ಸಾವಯವ ಕೃಷಿ ಇಂದಿನ ಅವಶ್ಯಕತೆಯೇ ಆಗಿದೆ ಎಂದು ‘ಭಾರತದ ಗ್ರೀನ್ ಹೀರೋ’ ಎಂದು ಖ್ಯಾತರಾಗಿರುವ ಆರ್.ಕೆ. ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾದ ‘ವ್ಯಸ್ತ ಜೀವನ – ಸ್ವಸ್ಥ ಭೋಜನ’ ಆರೋಗ್ಯಕ್ಕಾಗಿ ಪಾರಂಪರಿಕ ಆಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಪ್ರಕೃತಿಗೆ ಏನು ಕೊಡುತ್ತೇವೆಯೋ ಅದೇ ನಮಗೆ ವಾಪಾಸಾಗಿ ಸಿಗುತ್ತದೆ ಎಂದು ಹೇಳಿದರು.
ಪ್ರಕೃತಿಯ ಮಡಿಲಿಗೆ ವಿಷವನ್ನು ಹಾಕಿದ ಪರಿಣಾಮವಾಗಿ ಇಂದು ನಾವು ತಿನ್ನುವ ಆಹಾರ, ಕುಡಿಯುವ ನೀರು, ಇರುವ ಮಣ್ಣು ಮತ್ತು ಉಸಿರಾಡುವ ಗಾಳಿಯೂ ವಿಷಪೂರಿತವಾಗಿದೆ ಎಂದು ಎಚ್ಚರಿಸಿದರು. ನಾವು ಬದಲಾದರೆ ಮಾತ್ರ ವ್ಯವಸ್ಥೆ ಬದಲಾಗುತ್ತದೆ; ಆಗ ಗ್ರಾಮ, ರಾಜ್ಯ ಮತ್ತು ದೇಶವೂ ಬದಲಾಗಬಹುದು ಎಂದು ಅವರು ತಿಳಿಸಿದರು.
ಇನ್ನು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ ಆರ್.ಕೆ. ನಾಯರ್, ಸಾವಯವ ಕೃಷಿ ಹಾಗೂ ಆರೋಗ್ಯಕರ ಆಹಾರದ ಅಗತ್ಯತೆಯನ್ನು ಮಕ್ಕಳಿಗೆ ತಿಳಿಹೇಳಬೇಕಾದ ಜವಾಬ್ದಾರಿ ನಮ್ಮದೆ ಎಂದು ಕರೆ ನೀಡಿದರು.
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…
ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ…
ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…