ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

April 28, 2023
11:01 AM

ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿ, ಸ್ಥಳಾಂತರಗೊಂಡಿದ್ದ ಎರಡನೇ ತಂಡದ ಭಾರತೀಯರು ಗುರುವಾರ ಮಧ್ಯಾಹ್ನ ಮುಂಬೈ ತಲುಪಿದ್ದಾರೆ. ಇಂದು ಮುಂಜಾನೆ ಜಿದ್ದಾದಿಂದ ಟೇಕಾಫ್ ಆದ ಭಾರತೀಯ ವಾಯುಪಡೆಯ ವಿಮಾನದ ಮೂಲಕ 246 ಭಾರತೀಯರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಮರಳಿ ಕರೆತರಲಾಗಿದೆ.

ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ಸುಡಾನ್‌ನಿಂದ 246 ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಮುಂಬೈ ತಲುಪಿದೆ. ನಿನ್ನೆ 360 ಭಾರತೀಯರ ಮೊದಲ ಬ್ಯಾಚ್ ನವದೆಹಲಿ ತಲುಪಿತ್ತು. ಮತ್ತೊಂದು ಆಪರೇಷನ್ ಕಾವೇರಿ ವಿಮಾನ ಮುಂಬೈಗೆ ಆಗಮಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

Advertisement
Advertisement

“ಆಪರೇಷನ್ ಕಾವೇರಿ” ಎಂಬುದು ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ. ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೈನಿಕ ಗುಂಪುಗಳು ಘರ್ಷಣೆ ನಡೆಯುತ್ತಿದ್ದು, ಕರ್ನಾಟಕದವರೂ ಸೇರಿದಂತ ದೇಶದ ಸಾವಿರಾರು ಮಂದಿ ಸಿಲುಕಿದ್ದರು.

Advertisement

246 ಮಂದಿ ಭಾರತೀಯರಿದ್ದ ಯುದ್ಧ ವಿಮಾನ ಗುರುವಾರ ಬೆಳಿಗ್ಗೆ 11 ಗಂಟೆಗೆ ಜಿದ್ದಾದಿಂದ ಹೊರಟಿತ್ತು. ಮಧ್ಯಾಹ್ಮ 3.30ರ ವೇಳೆಗೆ ಮುಂಬೈ ತಲುಪಿದೆ ಎಂದು ಅಧಿಕಾರಿಯೊಬ್ಬರು ಎಎನ್​ಐಗೆ ತಿಳಿಸಿದ್ದಾರೆ.

ಸುಡಾನ್‌ನಲ್ಲಿ ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ 72 ಗಂಟೆಗಳ ಕದನ ವಿರಾಮ ಘೋಷಿಸಲಾಗಿದೆ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸುವಲ್ಲಿ ನಿರತವಾಗಿವೆ. ಭಾರತೀಯರನ್ನು ಆಪರೇಷನ್​ ಕಾವೇರಿ ಕಾರ್ಯಾಚರಣೆ ಅಡಿ ಪೋರ್ಟ್​ ಸುಡಾನ್​ಗೆ ಬಸ್ಸುಗಳ ಮೂಲಕ ಕರೆತಂದು, ಅಲ್ಲಿಂದ ಸೌದಿ ಅರೇಬಿಯಾದ ಜಿದ್ದಾಗೆ ಯುದ್ದ ವಿಮಾನಗಳ ಮೂಲಕ ಕರೆತಂದು ರಕ್ಷಿಸಲಾಗುತ್ತದೆ.

Advertisement

ಸೋಮವಾರ ಆರಂಭಿಸಲಾದ ‘ಆಪರೇಷನ್ ಕಾವೇರಿ’ ಮಿಷನ್ ಅಡಿಯಲ್ಲಿ ಭಾರತವು ಜಿದ್ದಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದೆ. ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ಎಲ್ಲಾ ಭಾರತೀಯರನ್ನು ಸೌದಿ ಅರೇಬಿಯಾಕ್ಕೆ ಕರೆದೊಯ್ಯಲಾಗಿದೆ.

ಭಾರತೀಯ ವಾಯುಪಡೆಯ (IAF) ಎರಡು ಮಿಲಿಟರಿ ಸಾರಿಗೆ ವಿಮಾನಗಳು ಸುಡಾನ್‌ನಿಂದ 500 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿದರೆ, ನೌಕಾಪಡೆಯ ಹಡಗು ಸಂಘರ್ಷದಿಂದ ಪೀಡಿತ ಸ್ಥಳದಿಂದ  278 ನಾಗರಿಕರನ್ನು ರಕ್ಷಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಒಟ್ಟು ಭಾರತೀಯರ ಸಂಖ್ಯೆ ಸುಮಾರು 530 ಎಂದು ತಿಳಿದುಬಂದಿದೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror