ ಮಿರರ್.ಕಾಂ
ಬ್ರಿಕ್ಸ್ ‘ಇಂದೋರ್ ಘೋಷಣೆ’ ಅಂಗೀಕಾರ – ಜಾಗತಿಕ ಕೃಷಿ ಸಹಕಾರಕ್ಕೆ ಹೊಸ ದಿಕ್ಕು
June 14, 2026
6:54 AM
by: ದ ರೂರಲ್ ಮಿರರ್.ಕಾಂ
2026ರಲ್ಲಿ ‘ಸೂಪರ್ ಎಲ್‌ನಿನೊ’ ಎಚ್ಚರಿಕೆ – ಭಾರತದ ಮುಂಗಾರು ಮತ್ತು ಕೃಷಿಗೆ ಹೊಸ ಸವಾಲು?
June 13, 2026
9:19 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror